ಪ್ರಧಾನ ಸುದ್ದಿ

ಸಹಿ ಸಂಗ್ರಹಕ್ಕೆ ಕೈ ಶಾಸಕರಿಂದಲೇ ಆಕ್ರೋಶ

ಉಪಲೋಕಾಯುಕ್ತ ಪದಚ್ಯುತಿಗೆ ಸರ್ಕಾರ ಅನುಸರಿಸಿದ ಕ್ರಮ ಸರಿಯಾಗಿಲ್ಲ ಎಂದು ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ...

ಸಹಿ ಸಂಗ್ರಹಕ್ಕೆ ಕೈ ಶಾಸಕರಿಂದಲೇ ಆಕ್ರೋಶ
ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಮತ್ತು ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಉಪಲೋಕಾಯುಕ್ತ ಪದಚ್ಯುತಿಗೆ ಸರ್ಕಾರ ಅನುಸರಿಸಿದ ಕ್ರಮ ಸರಿಯಾಗಿಲ್ಲ ಎಂದು ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಇದಕ್ಕೆ ಮುಖ್ಯಮಂತ್ರಿ ಹಾರಿಕೆ ಉತ್ತರ ನೀಡಿದ್ದಾರೆ. ಪ್ರಮುಖ ವಿಧೇಯಕಗಳು ಹಾಗೂ ಪಕ್ಷದ ನೀತಿನಿಲುವುಗಳ ಬಗ್ಗೆ ಚರ್ಚಿಸಲು ಗುರುವಾರ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆ  ಶಿವಮೊಗ್ಗ ನಗರ ಶಾಸಕ ಪ್ರಸನ್ನಕುಮಾರ್ ಅವರು, ಉಪಲೋಕಾಯುಕ್ತರ ಪದಚ್ಯುತಿ ವಿಚಾರ ಪ್ರಸ್ತಾಪಿಸಿದರು. ``ನಾವು ಸರ್ಕಾರದ ಪರ ನಿಲ್ಲಬೇಕೆಂಬ ಏಕೈಕ ಕಾರಣಕ್ಕೆ ಒಪ್ಪಿಗೆ  ಸೂಚಿಸಿದ್ದೇವೆ. ಆದರೆ, ಯಾವ ಕಾರಣಕ್ಕೆ ನೀವು ಸಹಿ ತೆಗೆದುಕೊಂಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು ಎಂದು,'' ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್‍ನ ಅನೇಕ ಶಾಸಕರು  ಸಹಮತ ವ್ಯಕ್ತಪಡಿಸಿದರು ಎನ್ನಲಾಗಿದೆ.

ಆದರೆ, ತಮ್ಮ ಕ್ರಮ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ``ಸುಭಾಷ್ ಅಡಿ ವಿರುದ್ಧ ಮೊದಲು ಆರೋಪ ಮಾಡಿದವರು ಅವರದ್ದೇ ಸಮುದಾಯದವರು. ಹೀಗಾಗಿ ನೀವು ಈ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಆಗ ಪಕ್ಷಕ್ಕೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲ,'' ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜಾರ್ಜ್ ಹತ್ತಿರ ಕೇಳಿಕೊಳ್ಳಿ ಎಂದ ಸಿಎಂ
ಅಡಿ ಪದಚ್ಯತಿ ಮತ್ತು ಸಹಿ ಸಂಗ್ರಹದ ಕುರಿತು ಸಿಎಲ್‍ಪಿ ಸಭೆಯಲ್ಲಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದಾಗ, ಸಿದ್ದರಾಮಯ್ಯ ಸದಸ್ಯರಿಗೆ ಖಾರವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ``ಸಹಿ  ಸಂಗ್ರಹದ ಬಗ್ಗೆ ನಿಮಗೆ ಹೇಳಬೇಕಿಲ್ಲ. ಮಾಹಿತಿ ಬೇಕಿದ್ದರೆ ಜಾರ್ಜ್, ಟಿ.ಬಿ. ಜಯಚಂದ್ರ ಬಳಿ ಕೇಳಿ,'' ಎಂದಿದ್ದಾರೆ ಎನ್ನಲಾಗಿದೆ. ಸಿಎಂ ವರ್ತನೆ ಕುರಿತು ಹಲವಾರು ಶಾಸಕರು ಬೇಸರ  ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.