ಮಹಾರಾಷ್ಟ್ರ ಎ ಟಿ ಎಸ್ ನಿಂದ ಇಬ್ಬರು ಮಾವೋವಾದಿ ಮುಖಂಡರ ಬಂಧನ
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ ಟಿ ಎಸ್) ಪುಣೆಯ ಹೊರವಲಯದ ಆಸ್ಪತ್ರೆಯಿಂದ ಇಬ್ಬರು ಪ್ರಮುಖ ಮಾವೋವಾದಿ ಮುಖಂಡರನ್ನು ಸೆರೆಹಿಡಿದಿದೆ

ಪುಣೆ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ ಟಿ ಎಸ್) ಪುಣೆಯ ಹೊರವಲಯದ ಆಸ್ಪತ್ರೆಯಿಂದ ಇಬ್ಬರು ಪ್ರಮುಖ ಮಾವೋವಾದಿ ಮುಖಂಡರನ್ನು ಸೆರೆಹಿಡಿದಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಇವರಿಬ್ಬರನ್ನು ಕೇರಳದ ಎರ್ನಾಕುಲಂ ಮೂಲದ ಕೆ ಮುರಳೀಧರನ್(೬೨) ಅಲಿಯಾಸ್ ಥಾಮಸ್ ಜೋಸೆಫ್ ಮತ್ತು ಮಾಲ್ಲಾಪುರಂ ಮೂಲದ ಇಸ್ಮಾಯಿಲ್ ಹಮ್ಜಾ ಚಿರಾಗಪಿಲ್ಲಿ(೨೯) ಅಲಿಯಾಸ್ ಜೇಮ್ಸ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ.
ಸುಳಿವಿನ ಜಾಡು ಹಿಡಿದ ಪೊಲೀಸರು ತಾಲೆಗಾಂವ್ ನ ಮೋರ್ಯಾ ಆಸ್ಪತ್ರೆಯಿಂದ ಶುಕ್ರವಾರ ಇವರಿಬ್ಬರನ್ನು ಬಂಧಿಸಲಾಗಿದೆ ಹಾಗು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ವಿ ಮಾನೆ ಅವರ ಎದುರು ಶನಿವಾರ ಹಾಜರುಪಡಿಸಿದ್ದು ಇಬ್ಬರನ್ನೂ ಒಂದು ವಾರದ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಮಾವೋವಾದಿ ನಾಯಕ ಗಣಪತಿಗೆ ಮುರಳೀಧರನ್ ಆಪ್ತ ಸಹಚರ ಹಾಗೂ ಚಿರಾಗಪಲ್ಲಿ ಅವರ ನಂಬಿಕಸ್ಥ ಎಂದು ಎ ಟಿ ಎಸ್ ತಿಳಿಸಿದೆ.
ನಕಲಿ ಗುರುತಿನೊಂದಿಗೆ ಇವರಿಬ್ಬರೂ ಪುಣೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಎಷ್ಟು ಕಾಲದಿಂದ ಇವರಿಬ್ಬರೂ ಇಲ್ಲಿ ವಾಸಿಸುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


