ಪ್ರಧಾನ ಸುದ್ದಿ

ಬಿಹಾರದಲ್ಲಿ ೧೪೦ ಬ್ಯಾಂಕ್ ಪಾಸ್ಬುಕ್ ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಗ್ರಾಮಮುಖಂಡನ ಬಂಧನ

ಬಿಹಾರ ಪೂರ್ವದ ಚಂಪರನ್ ಜಿಲ್ಲೆಯ ಗ್ರಾಮದ ಮುಖಂಡನನ್ನು ಹೆಂಡ, ಶಸ್ತ್ರಾಸ್ತ್ರ ಗಳ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ

ಬಿಹಾರದಲ್ಲಿ ೧೪೦ ಬ್ಯಾಂಕ್ ಪಾಸ್ಬುಕ್ ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಗ್ರಾಮಮುಖಂಡನ ಬಂಧನ
ಸಾಂದರ್ಭಿಕ ಚಿತ್ರ
Published On :

ಮೋತಿಹರಿ: ಬಿಹಾರ ಪೂರ್ವದ ಚಂಪರನ್ ಜಿಲ್ಲೆಯ ಗ್ರಾಮದ ಮುಖಂಡನನ್ನು ಹೆಂಡ, ಶಸ್ತ್ರಾಸ್ತ್ರ ಗಳ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ, ಅವನಲ್ಲಿದ್ದ ೧೫೦ ಬ್ಯಾಂಕ್ ಪಾಸ್ಬುಕ್ ಗಳನ್ನು ವಶಪಡಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ ನಡೆದ ಪೊಲೀಸ್ ದಾಳಿಯಲ್ಲಿ ಪೊಲೀಸರು ಶಂಕರ್ ಸರಿಯಾ (ಉತ್ತರ) ಪಂಚಾಯತ್ ನ ಮುಖ್ಯಸ್ಥನನ್ನು ಬಂಧಿಸಿ, ಬಂದೂಕು, ರಿವಾಲ್ವಾರ್, ೨೫ ಕಾಟ್ರಿಡ್ಜ್ ಗಳು, ೧.೮೫ ಲಕ್ಷ ನಗದು ಹಾಗು ವಿವಿಧ ಬ್ಯಾಂಕುಗಳ ೧೫೦ ಪಾಸ್ಬುಕ್ಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ ೫೦ ಎ ಟಿ ಎಂ ಕಾರ್ಡುಗಳು, ೨೫೦ ಸಹಿ ಮಾಡಿದ ಚೆಕ್ಕುಗಳು, ಹೆಂಡ ತುಂಬಿದ ದೊಡ್ಡ ಹಂಡೆಯನ್ನು ಕೂಡ, ಕೃಷ್ಣ ಪ್ರಸಾದ್ ಎಂದು ಗುರುತಿಸಲಾಗಿರುವ ಗ್ರಾಮ ಮುಖಂಡನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ಚಂಪರನ್ ನ ಸೂಪರಿಂಟೆಂಡೆಂಟ್  ಪೊಲೀಸ್ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂದು ದೂರು ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆಸಿದ್ದೇವೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.