ಜಾರ್ಜ್ಗೆ ಮಹಿಳಾ ಆಯೋಗದ ನೋಟಿಸ್
ಬೆಂಗಳೂರಿನಲ್ಲಿ ಕಾಲ್ಸೆಂಟರ್ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಸಾಮೂಹಿಕವಲ್ಲ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ಗೆ...

Published On :
ನವದೆಹಲಿ: ಬೆಂಗಳೂರಿನಲ್ಲಿ ಕಾಲ್ಸೆಂಟರ್ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಸಾಮೂಹಿಕವಲ್ಲ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಸ್ವಯಂ ಪ್ರೇರಣೆಯಿಂದ ನೋಟೀಸ್ ಜಾರಿ ಮಾಡಿರುವುದಾಗಿ ಆಯೋಗದ ಅಧ್ಯಕ್ಷ ಲಲಿತಾ ಕುಮಾರಮಂಗಳಂ ತಿಳಿಸಿದ್ದಾರೆ. ``ಅತ್ಯಾಚಾರ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ. ಹಾಗಾಗಿಯೇ ಲಘುವಾಗಿ ಮಾತನಾಡಿದ್ದಾರೆ.
ಸ್ವಯಂಪ್ರೇರಣೆಯಿಂ ದ ನೋಟಿಸ್ ಜಾರಿ ಮಾಡಿದ್ದೇವೆ. ಏನು ಉತ್ತರಿಸುತ್ತಾರೋ ನೋಡೋಣ'' ಎಂದು ಲಲಿತಾ ಕುಮಾರಮಂಗಳಂ ತಿಳಿಸಿದ್ದಾರೆ. ಕೆ.ಜೆ. ಜಾರ್ಜ್ ಅವರು ಇಬ್ಬರು ವ್ಯಕ್ತಿಗಳು ಮಾತ್ರ ಅಪರಾಧದಲ್ಲಿ ಭಾಗಿಯಾಗಿದ್ದರಿಂದ ಅದನ್ನು ಸಾಮೂಹಿಕ ಅತ್ಯಾಚಾರ ಎನ್ನಲಾಗದು, 3-4 ಜನರಿರಬೇಕು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅತ್ಯಾಚಾರRapeKJ GeorgeKarnatakaಕರ್ನಾಟಕnoticeNational Commission for Womenರಾಷ್ಟ್ರೀಯ ಮಹಿಳಾ ಆಯೋಗನೋಟೀಸ್ಕೆಜೆ ಜಾರ್ಜ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


