ಪ್ರಧಾನ ಸುದ್ದಿ

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಪ್ರಕರಣ: ಕೇರಳ ಸಿಪಿಐ-ಎಂ ನಾಯಕನಿಗೆ ಹಾಜರಾಗುವಂತೆ ಸಿಬಿಐ ಸೂಚನೆ

ಕಳೆದ ವರ್ಷ ನಡೆದ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಹಿರಿಯ ಸಿಪಿಐ-ಎಂ ನಾಯಕ ಪಿ ಜಯರಾಜನ್ ಅವರು ಜೂನ್ ೨ ರಂದು

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಪ್ರಕರಣ: ಕೇರಳ ಸಿಪಿಐ-ಎಂ ನಾಯಕನಿಗೆ ಹಾಜರಾಗುವಂತೆ ಸಿಬಿಐ ಸೂಚನೆ
ಸಿಪಿಐ-ಎಂ ನಾಯಕ ಪಿ ಜಯರಾಜನ್
Published On :

ತಿರುವನಂತಪುರಮ್: ಕಳೆದ ವರ್ಷ ನಡೆದ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಹಿರಿಯ ಸಿಪಿಐ-ಎಂ ನಾಯಕ ಪಿ ಜಯರಾಜನ್ ಅವರು ಜೂನ್ ೨ ರಂದು ತನಿಖೆಗೆ ಹಾಜರಾಗುವಂತೆ ಸಿಬಿಐ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಜಯರಾಜನ್ ಸದ್ಯ ಕಣ್ಣೂರು ಜಿಲ್ಲೆಯ ಸಿಪಿಐ-ಎಂ ಕಾರ್ಯದರ್ಶಿಯಾಗಿದ್ದಾರೆ.

೧೯೯೯ರಲ್ಲಿ ಜಯರಾಜನ್ ಮೇಲೆ ದಾಳಿ ಮಾಡಿದ್ದ ವ್ಯಕ್ತಿಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಕೆ ಟಿ ಮನೋಜ್ ಕೂಡ ಒಬ್ಬರಾಗಿದ್ದರು. ಆದರೆ ಜಯರಾಜನ್ ಆಗ ಉಳಿದಿದ್ದರು. ನಂತರ ಕನ್ನೂರಿನ ಬಳಿಯ ಖತಿರೂರ್ ನಲ್ಲಿ ಕೆ ಟಿ ಮನೋಜ್ ಮೇಲೆ ೧ ನೇ ಸಪ್ಟಂಬರ್ ೨೦೧೪ ರಂದು ಏಳು ಜನರ ಗುಂಪೊಂದು ದಾಳಿ ಮಾಡಿ ಅವರನ್ನು ಹತ್ಯೆಗೈದಿತ್ತು.

ಈ ದಾಳಿಕೋರರು ಮೊದಲು ಆರ್ ಎಸ್ ಎಸ್ ಕಾರ್ಯಕರ್ತನ ವಾಹನದ ಮೇಲೆ ಬಾಂಬ್ ಎಸೆದು ನಂತರ ಅವರನ್ನು ಹತ್ಯೆಗೈದಿದ್ದರು.

ಇದನ್ನು ಮೊದಲು ತನಿಖೆ ನಡೆಸಿದ ಕೇರಳ ಪೊಲೀಸರು ನಂತರ ಸಿಬಿಐಗೆ ವಹಿಸಿಕೊಟ್ಟಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ೧೯ ಜನರನ್ನು ಆರೋಪಿಗಳು ಎಂದು ಗುರುತಿಸಲಾಗಿದೆ.

ಸಿಪಿಐ-ಎಂ ಮತ್ತು ಬಿಜೆಪಿ-ಆರ್ ಎಸ್ ಎಸ್ ನಡುವಿನ ದ್ವೇಷ ಕಣ್ಣೂರಿನಲ್ಲಿ ಮೊದಲಿನಿಂದಲು ಇದ್ದು, ಇದು ರಾಜಕೀಯ ಕೊಲೆಗಳ ಕೇಂದ್ರ ಭಾಗ ಎಂದು ತಿಳಿಯಲಾಗಿದೆ.  

ಈ ಪ್ರಕರಣದಲ್ಲಿ ಜಯರಾಜನ್ ಜಾಮೀನು ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.