ಕರ್ನಾಟಕ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಣೆ ಮುಂದೂಡಿಕೆ
ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ ಗೊಂದಲಗಳು ಸೃಷ್ಟಿಯಾಗಿರುವ ಕಾರಣ, ಮೇ 26ರಂದು ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶ...

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ ಗೊಂದಲಗಳು ಸೃಷ್ಟಿಯಾಗಿರುವ ಕಾರಣ, ಮೇ 26ರಂದು ಪ್ರಕಟವಾಗಬೇಕಿದ್ದ ಸಿಇಟಿ ಫಲಿತಾಂಶವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಿಯು ಫಲಿತಾಂಶದಲ್ಲಿ ಗೊಂದಲ ಸೃಷ್ಟಿಯಾಗಿದ್ದ ಕಾರಣ ಸತತ ನಾಲ್ಕು ದಿನಗಳಿಂದ ನಗರದ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ಬಳಿ ನೂರಾರು ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಪೋಷಕರ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ ಇದೀಗ ಸಿಇಟಿ ಫಲಿತಾಂಶವನ್ನು 8 ದಿನಗಳ ಕಾಲ ಮುಂದೂಡಿದೆ.
ಇನ್ನು ಪದವಿ ಪೂರ್ವ ಶಿಕ್ಷಣ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಇಂದು ಸಭೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಮೌಲ್ಯಮಾಪನ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕಿಮ್ಮನೆ ರತ್ನಾಕರ್ ಅವರು, ಪದವಿ ಪೂರ್ವ ಶಿಕ್ಷಣ ಮಂಡಳಿಯ ಅಧಿಕಾರಿಗಳಿಂದ ಪೋಷಕರಿಗೆ ನಿರ್ಧಿಷ್ಟ ಮಾಹಿತಿ ದೊರೆಯದಿರುವ ಕುರಿತು ವಿಷಾಧಿಸುತ್ತೇವೆ ಎಂದು ಹೇಳಿದರು.
"ಕಳೆದ ಎರಡು ದಿನಗಳಿಂದ ಈ ಗೊಂದಲ ಜಾಸ್ತಿಯಾಗಿದ್ದು, ಈ ವರ್ಷ ಬಂದ್ ಸೇರಿದಂತೆ ಹಲವು ಕಾರಣಗಳಿಂದ 15 ದಿನ ಫಲಿತಾಂಶ ವಿಳಂಬವಾಗಿದೆ. ವಿದ್ಯಾರ್ಥಿ, ಫೋಷಕರಿಗೆ ವಿವರಣೆ ನೀಡಲು ಅಧಿಕಾರಿಗಳಿಗೆ ನಾನು ಸೂಚಿಸಿದ್ದೆ. ಆದರೆ ಫಲಿತಾಂಶದ ಗೊಂದಲದ ಬಗ್ಗೆ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪೋಷಕರಿಗೆ ಅಧಿಕಾರಿಗಳು ಲಿಖಿತ ಉತ್ತರ ನೀಡಲಿಲ್ಲ" ಎಂದು ಸಚಿವರು ಹೇಳಿದರು.
"ಫಲಿತಾಂಶ ಪ್ರಕಟಣೆಗೆ ಮಂಡಳಿ ಆಯ್ಕೆ ಮಾಡಿದ್ದ 2 ವೆಬ್ಸೈಟ್ ಗಳ ಯಡವಟ್ಟಿನಿಂದಾಗಿ ಹಲವು ಸಮಸ್ಯೆ ಸೃಷ್ಠಿಯಾಗಿದೆ. ರಿಸ್ಟಲ್ ಔಟ್ ಡಾಟ್ ಕಾಮ್ ಮತ್ತು ಹೆಚ್ ಟಿ ಮೀಡಿಯಾ.ಕಾಮ್ ವೆಬ್ ಸೈಟ್‘ನಲ್ಲಿ ತಪ್ಪು ಫಲಿತಾಂಶ ಪ್ರಕಟವಾಗಿದ್ದು, ಈ ವೆಬ್ ಸೈಟ್ ಗಳಿಗೆ ನೀಡಿದ್ದ ಸಿಡಿ ಸರಿಯಾಗಿಯೇ ಇತ್ತು. ಆದರೂ ತಪ್ಪು ಫಲಿತಾಂಶ ಪ್ರಕಟಿಸಲಾಗಿದೆ. ಅವರ ತಪ್ಪಿನಿಂದಾಗಿ ಸಾಕಷ್ಟು ಸಮಸ್ಯೆಗಳು ರಾಜ್ಯಾದ್ಯಂತ ಉದ್ಭವವಾಯಿತು. ಈ ವೆಬ್ ಸೈಟ್ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಆದರೆ ಪಿಯು ಮಂಡಳಿಯ ವೆಬ್‌ಸೈಟ್‌ನಲ್ಲಿ ತಪ್ಪು ಫಲಿತಾಂಶ ಪ್ರಕಟಿಸಿಲ್ಲ" ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಕೃಪಾಂಕ ನಿಗದಿಯಾಗಿದ್ದ ಪ್ರಶ್ನೆಗೆ ಉತ್ತರಿಸದ ವಿದ್ಯಾರ್ಥಿಗೆ ಅಂಕವಿಲ್ಲ
ಇದೇ ವೇಳೆ ಕೃಪಾಂಕ ಸರಿಯಾಗಿ ನೀಡಿಲ್ಲ ಎಂಬ ಪೋಷಕರ ವಾದವನ್ನು ಪ್ರಸ್ತಾಪಿಸಿದ ಸಚಿವರು, ಹಿಂದಿನಿಂದಲೂ ಬಂದ ಪದ್ಧತಿಯಂತೇ ಕೃಪಾಂಕ ನಿಗದಿಯಾಗಿದ್ದ ಪ್ರಶ್ನೆಗೆ ಉತ್ತರಿಸದ ವಿದ್ಯಾರ್ಥಿಗೆ ಕೃಪಾಂಕ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


