ಚಿನ್ನ ಸಂಬಂಧಿತ ಮೂರು ಯೋಜನೆಗಳಿಗೆ ಮೋದಿ ಚಾಲನೆ
ಚಿನ್ನ ಸಂಬಂಧಿ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಒಂದು ಕಡೆ ಅಶೋಕ ಚಕ್ರ ಮತ್ತೊಂದು ಕಡೆ ಮಹಾತ್ಮ ಗಾಂಧಿ ಇರುವ 'ಭಾರತ ಚಿನ್ನದ ನಾಣ್ಯ'

ನವದೆಹಲಿ: ಚಿನ್ನ ಸಂಬಂಧಿ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಒಂದು ಕಡೆ ಅಶೋಕ ಚಕ್ರ ಮತ್ತೊಂದು ಕಡೆ ಮಹಾತ್ಮ ಗಾಂಧಿ ಇರುವ 'ಭಾರತ ಚಿನ್ನದ ನಾಣ್ಯ'ವನ್ನು ಕೂಡ ಬಿಡುಗಡೆ ಮಾಡಿದ್ದಾರೆ.
೫ ಗ್ರಾಂ ತೂಕದ ೧೫೦೦೦ ಚಿನ್ನದ ನಾಣ್ಯಗಳನ್ನೂ ೧೦ ಗ್ರಾಂ ತೂಗುವ ೨೦೦೦೦ ಚಿನ್ನದ ನಾಣ್ಯಗಳನ್ನು ಮತ್ತು ೨೦ ಗ್ರಾಂ ನ ೩೭೫೦ ಚಿನ್ನದ ಬಾರುಗಳನ್ನು ಎಂ ಎಂ ಟಿ ಸಿ ಅಂಗಡಿಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಭಾರತೀಯರ ಮನೆಗಳಲ್ಲಿ ಸುಮ್ಮನೆ ಬಿದ್ದಿರುವ ೨೦,೦೦೦ ಟನ್ ನಷ್ಟು ಚಿನ್ನ ಬಳಕೆಗೆ ಬರಲಿ ಎಂಬುದು ಮತ್ತೊಂದು ಯೋಜನೆಯ ಉದ್ದೇಶ ಎನ್ನಲಾಗಿದೆ. ಬಳಸದೆ ಇರುವ ಚಿನ್ನದಿಂದ ಹಣ ಪಡೆಯಬಹುದಾದ ಈ ಒಂದು ಯೋಜನೆಯಲ್ಲಿ (ಗೋಲ್ಡ್ ಮಾನೆಟೈಸೇಶನ್ ಸ್ಕೀಮ್) ಕನಿಷ್ಟ ೩೦ ಗ್ರಾಂ ಚಿನ್ನದಿಂದ ಪ್ರಾರಂಭಸಿ ಸರ್ಕಾರಿ ಉಳಿತಾಯ ಖಾತೆಯಲ್ಲಿರಿಸಿ ಅದಕ್ಕೆ ಬಡ್ಡಿ ಪಡೆಯಬಹುದಾಗಿದೆ.
ಮತ್ತೊಂದು ಯೋಜನೆಯಾದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ನಲ್ಲಿ, ಚಿನ್ನದಲ್ಲಿ ಹೂಡಿಕೆ ಮಾಡಲಾಗುವ ಸರ್ಕಾರದ ಬಾಂಡ್ ಗಳನ್ನು ಸಾರ್ವಜನಿಕರು ಖರೀದಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


