ಆಮೀರ್‍ಖಾನ್‍ರನ್ನು ಕ್ಷಮಿಸೋಣ: ಶಿವರಾಜ್‍ಕುಮಾರ್
ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಅಸಹಿಷ್ಣುತೆ ಕುರಿತು ಪರೋಕ್ಷವಾಗಿ ಕಿಡಿ ಕಾರಿದ ಶಿವಣ್ಣ ಆಮೀರ್ ಖಾನ್ ದೇಶ ಬಿಡುತ್ತೇನೆ ಎನ್ನುವ ಹೇಳಿಕೆ ಕ್ಷಮಿಸೋಣ, ಮುನ್ನಡೆಯೋಣ. ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ಮೂಲ ಮಂತ್ರ ಎಂದು ಚಿತ್ರನಟ ಡಾ.ಶಿವರಾಜ್ ಕುಮಾರ್...

ಬೆಂಗಳೂರು; ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಅಸಹಿಷ್ಣುತೆ ಕುರಿತು ಪರೋಕ್ಷವಾಗಿ ಕಿಡಿ ಕಾರಿದ ಶಿವಣ್ಣ ಆಮೀರ್ ಖಾನ್ ದೇಶ ಬಿಡುತ್ತೇನೆ ಎನ್ನುವ ಹೇಳಿಕೆ ಕ್ಷಮಿಸೋಣ, ಮುನ್ನಡೆಯೋಣ. ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ಮೂಲ ಮಂತ್ರ ಎಂದು ಚಿತ್ರನಟ ಡಾ.ಶಿವರಾಜ್ ಕುಮಾರ್ ಹೇಳಿದರು.
ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದ್ದ ಬೆಳ್ಳಿಹೆಜ್ಜೆಯಲ್ಲಿ ನಮ್ಮೊಂದಿಗೆ ಡಾ. ಶಿವರಾಜ್ ಕುಮಾರ್ ಅವರು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಇದೀಗ ದೇಶದಲ್ಲಿ ಅಲ್ಲಲ್ಲಿ ಜಾತಿ, ಧರ್ಮದ ಹೊಡೆದಾಟ ನಡೆಯುತ್ತಿವೆ. ಈ ಹಿಂದೆ ಇಂತಹ ವಾತಾವರಣ ಇದ್ದಿರಲಿಲ್ಲ. ನಾವೆಲ್ಲರು ಒಂದಾಗಿದ್ದೆವು. ಇಂತಹ ಘಟನೆಗಳನ್ನು ಮಾಡುವುದು ಸರಿಯಲ್ಲ. ನಮ್ಮ ಅಪ್ಪಾಜಿಯನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದಾಗ ನಮ್ಮ ಕುಟುಂಬದ ಜೊತೆಗೆ ಇಡಿ ದೇಶದ ಸಿನಿಮಾ ಉದ್ಯಮ ನೆರವಿಗೆ ನಿಂತಿತ್ತು.
ರಾಜ್ ಅವರು ಆರೋಗ್ಯವಾಗಿ ಮನೆಗೆ ವಾಪಸ್ ಬರಲಿ ಎಂದು ಪ್ರತಿದಿನ ಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದವರು ಪ್ರಾಥನೆ ಮಾಡಿದರೆ, ಹಿಂದೂಗಳು ಹೋಮ ಹವನ ಮಾಡುತ್ತಿದ್ದರು. ನಮ್ಮ ದೇಶದಲ್ಲಿ ವಿಶ್ವದಲ್ಲೇ ಅದ್ಭುತವಾದ ಸಂಸ್ಕೃತಿ ಇದೆ. ಎಲ್ಲಾ ಧರ್ಮವರನ್ನು ಒಗ್ಗೂಡಿಸಿಕೊಂಡು ಹೋಗುವುದು ಈ ಮಣ್ಣಿನ ಸೊಗಡಾಗಿದೆ ಎಂದು ತಿಳಿಸಿದರು.
ಇತ್ತೀಚಿಗೆ ದೇಶದಲ್ಲಿ ರೈತರ ಬಗೆಗಿನ ಗೌರವ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ರೈತರು ಕಷ್ಟಪಟ್ಟು ನಮಗೆ ಅನ್ನ ಬೆಳೆದು ಕೊಡುತ್ತಾರೆ. ಕೃಷಿಕರಿಗೆ ಮರ್ಯಾದೆ ಕೊಡಬೇಕು ಎಂದು ನಮ್ಮ ತಂದೆ ಹೇಳುತ್ತಿದ್ದರು. ರೈತರ ಕುರಿತಾಗಿ ನಿರ್ಮಿಸಿದ `ಸನ್ ಆಫ್ ಬಂಗಾರದ ಮನುಷ್ಯ' ಸದ್ಯ-ದಲ್ಲೇ ತೆರೆಗೆ ಬರಲಿದೆ ಎಂದು ಹೇಳಿದರು. ನನ್ನ ಪ್ರಾಣ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ನಾಡಿನ ಜಲ, ನೀರಿನ ವಿಷಯದಲ್ಲಿ ನನ್ನ ಪ್ರಾಣ ಹೋದರು ಚಿಂತೆಯಿಲ್ಲ. ನಾನು ಹೋರಾಟಕ್ಕೆ ಧುಮುಕುತ್ತೇನೆ ಎಂದು ಭರವಸೆ ನೀಡಿದರು. ನಮ್ಮ ತಂದೆ ನನ್ನನ್ನು ಸಾಮಾನ್ಯರ ಜೊತೆ ಬೆರೆಯಲೆಂದೇ ಮದ್ರಾಸ್‍ನಲ್ಲಿ ಕಾಲೇಜಿಗೆ ಕಳಿಸಿದ್ದರು. ಅಲ್ಲಿ ನಾನು ಮುತ್ತುರಾಜನ ಮಗನಾಗಿ ಸಾಮಾನ್ಯರಂತೆ ಬಸ್‍ನಲ್ಲಿ ಪ್ರಯಾಣ ಮಾಡುವಾಗ ಎಲ್ಲರ ಜೊತೆಗೂ ಬೆರೆಯಲು ಅವಕಾಶ ಸಿಕ್ಕಿತು.
ಅಪ್ಪಾಜಿ ಬಿಡುವು ಸಿಕ್ಕಾಗ ನಮ್ಮ ಜೊತೆ ಕಬಡ್ಡಿ ಆಡುತ್ತಿದ್ದರು. ಕುಟುಂಬ ಸಮೇತ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅದೇ ರೀತಿ ನಾನು ನನ್ನ ಕುಟುಂಬದ ಜೊತೆ ಬೆರೆಯುತ್ತಿದ್ದೇನೆ. ಆದರೆ ಅಪ್ಪಾಜಿ ಜೊತೆ ನನ್ನನ್ನು ಹೋಲಿಸ ಬೇಡಿ, ಅವರ ಎತ್ತರಕ್ಕೆ ಬೆಳೆಯಲು ನನ್ನಿಂದ ಸಾಧ್ಯವಿಲ್ಲ. ಅವರು ಒಂದು ರೀತಿ ಆಕಾಶದಲ್ಲಿನ ಮೋಡದ ತರ, ಅವರನ್ನು ಪಾಲೋ ಮಾಡುವುದಕ್ಕೆ ಆಗುವುದಿಲ್ಲ. ಚಿತ್ರರಂಗಕ್ಕೆ ಒಬ್ಬರೆ ಅಣ್ಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್. ರೋಷನ್ ಬೇಗ್, ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು, ನಿದೇರ್ಶಕ ದೊರೆ ಭಗವಾನ್, ಚಿತ್ರನಟಿ ಸುಧಾರಾಣಿ, ನಿರ್ದೇಶಕ ಚಿ. ಗುರುದತ್, ಪತ್ರಕರ್ತ ಸದಾಶಿವ ಶೆಣೈ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


