ಪ್ರಧಾನ ಸುದ್ದಿ

ಉದ್ಯಮಿಗಳಾಗುವುದು ಪ್ರತಿಭಾವಂತ ಯುವ ಭಾರತೀಯರ ಆದ್ಯತೆ : ಮೋದಿ

ಪ್ರತಿಭಾವಂತ ಯುವ ಭಾರತೀಯರು ಹೆಚ್ಚು ಸಂಬಳ ನೀಡುವ ಉದ್ಯೋಗವನ್ನು ಎದುರು ನೋಡದೇ ಸ್ವಯಂ ಉದ್ಯಮಿಗಳಾಗುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ

ಉದ್ಯಮಿಗಳಾಗುವುದು ಪ್ರತಿಭಾವಂತ ಯುವ ಭಾರತೀಯರ ಆದ್ಯತೆ : ಮೋದಿ
ನರೇಂದ್ರ ಮೋದಿ
Published On :

ಬೆಂಗಳೂರು: ಪ್ರತಿಭಾವಂತ ಯುವ ಭಾರತೀಯರು ಹೆಚ್ಚು ಸಂಬಳ ನೀಡುವ ಉದ್ಯೋಗವನ್ನು ಎದುರು ನೋಡದೇ ಸ್ವಯಂ ಉದ್ಯಮಿಗಳಾಗುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆದ ಇಂಡೋ-ಜರ್ಮನ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಯುವಕರು ಇತ್ತೀಚಿನ ದಿನಗಳಲ್ಲಿ ಕೇವಲ ಹೆಚ್ಚು ಸಂಬಳದ ಉದ್ಯೋಗಕ್ಕೆ ಆದ್ಯತೆ ನೀಡದೇ, ರಿಸ್ಕ್ ತೆಗೆದುಕೊಂಡು ಸ್ವಯಂ ಉದ್ಯಮಿಗಳಾಗುತ್ತಿದ್ದಾರೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಭಾರತ ಉದ್ಯಮಗಳ ಸ್ಥಾಪನೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದೆ ಎಂದಿದ್ದಾರೆ.
ಭಾರತದ ಪ್ರತಿಭೆಗಳು ತಂತ್ರಜ್ಞಾನವನ್ನು ನೀಯಂತ್ರಿಸುತ್ತಿವೆ.ಹಾರ್ಡ್ ವೇರ್ ನ್ನು ವಿಶ್ವಾದ್ಯಂತ ಚಲಿಸುವಂತೆ ಮಾಡುತ್ತಿರುವುದು ಭಾರತದ ಸಾಫ್ಟ್ ವೇರ್ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ  ಮೆಕ್ ಇನ್ ಇಂಡಿಯಾ ಅಭಿಯಾನಕ್ಕೆ ಒತ್ತು ಕೊಡುವುದನ್ನು ಮರೆಯದ ಪ್ರಧಾನಿ ನರೇಂದ್ರ ಮೋದಿ, ಹೊರಗಿನ ಬಂಡವಾಳ, ತಂತ್ರಜ್ಞಾನ, ಪ್ರತಿಭೆಗಳನ್ನು ಪಡೆಯುವುದಕ್ಕೆ ಭಾರತ ಈ ಹಿಂದೆಂದಿಗಿಂತಲೂ  ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ಆರ್ಥಿಕತೆ ಕುಂಠಿತವಾಗಿದ್ದರೂ ಭಾರತ ಬಂಡವಾಳ ಹೂಡಿಕೆಗೆ ಉಜ್ವಲ ತಾಣವಾಗಿದೆ. ಭಾರತವನ್ನು ಉದ್ಯಮ ಸ್ನೇಹಿಯನ್ನಾಗಿಸುವುದಕ್ಕೆ ಕಳೆದ 15 ತಿಂಗಳಿಂದ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕೈಗಾರಿಕೆ ಹಾಗೂ ಮೂಲಸೌಕರ್ಯಕ್ಕೆ ಅಗತ್ಯವಿರುವ ಅನುಮೋದನೆ ಹಾಗೂ ಪರವಾನಗಿಗಳನ್ನು ತ್ವರಿತವಾಗಿ ನೀಡಲಾಗುತ್ತಿದ್ದು ಉದ್ಯಮಿಗಳಿಗೆ ಬಂಡವಾಳ ಹೂಡಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.   
"ಭಾರತದ ಹೂಡಿಕೆದಾರರನ್ನು ಜರ್ಮನಿ ಸ್ವಾಗತಿಸುತ್ತದೆ, ಡಿಜಿಟಲೈಜೇಷನ್ ಕ್ಷೆತ್ರದಲ್ಲಿ ಭಾರತ-ಜರ್ಮನಿಗೆ ಉತ್ತಮ ಭವಿಷ್ಯವಿದೆ ಎಂದು ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.