ತುಂತುರು ಮಳೆಗೆ ನಡುಗಿದ ನಗರ
ಬೆಳಗ್ಗೆಯಿಂದಲೇ ಶುರುವಾದ ತುಂತುರು ಮಳೆಯಿಂದಾಗಿ ಭಾನುವಾರ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಜೆ ಇದ್ದುದರಿಂದ ಸಂಚಾರ ದಟ್ಟಣೆಆಗಲಿಲ್ಲ. ಆದರೆ, ರಜೆಯ ಮೋಜು ಸವಿಯಲು ಮಳೆ ಬಿಡಲಿಲ್ಲ. ತಮ್ಮ ವ್ಯಾಪಾರಕ್ಕೆ ಮಳೆ ಅಡ್ಡಿಯಾಯಿತು ಎಂದು ವ್ಯಾಪಾರಿಗಳೂ...

ಬೆಂಗಳೂರು: ಬೆಳಗ್ಗೆಯಿಂದಲೇ ಶುರುವಾದ ತುಂತುರು ಮಳೆಯಿಂದಾಗಿ ಭಾನುವಾರ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಜೆ ಇದ್ದುದರಿಂದ ಸಂಚಾರ ದಟ್ಟಣೆ
ಆಗಲಿಲ್ಲ. ಆದರೆ, ರಜೆಯ ಮೋಜು ಸವಿಯಲು ಮಳೆ ಬಿಡಲಿಲ್ಲ. ತಮ್ಮ ವ್ಯಾಪಾರಕ್ಕೆ ಮಳೆ ಅಡ್ಡಿಯಾಯಿತು ಎಂದು ವ್ಯಾಪಾರಿಗಳೂ ಗೊಣಗುವಂತಾಯಿತು.
ಹಾಗೆ ನೋಡಿದರೆ ಭಾನುವಾರ ನಗರದಲ್ಲಿ ಸುರಿದಿದ್ದು ಕೇವಲ 5 ಮಿ.ಮೀ. ಮಳೆ ಮಾತ್ರ. ಆದರೆ, ಚಳಿಯ ಪ್ರಮಾಣ ಹೆಚ್ಚಿತ್ತು. ಮೋಡ ಕವಿದುಕೊಂಡಿದ್ದರಿಂದ ಮಂಕು ವಾತಾವರಣ ತುಂಬಿಕೊಂಡಿತ್ತು. ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಪ್ರಭಾವ ನಗರವನ್ನು ಇನ್ನೂ ಮೂರು ದಿನಗಳ ಕಾಲ ಕಾಡಲಿದ್ದು, ಸೋಮವಾರ ಜೋರು ಮಳೆ ಬರುವ ಸಾಧ್ಯತೆಯಿದೆ.
ದಿಢೀರ್ ಬದಲಾದ ವಾತಾವರಣದಿಂದಾಗಿ ನಗರದಲ್ಲಿ ನೆಗಡಿ, ಕೆಮ್ಮು ಹೆಚ್ಚಿದ್ದು, ವಾತಾವರಣ ಹೀಗೆ ಮುಂದುವರಿದರೆ, ಶೀತಬಾಧೆಗೆ ಸಿಲುಕುವವರ ಸಂಖ್ಯೆ ಹೆಚ್ಚಲಿದೆ ಎನ್ನುತ್ತಾರೆ ತಜ್ಞರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


