ಉಳಿದಿದ್ದನ್ನು ದೇವರಿಗೆ ಬಿಡುತ್ತೇವೆ: ಸಲ್ಮಾನ್ ತಂಗಿ ಅರ್ಪಿತಾ
ಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್,

ಮುಂಬೈ: ಕುಟುಂಬದ ಕಷ್ಟದ ಸಮಯದಲ್ಲಿ ತಮ್ಮ ಜೊತೆಗಿದ್ದ ಎಲ್ಲ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಅರ್ಪಿತಾ ಖಾನ್, ಇನ್ನುಳಿದಿದ್ದನ್ನು ದೇವರಿಗೆ ಬಿಡಲಿದ್ದೇವೆ ಎಂದಿದ್ದಾರೆ.
೨೦೦೨ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಹೇಳಿ ಸಲ್ಮಾನ್ ಖಾನ್ (೪೯) ಅವರಿಗೆ ಬಾಂಬೆ ಸೆಷನ್ ಕೋರ್ಟ್ ೫ ವರ್ಷಗಳ ಕಠಿಣ ಸಜೆ ನೀಡಿತ್ತು. ಆದರೆ ಬಾಂಬೆ ಹೈಕೋರ್ಟ್ ಸಲ್ಮಾನ್ ಖಾನ್ ಅವರಿಗೆ ಮುಂದಿನ ವಿಚಾರಣೆ ಮೇ ೮ ರಂದು ನಡೆಯುವುದರಿಂದ ಅಂದೇ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿತ್ತು.
"ಇಂದು ಜೀವನದ ಏರು ಪೇರು- ಏಳು ಬೀಳುಗಳಿಂದ ತುಂಬಿದ ದಿನ. ಉಳಿದಿದ್ದನ್ನು ದೇವರಿಗೆ ಬಿಟ್ಟು ಪ್ರಾರ್ಥನೆ ಸಲ್ಲಿಸುತ್ತೇವೆ. ನಮ್ಮ ಜೊತೆ ಇದ್ದುದ್ದಕ್ಕೆ ಧನ್ಯವಾದಗಳು!" ಎಂದು ಅರ್ಪಿತಾ ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.
ದಭಾಂಗ್ ಸ್ಟಾರ್ ನ ಇಬ್ಬರು ಸಹೋದರರು, ಸಹೋದರಿಯರು ಹಾಗು ಪೋಷಕರು ತೀರ್ಪು ನೀಡುವಾಗ ಜೊತೆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


