ಹಿಟ್ ಅಂಡ್ ರನ್ ಪ್ರಕರಣ

Hit and Run: ಪಾದಚಾರಿಗೂ ಜೀವಂತವಾಗಿ ರಸ್ತೆ ದಾಟುವ ಹಕ್ಕಿದೆ- ದೆಹಲಿ ಕೋರ್ಟ್
2021ರಲ್ಲಿ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯ ಗೇಟ್ ಬಳಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಪಘಾತ ಪ್ರಕರಣ; ಕ್ಯಾಂಟರ್ ಟ್ರಕ್ ಪತ್ತೆಗೆ ಪೊಲೀಸರ ತೀವ್ರ ಶೋಧ
ಹಿರೇಬಾಗೇವಾಡಿ ಟೋಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು 60 ಕ್ಯಾಂಟರ್‌ಗಳ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.

BMW ಹಿಟ್ ಅಂಡ್ ರನ್ ಪ್ರಕರಣ: ಮೃತ ಮಹಿಳೆ ಕುಟುಂಬಕ್ಕೆ ಮಹಾರಾಷ್ಟ್ರ ಸಿಎಂ 10 ಲಕ್ಷ ರೂ ನೆರವು ಘೋಷಣೆ
ಅಪಘಾತ ಪ್ರಕರಣದ ಪ್ರಮುಖ ಆರೋಪಿ ತಮ್ಮ ಪಕ್ಷದ ನಾಯಕನ ಮಗ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮಹಾ ಸಿಎಂ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಮತ್ತು ಯಾರನ್ನೂ ಬಿಡುವುದಿಲ್ಲ ಎಂದರು.

Hit-and-Run case: ಬೈಕಿಗೆ ಕಾರು ಢಿಕ್ಕಿ; ವಾಹನದ ಛಾವಣಿ ಮೇಲೆ ಶವ ಹೊತ್ತು 18 ಕಿ.ಮೀ ಸಾಗಿದ ಚಾಲಕ!
ಆಂಧ್ರ ಪ್ರದೇಶದಲ್ಲಿ ಭೀಕರ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದ್ದು, ಬೈಕಿಗೆ ಢಿಕ್ಕಿ ಹೊಡೆದ ಕಾರು ಚಾಲಕ ಆತನ ಶವದ ಸಮೇತ 18 ಕಿ.ಮೀ ವರೆಗೂ ಹೋಗಿರುವ ದಾರುಣ ಘಟನೆ ವರದಿಯಾಗಿದೆ.

ಬಾಗಲಕೋಟೆ: ಹಿಟ್ ಅಂಡ್ ರನ್ ಪ್ರಕರಣ ಎಂದು ಬಿಂಬಿಸಿ ರೈತನ ಹತ್ಯೆಗೈದ ಪೊಲೀಸ್ ಪೇದೆ, ಸಹೋದರನ ಬಂಧನ
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತನನ್ನು ಕೊಂದು, ಅದನ್ನು ಹಿಟ್ ಅಂಡ್ ರನ್ ಪ್ರಕರಣ ಎಂದು ಬಿಂಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಪೊಲೀಸ್ ಪೇದೆ ಮತ್ತು ಆತನ ಸಹೋದರನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಭೀಕರ ವಿಡಿಯೋ: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಗೆ ಗುದ್ದಿದ ಎಸ್ ಯುವಿ, ಗಾಳಿಯಲ್ಲಿ ಹಾರಿ ಕೆಳಗೆಬಿದ್ದ ಸಿಬ್ಬಂದಿಗೆ ಗಾಯ
ಮತ್ತೊಂದು ಭೀಕರ ವಿಡಿಯೋ ವೈರಲ್ ಆಗುತ್ತಿದ್ದು, ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಎಸ್ ಯುವಿ ಕಾರು ಗುದ್ದಿದ ಪರಿಣಾಮ ಆತ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.

ದಾವಣಗೆರೆ ಹಿಟ್ ಅಂಡ್ ರನ್ ಪ್ರಕರಣಕ್ಕೆ ಟ್ವಿಸ್ಟ್: ಸಂತ್ರಸ್ತರೇ ಟ್ರಕ್ ಚಾಲಕರ ದರೋಡೆಯಲ್ಲಿ ತೊಡಗಿದ್ದರು!
ದಾವಣಗೆರೆ ನಗರದ ಬಳಿ ಮೂವರು ಯುವಕರನ್ನು ಹತ್ಯೆಗೈದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತರು ಟ್ರಕ್ ಚಾಲಕರನ್ನು ದರೋಡೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ ಮತ್ತು ಟ್ರಕ್ ಚಾಲಕರೊಬ್ಬರು ಹಿಟ್ ಅಂಡ್ ರನ್ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಮೂವರು ಯುವಕರ ಸಾವಿನ ಸುತ್ತ ಅನುಮಾನದ ಹುತ್ತ
ಶನಿವಾರ ರಾತ್ರಿ ನಡೆದ 'ಹಿಟ್ ಅಂಡ್ ರನ್' ಪ್ರಕರಣದಲ್ಲಿ ಆನಗೋಡು ಸಮೀಪ ದಾವಣಗೆರೆಯ ಮೂವರು ಸಾವೀಗಾಡಿಗಿದ್ದು, ಇದೀಗ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಪೊಲೀಸರು ಸ್ಥಳದಿಂದ ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಹಿಟ್ ಅಂಡ್ ರನ್ ಪ್ರಕರಣ: ದಾವಣಗೆರೆಯಲ್ಲಿ ಅಪಘಾತ, ಬೈಕ್‌ನಲ್ಲಿದ್ದ ಮೂವರು ಯುವಕರ ಸಾವು
ದಾವಣಗೆರೆ ನಗರದ ಹೊರವಲಯದ ಆನಗೋಡು ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಮೂವರು ಶುಕ್ರವಾರ ತಡರಾತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

