ಪ್ರಧಾನ ಸುದ್ದಿ

ವಿಧಾನಸಭೆಯಲ್ಲಿ ಗೃಹ ಸಚಿವಾಲಯ ಅಧಿಸೂಚನೆಯನ್ನು ಹರಿದುಹಾಕಿದ ಎಎಪಿ

ಕೇಂದ್ರ ಸರ್ಕಾರ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಡುವಿನ ಬಿಕ್ಕಟ್ಟು ಬುಧವಾರ ತೀವ್ರಗೊಂಡಿದ್ದು ದೆಹಲಿ ವಿಧಾನ ಸಭೆಯಲ್ಲಿ ಕೇಂದ್ರದ ವಿರುದ್ಧ

ವಿಧಾನಸಭೆಯಲ್ಲಿ ಗೃಹ ಸಚಿವಾಲಯ ಅಧಿಸೂಚನೆಯನ್ನು ಹರಿದುಹಾಕಿದ ಎಎಪಿ
ವಿಧಾನ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ಕೇಂದ್ರ ಸರ್ಕಾರ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಡುವಿನ ಬಿಕ್ಕಟ್ಟು ಬುಧವಾರ ತೀವ್ರಗೊಂಡಿದ್ದು ದೆಹಲಿ ವಿಧಾನ ಸಭೆಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್ ಕೇಂದ್ರ ಸರ್ಕಾರ "ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದೆ" ಎಂದು ಆರೋಪಿಸಿದ್ದಾರೆ.

ವಿಶೇಷ ಅಧಿವೇಶನದ ಕೊನೆಯ ದಿನವಾದ ನೆನ್ನೆ ವಿಧಾನಸಭೆಯಲ್ಲೇ ಗೃಹಸಚಿವಾಲಯದ ಗೆಜೆಟ್ ಅಧಿಸೂಚನೆಯನ್ನು ಎಎಪಿ ಪಕ್ಷದ ಶಾಸಕನೊಬ್ಬ ಹರಿದು ಬಿಸಾಕಿದ್ದಲ್ಲದೆ, ಉಪ ಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಅದನ್ನು 'ತಾಲಿಬಾನಿ ಅಧಿಸೂಚನೆ' ಎಂದು ಕರೆದ ಘಟನೆ ನಡೆದಿದೆ.

ಕೇಂದ್ರದ ಮೇಲೆ ತೀವ್ರ ದಾಳಿ ಮುಂದುವರೆಸಿದ ಕೇಜ್ರಿವಾಲ್ ಈ ಅಧಿಸೂಚನೆ ದೆಹಲಿಯಲ್ಲಿ "ಭ್ರಷ್ಟಾಚಾರಕ್ಕೆ ಪರವಾನಗಿ" ನೀಡುತ್ತದೆ ಎಂದಿದ್ದಾರೆ.

ಎಎಪಿ ಶಾಸಕ ಸೋಮನಾಥ್ ಭಾರತಿ ಈ ಅಧಿಸೂಚನೆಯ ವಿರುದ್ಧ ಖಾಸಗಿ ಸದಸ್ಯರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಈ ಅಧಿಸೂಚನೆಯನ್ನು ಕಾನೂನು ಬಾಹಿರ ಎಂದು ಸೂಚಿಸುವುದರ ಮೂಲಕ ಎರಡು ದಿನದ ವಿಶೇಷ ಅಧಿವೇಶನಕ್ಕೆ ತೆರೆಬಿದ್ದಿದೆ.

ದೆಹಲಿಯ ಹಿರಿಯ ಅಧಿಕಾರಿಗಳನ್ನು ನೇಮಿಸುವ ಹಾಗೂ ವರ್ಗಾಯಿಸುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಗೆ ನೀಡುವ ಅಧಿಸೂಚನೆ ಇದಾಗಿತ್ತು.

ಗೃಹ ಸಚಿವಾಲಯದ ಈ ಅಧಿಸೂಚನೆಯ ವಿರುದ್ಧ ಮಂಡಿಸಲಾದ ಮಸೂದೆಯನ್ನು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಿಕೊಡಲಾಗುವುದು ಎಂದು ಸ್ಪೀಕರ್ ರಾಮ್ ನಿವಾಸ್ ಗೋಯಲ್ ತಿಳಿಸಿದ್ದಾರೆ. ಈ ಮಸೂದೆ ಮಂಡನೆ ವೇಳೆಯಲ್ಲಿ ಮೂವರು ಬಿಜೆಪಿ ಶಾಸಕರು ವಿಧಾನ ಸಭೆಯಿಂದ ಹೊರನಡೆದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.