ಪ್ರಧಾನ ಸುದ್ದಿ

ಮಹದಾಯಿ ಅರ್ಜಿ ಮಧ್ಯಂತರ ಒಪ್ಪಿಗೆ

ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾ„ಕರಣಕ್ಕೆ ಮಧ್ಯಂತರ ಆದೇಶ ಕೋರಿ ಅರ್ಜಿ ಸಲ್ಲಿಸುವುದಕ್ಕೆ ರಾಜ್ಯದ ಕಾನೂನು ಸಲಹೆಗಾರ ಫಾಲಿ ನಾರಿಮನ್ ಅವರು ಒಪ್ಪಿಗೆ ಸೂಚಿಸಿದ್ದಾರೆ...

ಮಹದಾಯಿ ಅರ್ಜಿ ಮಧ್ಯಂತರ ಒಪ್ಪಿಗೆ
(ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಹದಾಯಿ ನ್ಯಾಯಾ„ಕರಣಕ್ಕೆ ಮಧ್ಯಂತರ ಆದೇಶ ಕೋರಿ ಅರ್ಜಿ ಸಲ್ಲಿಸುವುದಕ್ಕೆ ರಾಜ್ಯದ ಕಾನೂನು ಸಲಹೆಗಾರ ಫಾಲಿ ನಾರಿಮನ್ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಕರ್ನಾಟಕದ ಕಾನೂನು ತಜ್ಞರ ತಂಡವು ನ್ಯಾಯಾಧೀಕರಣಕ್ಕೆ ಸಲ್ಲಿಸಬೇಕಾದ ಮಧ್ಯಂತರ ಅರ್ಜಿಯ ಕರಡು ಸಿದಟಛಿಪಡಿಸಿ, ಫಾಲಿ ನಾರಿಮನ್ ಅವರಿಗೆ ಸಲ್ಲಿಸಲಿದೆ. ಅವರು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಿದ ನಂತರವೇ ನ್ಯಾಯಾ„ಕರಣಕ್ಕೆ ಸಲ್ಲಿಸಲಾಗುತ್ತದೆ.

ನವೆಂಬರ್ 23ರಂದು ಮಹಾದಾಯಿ ನ್ಯಾಯಾಧೀಕರಣದ ವಿಚಾರಣೆ ನಡೆಯಲಿದ್ದು ಅದಕ್ಕೂ ಮುನ್ನವೇ ಮಧ್ಯಂತರ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ತೀವ್ರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವುದರಿಂದ ರಾಜ್ಯಕ್ಕೆ ಮಹಾದಾಯಿಯಿಂದ ದಕ್ಕಬೇಕಾದ ನೀರಿನಲ್ಲಿ ಅಲ್ಪ ಪಾಲನ್ನು ಮಾತ್ರ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿ ಮಧ್ಯಂತರ ಆದೇಶ ನೀಡಬೇಕು ಎಂದು ನ್ಯಾಯಾಧೀಕರಣದ ಮುಂದೆ ಮನವಿ ಮಾಡಿಕೊಳ್ಳಲಾಗುತ್ತದೆ. ಏತ ನೀರಾವರಿ ಮೂಲಕ ಕಾಲುವೆಗಳಲ್ಲಿ ನೀರು ಹರಿಸುವ ತಾತ್ಕಾಲಿಕ ಯೋಜನೆ ಜಾರಿಗೆ ಅನುಮತಿ ನೀಡುವಂತೆಯೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕ ಕೊನರೆಡ್ಡಿ, ಸಚಿವರಾದ ಎಂ.ಪಿ.ಪಾಟೀಲ್, ಟಿ.ಬಿ.ಜಯಚಂದ್ರ, ಎಚ್.ಕೆ. ಪಾಟೀಲ್,
ವಿನಯ್ ಕುಲಕರ್ಣಿ ಅವರನ್ನೊಳಗೊಂಡ ನಿಯೋಗವು ಸೋಮವಾರ ಸಂಜೆ ಫಾಲಿ ನಾರಿಮನ್ ಅವರನ್ನು ಭೇಟಿ ಮಾಡಿ ಮುಕ್ಕಾಲು ತಾಸು ಸಮಾಲೋಚನೆ ನಡೆಸಿತು. ನಿಯೋಗವು ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತಿತರ ಸಂಕಷ್ಟಗಳನ್ನು ವಿವರಿಸಿದ ನಂತರವಷ್ಟೆ ಫಾಲಿ ನಾರಿಮನ್ ಅವರು ಮಧ್ಯಂತರ ಅರ್ಜಿ ಸಲ್ಲಿಸಲು ಭಾಗಶಃ ಒಪ್ಪಿದ್ದಾರೆ. ಸೆ.16 ರಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲï ಅವರು ಭೇಟಿ ಮಾಡಿದ್ದಾಗಲೂ ಮಧ್ಯಂತರ ಅರ್ಜಿ ಸಲ್ಲಿಸುವುದಕ್ಕೆ ಫಾಲಿ ನಾರಿಮನ್ ಸಮ್ಮತಿಸಿರಲಿಲ್ಲ.

ಈ ಹಂತದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವುದರಿಂದ ರಾಜ್ಯಕ್ಕೆ ವ್ಯತಿರಿಕ್ತ ತೀರ್ಪು ಬರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಸೋಮವಾರ ಭೇಟಿ ವೇಳೆ, ರಾಜ್ಯದಲ್ಲಿ 136 ತಾಲೂಕುಗಳು ಬರಪೀಡಿತವಾಗಿವೆ. ಉದ್ದೇಶಿತ ಯೋಜನೆಯ ಮಲಪ್ರಭ ವ್ಯಾಪ್ತಿಯಲ್ಲಿ ಎಲ್ಲ ತಾಲೂಕುಗಳು ಬರಪೀಡಿತವಾಗಿವೆ. ಪ್ರತಿ ವರ್ಷವೂ ಈ ಭಾಗದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಮತ್ತಷ್ಟು ವರ್ಷ ಈ ಸಮಸ್ಯೆಗಳನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಆದ್ದರಿಂದ ಕುಡಿಯುವ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ಕೋರಿ ತುರ್ತು ಆದೇಶ ನೀಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಬೇಕು ಎಂದು ನಿಯೋಗವು ಮನವರಿಕೆ ಮಾಡಿತು.

ಮಧ್ಯಂತರ ಅರ್ಜಿ ಸಲ್ಲಿಸುವುದರಿಂದಾಗುವ ಸಾಧಕ ಬಾಧಕಗಳನ್ನು ವಿವರಿಸಿದ ಫಾಲಿ ನಾರಿಮನ್, ಸರಿ ನಿಮ್ಮ ಕಾನೂನು ತಂಡ ಕರಡು ಸಿದಟಛಿಪಡಿಸಲಿ ಎಂದು ನಿಯೋಗಕ್ಕೆ ಸೂಚಿಸಿದ್ದಾರೆ. ಫಾಲಿ ನಾರಿಮನ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಯಾಧೀಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಲು ಫಾಲಿ ನಾರಿಮನ್ ಅವರು ಒಪ್ಪಿದ್ದಾರೆ. ರಾಜ್ಯದ ತಂಡ ಕರಡು ಸಿದ್ಧಪಡಿಸಲಿದೆ. ಅದನ್ನು ನಾರಿಮನ್ ಪರಿಶೀಲಿಸಿ ಅಖೈರುಗೊಳಿಸಿದ ನಂತರ ಸಲ್ಲಿಸುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.