ಯೋಗೇಂದ್ರ, ಭೂಷಣ್ ಗೆ ಬೆಂಬಲ; ಮಹಾರಾಷ್ಟ್ರದಲ್ಲಿ ಸುಮಾರು ೩೫೦ ಎಎಪಿ ಕಾರ್ಯಕರ್ತರ ರಾಜೀನಾಮೆ
ಅರವಿಂದ ಕೇಜ್ರಿವಾಲ್ ನಾಯಕತ್ವದ ಎಎಪಿ ಪಕ್ಷದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ದೂರಿ ಪಕ್ಷದ ಸುಮಾರು ೩೫೦ ಕಾರ್ಯಕರ್ತರು

ಮುಂಬೈ: ಅರವಿಂದ ಕೇಜ್ರಿವಾಲ್ ನಾಯಕತ್ವದ ಎಎಪಿ ಪಕ್ಷದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ದೂರಿ ಪಕ್ಷದ ಸುಮಾರು ೩೫೦ ಕಾರ್ಯಕರ್ತರು ಹಾಗೂ ನಾಯಕರು ಸೋಮವಾರ ರಾಜೀನಾಮೆ ನೀಡಿ ಉಚ್ಛಾಟಿತ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಬೆಂಬಲಿಸಿದ್ದಾರೆ.
"ಸುಮಾರು ೩೫೦ ಜನ ಕಾರ್ಯಕರ್ತರು ಹಾಗು ನಾಯಕರು ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಖ್ಯೆ ಇನ್ನು ಹೆಚ್ಚಲಿದ್ದು, ಪಕ್ಷದಲ್ಲಿ ಕೊಲೆಯಾಗಿರುವ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಜನಕ್ಕೆ ಮನವರಿಕೆ ಮಾಡಿಕೊಡಲಿದ್ದೇವೆ" ಎಂದು ಮಹಾರಾಷ್ಟ್ರದ ಎಎಪಿ ಪಕ್ಷ ರಾಜ್ಯ ಕಾರ್ಯಕಾರಿಣಿ ಸಮಿತಿಯ ಮಾಜಿ ಸದಸ್ಯ ಮಾರುತಿ ಭಾಪ್ಕರ್ ತಿಳಿಸಿದ್ದಾರೆ.
ಪುಣೆಯಲ್ಲಿ ನಡೆದ ಸಾಮೂಹಿಕ ರಾಜೀನಾಮೆ ಕಾರ್ಯಕ್ರಮದ ನೇತೃತ್ವವನ್ನು ಭಾಪ್ಕರ್ ವಹಿಸಿದ್ದರು.
"ನಾವೀಗ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಜೊತೆಗಿದ್ದೇವೆ. ದೇಶದಾದ್ಯಂತ ಸ್ವರಾಜ್ ಅನ್ನು ಪ್ರಚುರಪಡಿಸಲು ಅವರಿಗೆ ಬೆಂಬಲ ನೀಡಲಿದ್ದೇವೆ" ಎಂದಿದ್ದಾರೆ ಭಾಪ್ಕರ್.
"ರ್ಯಾಲಿಯಲ್ಲಿ ಒಬ್ಬ ರೈತ ಅವರ ಕಣ್ಮುಂದೆಯೇ ಆತ್ಮಹತ್ಯೆ ಮಾಡಿಕೊಂಡರೂ, ಭಾಷಣ ಮಾಡುತ್ತಲೇ ಇದ್ದ ನಾಯಕನೆನೆಸಿಕೊಂಡ ಅರವಿಂದ್ ಕೇಜ್ರಿವಾಲ್ ಆವರ ಅಸೂಕ್ಷ್ಮತೆಯನ್ನು ನೀವು ಗಮನಿಸಬಹುದು" ಎಂದಿದ್ದಾರೆ ಅವರು.
"ಪುಣೆಯಿಂದ ಮಾತ್ರವಲ್ಲ, ಮುಂಬೈ, ನಾಸಿಕ್, ಔರಂಗಬಾದ್ ಮುಂತಾದ ಕಡೆಯಿಂದ ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಅವರೆಲ್ಲಾ ಪುಣೆಗೆ ಬಂದಿದ್ದಾರೆ" ಎಂದು ಭಾಪ್ಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


