ಭಾರತೀಯರು ಹೋರಾಟಕ್ಕೆ ಅಸಮರ್ಥರು ಎಂದ ಐಎಸ್
ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾದ ಮುಸ್ಲಿಮರು ಇರಾಕ್ ಮತ್ತು ಸಿರಿಯಾದಂತಹ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಹೋರಾಡಲು...

Published On :
ನವದೆಹಲಿ: ``ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾದ ಮುಸ್ಲಿಮರು ಇರಾಕ್ ಮತ್ತು ಸಿರಿಯಾದಂತಹ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಹೋರಾಡಲು ಅಸಮರ್ಥರು ಎಂದು ಐಎಸ್ ಉಗ್ರ ಸಂಘಟನೆ ಪರಿಗಣಿಸಿದೆ. ಅಲ್ಲದೆ, ಅರಬ್ ಹೋರಾಟಗಾರರಿಗೆ ಹೋಲಿಸಿದರೆ ದಕ್ಷಿಣ ಏಷ್ಯಾದವರು ತುಂಬಾ ಕೆಳದರ್ಜೆಯವರು ಎಂದು ಹೇಳಿರುವ ಐಎಸ್, ಇವರನ್ನು ಸುಲಭವಾಗಿ ಮರುಳುಗೊಳಿಸಿ, ಆತ್ಮಾಹುತಿ ದಾಳಿಗೆ ಬಳಸಲಾಗುತ್ತಿದೆ'' ಎಂದಿದೆ.ವಿದೇಶಿ ಏಜೆನ್ಸಿಗಳು ಸಿದ್ಧಪಡಿಸಿದ ಗುಪ್ತಚರ ವರದಿಯೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ. ಜತೆಗೆ, ಈ ವರದಿಯನ್ನು ಭಾರತದ ಭದ್ರತಾ ಸಂಸ್ಥೆಗಳಿಗೆ ಒದಗಿಸಲಾಗಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾ, ನೈಜೀರಿಯಾ ಹಾಗೂ ಸುಡಾನ್‍ನಿಂದ ಹೋದವರನ್ನು ಐಎಸ್ ಕೀಳಾಗಿ ಕಾಣುತ್ತಿದೆ. ಉಗ್ರ ಸಂಘಟನೆಯಲ್ಲಿ ಶ್ರೇಣಿ ವ್ಯವಸ್ಥೆ ಗಾಢವಾಗಿದೆ. ಅರಬ್ ಉಗ್ರರಿಗೆ
ಅಧಿಕಾರಿ ವರ್ಗದಂತಹ ಉನ್ನತ ಹುದ್ದೆ ನೀಡಲಾಗುತ್ತಿದೆ. ಜತೆಗೆ, ಅವರಿಗೆ ಅತ್ಯುತ್ತಮ ಶಸ್ತ್ರಾಸ್ತ್ರಗಳು, ಸಲಕರಣೆಗಳು, ವಸತಿ ವ್ಯವಸ್ಥೆ ಮತ್ತು ವೇತನ ನೀಡಲಾಗುತ್ತಿದೆ. ಆದರೆ, ದಕ್ಷಿಣ ಏಷ್ಯಾದವರಿಗೆ ಕಳಪೆ ಶಸ್ತ್ರಾಸ್ತ್ರಗಳನ್ನು ಒದಗಿಸಿ, ಕಡಿಮೆ ವೇತನ ನೀಡಲಾಗುತ್ತದೆ. ಅಲ್ಲದೆ, ಇಂಥವರನ್ನು ಹೆಚ್ಚಾಗಿ ಆತ್ಮಾಹುತಿ ದಾಳಿಗಳಿಗೆ ಬಳಸಲಾಗುತ್ತದೆ. ಸ್ಫೋಟಕ ತುಂಬಿದ ವಾಹನದಲ್ಲಿ ಇವರನ್ನು ಕಳುಹಿಸಿ, ತಾವು ಹೇಳಿದಪ್ರದೇಶ ತಲುಪಿದ ಬಳಿಕ ಇಂಥ ಸಂಖ್ಯೆಗೆ ಕರೆ ಮಾಡಿ ಎಂದು ಸೂಚಿಸಲಾಗುತ್ತದೆ. ಅವರುಅಲ್ಲಿ ತಲುಪಿ, ದೂರವಾಣಿಯಲ್ಲಿ ಆ ಸಂಖ್ಯೆ ಒತ್ತಿದೊಡನೆ ವಾಹನ ಸ್ಫೋಟಗೊಳ್ಳುತ್ತದೆ ನ ಎಂದೂ ವರದಿಯಲ್ಲಿ ಹೇಳಲಾಗಿದೆ. ಬೆಂಗಳೂರಿನ ಮೊಹಮ್ಮದ್ ಉಮರ್ ಸುಭಾನ್, ಫೈಜ್ ಮಸೂದ್, ಭಟ್ಕಳದ ಮೌಲಾ ನಾ ಅಬ್ದುಲ್ ಖಾದಿರ್ ಸುಲ್ತಾನ್ ಅಮ್ರಾರ್
ಸೇರಿ ಒಟ್ಟು 23 ಭಾರತೀಯರು ಐಎಸ್‍ಸೇರಿದ್ದಾರೆ. ಈ ಪೈಕಿ 6 ಮಂದಿ ಮೃತಪಟ್ಟದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


