ಐಐಟಿ ಪದವೀಧರೆಯನ್ನು ಪ್ರಮುಖ ಹುದ್ದೆಗೆ ನೇಮಿಸಿದ ಒಬಾಮಾ
ಐಐಟಿ ಪದವೀಧರೆಯೊಬ್ಬರನ್ನು ಏಷಿಯಾ ಅಮೇರಿಕಾ ಮಾತು ಪೆಸಿಫಿಕ್ ದ್ವೀಪ ನಿವಾಸಿಗಳ ಸಲಹಾ ಸಮಿತಿಗೆ ಒಬಾಮಾ ನಾಮನಿರ್ದೇಶನ ಮಾಡಿದ್ದಾರೆ.

ವಾಶಿಂಗ್ಟನ್: ಐಐಟಿ ಪದವೀಧರೆಯೊಬ್ಬರನ್ನು ಏಷಿಯಾ ಅಮೇರಿಕಾ ಮಾತು ಪೆಸಿಫಿಕ್ ದ್ವೀಪ ನಿವಾಸಿಗಳ ಸಲಹಾ ಸಮಿತಿಗೆ ಒಬಾಮಾ ನಾಮನಿರ್ದೇಶನ ಮಾಡಿದ್ದಾರೆ.
ಐಐಟಿಯಿಂದ ಎಂಬಿಎ ಪದವೀಧರೆ ಸಂಜಿತ್ ಪ್ರಧಾನ ಅವರ ನೇಮಕವನ್ನು ಒಳಗೊಂಡಂತೆ ಹಲವು ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿ ಒಬಾಮ ಶುಕ್ರವಾರ ಘೋಷಣೆ ಮಾಡಿದ್ದಾರೆ.
"ಇವರು ತಮ್ಮ ಹುದ್ದೆಗಳಿಗೆ ಅಸಮಾನ್ಯ ಶ್ರದ್ಧೆಯನ್ನು ಸಲ್ಲಿಸುತ್ತಾರೆ ಹಾಗೂ ಅಮೇರಿಕಾ ಜನಗಳ ಸೇವೆ ಮಾಡಲಿದ್ದಾರೆ. ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಒಬಾಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಅವರು ನೇಪಾಳಿ ಮೂಲದ ಅಮೇರಿಕಾ ನಿವಾಸಿ. ಅವರು ಸದ್ಯಕ್ಕೆ ಅಯೋವಾದ ಮಾನವ ಹಕ್ಕುಗಳ ಇಲಾಖೆಯ ಏಷಿಯಾ ಹಾಗೂ ಪೆಸಿಫಿಕ್ ದ್ವೀಪಕಗಳ ನಿವಾಸಿಗಳ ವ್ಯವಹಾರ ಕಚೇರಿಯ ಕಾರ್ಯಕಾರಿಣಿ ಅಧಿಕಾರಿಯಾಗಿ ೨೦೧೩ ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


