ಪ್ರಧಾನ ಸುದ್ದಿ

ಎಎಪಿ ಬಿಕ್ಕಟ್ಟು: ಮಹಾರಾಷ್ಟ್ರದಲ್ಲಿ ರಾಜೀನಾಮೆ ನೀಡಲು ಮುಂದಾದ ನಾಯಕರು

ಆಮ್ ಆದ್ಮಿ ಪಕ್ಷದ ಭಿನ್ನಾಭಿಪ್ರಾಯಗಳು ಬಗೆಹರಿಯದೆ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದರಿಂದ ಬೇಸತ್ತಿರುವ ಮಹಾರಾಷ್ಟ್ರ ಎಎಪಿ ಪಕ್ಷದ ನಾಯಕರು

ಎಎಪಿ ಬಿಕ್ಕಟ್ಟು: ಮಹಾರಾಷ್ಟ್ರದಲ್ಲಿ ರಾಜೀನಾಮೆ ನೀಡಲು ಮುಂದಾದ ನಾಯಕರು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಆಮ್ ಆದ್ಮಿ ಪಕ್ಷದ ಭಿನ್ನಾಭಿಪ್ರಾಯಗಳು ಬಗೆಹರಿಯದೆ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದರಿಂದ ಬೇಸತ್ತಿರುವ ಮಹಾರಾಷ್ಟ್ರ ಎಎಪಿ ಪಕ್ಷದ ನಾಯಕರು ಪಕ್ಷ ತೊರೆಯುವ ಬಗ್ಗೆ ಚಿಂತಿಸುತ್ತಿದ್ದಾರೆ.

ಮಾರ್ಚ್ ೨೮ರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಿರಿಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ಉಚ್ಚಾಟಿಸಿರುವುದರಿಂದ, ಎಎಪಿ "ದಿಲ್ಲಿ ಗ್ಯಾಂಗ್" ತಮ್ಮ ರಾಜ್ಯದ ರಾಜಕೀಯ ಚಟುವಟಿಕೆಗಳ ಮೇಲೆ ಹೆಚ್ಚಿನ ಹಸ್ತಕ್ಷೇಪ ನಡೆಸಬಹುದು ಎಂದು ಹಲವು ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಈ ಬೆಳವಣಿಗೆಯನ್ನು 'ಅಸಹ್ಯ' ಎಂದಿರುವ ಮಹಾರಾಷ್ಟ್ರ ಆಪ್ ನಾಯಕ ಮಾರುತಿ ಭಾಪ್ಕರ್ "ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಡೆದದ್ದು ಪ್ರಜಾಪ್ರಭುತ್ವದ ಕೊಲೆಗೇನೂ ಕಡಿಮೆ ಇಲ್ಲ. ನನಗೆ ತೀವ್ರ ನೋವಾಗಿದೆ. ಪಕ್ಷ ತೊರೆಯಬೇಕೆನ್ನಿಸುತ್ತಿದೆ" ಎಂದು ಅವರು ದೆಹಲಿಗೆ ತೆರಳುವ ಮುನ್ನ ತಿಳಿಸಿದ್ದಾರೆ.

ಅಣ್ಣಾ ಆಂದೋಲನದಲ್ಲಿ ಸಕ್ರಿಯವಾಗಿದ್ದ ಮಯಾಂಕ್ ಗಾಂಧಿ ಈಗಾಗಲೇ ಕೇಜ್ರಿವಾಲ್ ಅವರ ಏಕಪಕ್ಷೀಯ ಧೋರಣೆ ವಿರುದ್ಧ ಸಿಡಿದೆದ್ದಿದ್ದು, ಬಲ್ಲ ಮೂಲಗಳ ಪ್ರಕಾರ ಪಕ್ಷಕ್ಕಾಗಿ ಅವರು ಮತ್ತೆ ದುಡಿಯುವುದಿಲ್ಲ ಎಂದು ತಿಳಿದುಬಂದಿದೆ.

ಅಂಜಲಿ ದಮನಿಯಾ ಈಗಾಗಲೇ ಪಕ್ಷ ತೊರೆದಿದ್ದು, ವಿಜಯ್ ಪಂಢಾರೆ, ಸುಭಾಶ್ ವಾರೆ ಕೂಡ ಪಕ್ಷದ ಬೆಳವಣಿಗೆಗಳಿಂದ ತೀವ್ರ ಬೇಸರವಾಗಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.