ದೆಹಲಿ ವಿಧಾನಸಭೆಯಿಂದ ಎಎಪಿ ಶಾಸಕ ಪುಷ್ಕರ್ ವಜಾ
ದೆಹಲಿ ಚಳಿಗಾಲದ ವಿಧಾನಸಭಾ ಅಧಿವೇಶನದಿಂದ ಎಎಪಿ ಶಾಸಕ ಪಂಕಜ್ ಪುಷ್ಕರ್ ಅವರನ್ನು ಎರಡು ದಿನಗಳ ಕಾಲ ವಜಾ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ

ನವದೆಹಲಿ: ದೆಹಲಿ ಚಳಿಗಾಲದ ವಿಧಾನಸಭಾ ಅಧಿವೇಶನದಿಂದ ಎಎಪಿ ಶಾಸಕ ಪಂಕಜ್ ಪುಷ್ಕರ್ ಅವರನ್ನು ಎರಡು ದಿನಗಳ ಕಾಲ ವಜಾ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನರ್ಸರಿ ನೇಮಕಾತಿಯಲ್ಲಿ ೨೫% ಮೀಸಲಾತಿ ನೀಡುವುದರ ಬಗ್ಗೆ ಚರ್ಚೆ ಮಾಡುವಂತೆ ಅವರು ಆಗ್ರಹಿಸಿದ್ದರು.
ಅವರನ್ನು ಮಾರ್ಷಲ್ ಗಳು ವಿಧಾಸಭೆಯಿಂದ ಹೊರಹಾಕಿದ್ದಾರೆ.
ಈ ನಡೆಯಿಂದ ಕುಪಿತರಾಗಿರುವ ಪುಷ್ಕರ್ ವಿಧಾನಸಭೆಯ ಹೊರಗೆ ಧರಣಿ ನಡೆಸಿ ಈ ನಡೆಯನ್ನು ಅನೈತಿಕ ಎಂದಿದ್ದಾರೆ.
"ನಾನು ವಿಧಾನಸಭೆಯ ಕಲಾಪಗಳಿಗೆ ಅಡ್ಡಿಪಡಿಸಲಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನರ್ಸರಿ ನೇಮಕಾತಿಯಲ್ಲಿ ೨೫% ಮೀಸಲಾತಿ ನೀಡುವುದರ ಬಗ್ಗೆ ಹೈಕೋರ್ಟ್ ತೀರ್ಪನ್ನು ಚರ್ಚಿಸುವಂತೆ ಕೇಳಿಕೊಂಡೆ" ಎಂದು ದೆಹಲಿ ತಿಮಾರ್ಪುರ ಕ್ಷೇತ್ರದ ಶಾಸಕ ಹೇಳಿದ್ದಾರೆ.
"ನನ್ನನ್ನು ಮಾರ್ಷಲ್ ಗಳು ಹೊರ ಹಾಕಿದ್ದು ಹಾಗು ಎರಡು ದಿನಗಳ ಕಾಲ ವಜಾ ಮಾಡಿದ್ದು ಅನೈತ ನಡೆ" ಎಂದು ಕೂಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


