ಪ್ರಧಾನ ಸುದ್ದಿ

ಕಚ್ ಪ್ರಾಂತ್ಯದಲ್ಲಿ ಲಘು ಭೂಕಂಪ

ರಿಕ್ಟರ್ ಮಾಪನದಲ್ಲಿ ದಾಖಲಾದ ೪.೩ ಅಂಶದ ಭೂಕಂಪ ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಸಂಭವಿಸಿದೆ. ಆದರೆ ಆಸ್ತಿ ಹಾನಿ ಅಥವಾ ಸಾವು ನೋವಾಗಿರುವ

ಕಚ್ ಪ್ರಾಂತ್ಯದಲ್ಲಿ ಲಘು ಭೂಕಂಪ
ಸಾಂದರ್ಭಿಕ ಚಿತ್ರ
Published On :

ಕಚ್: ರಿಕ್ಟರ್ ಮಾಪನದಲ್ಲಿ ದಾಖಲಾದ ೪.೩ ಅಂಶದ ಭೂಕಂಪ ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಸಂಭವಿಸಿದೆ. ಆದರೆ ಆಸ್ತಿ ಹಾನಿ ಅಥವಾ ಸಾವು ನೋವಾಗಿರುವ ವರದಿಯಾಗಿಲ್ಲ.

"ಸುಮಾರು ಬೆಳಗ್ಗೆ ೬:೩೦ಕ್ಕೆ ರಿಕ್ಟರ್ ಮಾಪನದಲ್ಲಿ ೪.೩ ಅಂಶದ ಲಘು ಭೂಕಂಪನ ಸಂಭವಿಸಿತು. ಜಿಲ್ಲೆಯ ಭಾಚುವಾ ಪಟ್ಟಣದ ಈಶಾನ್ಯಕ್ಕೆ ೨೨ ಕಿಮೀ ದೂರದಲ್ಲಿ ಈ ಭೂಕಂಪನದ ಕೇಂದ್ರವಾಗಿತ್ತು" ಎಂದು ಭೂಕಂಪ ಮಾಪನ ಸಂಶೋಧನಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

"ಹಾಗೆಯೇ ಬೆಳಗ್ಗೆ ೭:೪೭ಕ್ಕೆ ರಿಕ್ಟರ್ ಮಾಪನದಲ್ಲಿ ೨ ಅಂಶದ ಲಘು ಭೂಕಂಪ ಸಂಭವಿಸಿದೆ" ಎಂದು ಕೂಡ ಅವರು ಹೇಳಿದ್ದಾರೆ.

ಅತಿ ಎತ್ತರದ ಕಟ್ಟಡಗಳಲ್ಲಿ ಬದುಕಿರುವವರಿಗೆ ಬೆಳಗಿನ ಜಾವದಲ್ಲಿ ಭೂಮಿ ನಡುಗಿರುವುದು ಅನುಭವಕ್ಕೆ ಬಂದಿದೆ ಎಂದು ಕೂಡ ಅವರು ತಿಳಿಸಿದ್ದಾರೆ, "ಕಚ್ ನಲ್ಲಿ ಅತಿ ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗೆ ಭೂಕಂಪನ ಅನುಭವಕ್ಕೆ ಬಂದಿದೆ ಆಗ ಜನರು ಮನೆಗಳಿಂದ ಓಡಿ ಹೋಗಿದ್ದಾರೆ ಆದರೆ ಯಾವುದೇ ಆಸ್ತಿ ಹಾನಿಯ ಅಥವಾ ಸಾವು ನೋವಿನ ವರದಿಯಾಗಿಲ್ಲ" ಎಂದು ಕಚ್ ಜಿಲ್ಲ ವಿಪತ್ತು  ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.