ಭಾರತಕ್ಕೆ 45 ಅತ್ಯಾಧುನಿಕ ಯುದ್ಧ ವಿಮಾನಗಳು ಅನಿವಾರ್ಯ
ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ವಾಯುಸೇನೆಗೆ ಪ್ರಸ್ತುತ 45 ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದು ಸಂಸತ್ತಿನ ರಕ್ಷಣಾ ಆಯೋಗ ತಿಳಿಸಿದೆ...

ನವದೆಹಲಿ: ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ವಾಯುಸೇನೆಗೆ ಪ್ರಸ್ತುತ 45 ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದು ಸಂಸತ್ತಿನ ರಕ್ಷಣಾ ಆಯೋಗ ತಿಳಿಸಿದೆ.
ಪ್ರಸ್ತುತ ಸಮಯದಲ್ಲಿ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಭಾರತಕ್ಕೆ ಅಪಾಯವಿದೆ. ಹೀಗಾಗಿ ಈ ಅಪಾಯವನ್ನು ದಿಟ್ಟವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆಗೆ ಕೂಡಲೇ 45 ಅತ್ಯಾಧುನಿಕ ಯುದ್ಧ ವಿಮಾನಗಳ ಅಗತ್ಯವಿದೆ. ಆದರೆ ಪ್ರಸ್ತುತ ಕೇವಲ 35 ಯುದ್ಧ ವಿಮಾನಗಳ ಮಾತ್ರ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 10 ಯುದ್ಧ ವಿಮಾನಗಳ ಅಗತ್ಯತೆ ಇದೆ ಎಂದು ಸಂಸತ್ತಿನ ರಕ್ಷಣಾ ಆಯೋಗ ತಿಳಿಸಿದೆ.
ಈ ಹಿಂದೆ ರಷ್ಯಾದಿಂದ ಆಮದು ಮಾಡಿಕೊಂಡಿದ್ದ ಮಿಗ್ 21 ಯುದ್ಧ ವಿಮಾನಗಳ ಅವಧಿ ಕೂಡ 2022ಕ್ಕೆ ಮುಕ್ತಾಯವಾಗಲಿದ್ದು, ಅಗ ಮತ್ತೆ ವಾಯುಸೇನೆಗೆ 25 ಯುದ್ಧ ವಿಮಾನಗಳ ಅಗತ್ಯತೆ ಕಾಡಲಿದೆ. ಹೀಗಾಗಿ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಯುದ್ಧ ವಿಮಾನಗಳನ್ನು ಖರೀದಿಸಬೇಕು ಎನ್ನುವುದು ವಾಯುಸೇನೆಯ ವಾದವಾಗಿದೆ. 1983ರಲ್ಲಿ ಸರ್ಕಾರದಿಂದ ಅನುಮೋದನೆಗೊಂಡು ರಚನೆಯಾದ ಸರ್ಕಾರಿ ಸ್ವಾಮ್ಯದ ಜಿಇ ಏವಿಯೇಷನ್ ಸಂಸ್ಥೆ ಇಲ್ಲಿಯವರೆಗೂ ಕೇವಲ ಒಂದೇ ಒಂದು ಎಲ್ ಸಿಎ (light combat aircraft) ಲಘು ಯುದ್ಧ ವಿಮಾನವನ್ನು ನಿರ್ಮಿಸಿಕೊಟ್ಟಿದ್ದು, ಅದರ ಕಾರ್ಯ ಕೂಡ ಪ್ರಸ್ತುತ ಪ್ರಶ್ನಾರ್ಥಕವಾಗಿದೆ.
ವಾಯುಸೇನೆಯ ನಿವೃತ್ತ ಏರ್ ಮಾರ್ಷಲ್ ಎಂ.ಮಥೇಶ್ವರನ್ ಅವರು ತಿಳಿಸಿರುವಂತೆ ಎಲ್ ಸಿಎ ಮಾದರಿಯ ಯುದ್ಧ ವಿಮಾನಗಳು ಹೇಳಿದಂತೆ ತೂಕದಲ್ಲಿ ಲಘುವಾಗಿಲ್ಲ. ಅಲ್ಲದೆ ಅವುಗಳ ಇಂಧನ ದಕ್ಷತೆ ಕೂಡ ತೃಪ್ತಿಕರವಾಗಿಲ್ಲ. ಹೀಗಾಗಿ ಸುರಕ್ಷತೆ ಇಲ್ಲಿ ಪ್ರಶ್ನಾರ್ಥಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಭಾರತೀಯ ಸೇನೆಯನ್ನು ಆಧುನೀಕರಿಸುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ಅದನ್ನು ಸಾಧಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


