ಸುರೇಶ್ ಭಾಯಿ ಮೇಲೆ ಹಲ್ಲೆ; ನಿವೃತ್ತ ಅಮೇರಿಕ ಪೊಲೀಸ್ ಮೇಲೆ ದೋಷಾರೋಪಣೆ
೫೭ ವರ್ಷದ ಭಾರತೀಯ ವಯೋವೃದ್ಧನ ಮೇಲೆ ಅತಿ ಹೆಚ್ಚಿನ ಬಲಪ್ರಯೋಗ ಮಾಡಿ ಅವರ ದೇಹವನ್ನು ಪಾರ್ಶ್ವ ನಿಷ್ಕ್ರಿಯಗೊಳಿಸಿದ ಆರೋಪ

ವಾಶಿಂಗ್ಟನ್: ೫೭ ವರ್ಷದ ಭಾರತೀಯ ವಯೋವೃದ್ಧನ ಮೇಲೆ ಅತಿ ಹೆಚ್ಚಿನ ಬಲಪ್ರಯೋಗ ಮಾಡಿ ಅವರ ದೇಹವನ್ನು ಪಾರ್ಶ್ವ ನಿಷ್ಕ್ರಿಯಗೊಳಿಸಿದ ಆರೋಪ ಹೆದರಿಸುತ್ತಿರುವ ಅಮೇರಿಕಾ ಪೋಲಿಸ್ ಅಧಿಕಾರಿಯ ಮೇಲೆ ನಾಗರಿಕ ಹಕ್ಕುಗಳ ಉಲ್ಲಂಘನೆಗೆ ಅಧಿಕೃತ ದೋಷಾರೋಪಣೆಯನ್ನು ಯು ಎಸ್ ಫೆಡರಲ್ ಮಾಡಿದೆ. ಈಗ ಅಧಿಕಾರಿ ೧೦ ವರ್ಷದವರೆಗೆ ಜೈಲು ಸಜೆ ಅನುಭವಿಸುವ ಸಾಧ್ಯತೆ ಇದೆ.
"ಸುರೇಶ್ ಭಾಯಿ ಅವರನ್ನು ನೆಲಕ್ಕೆ ತಳ್ಳಿದ್ದರಿಂದ ಅವರ ದೇಹ ಪಾರ್ಶ್ವ ನಿಷ್ಕ್ರಿಯವಾದ ಆರೋಪದ ಮೇಲೆ ಫೆಡರಲ್ ನ್ಯಾಯಮೂರ್ತಿಗಳು ಎರಿಕ್ ಪಾರ್ಕರ್ ಅವರ ಮೇಲೆ ಅಧಿಕೃತ ದೋಷಾರೋಪಣೆ ಮಾಡಿದ್ದಾರೆ" ಎಂದು ಉಪ ಅಟಾರ್ನಿ ಜನರಲ್ ವನಿತಾ ಗುಪ್ತಾ ಹಾಗೂ ಅಲಬಾಮಾದ ಉತ್ತರ ಜಿಲ್ಲೆಯ ಅಮೇರಿಕಾ ಅಟಾರ್ನಿ ಜನರಲ್ ಜಾಯ್ಸ್ ವಾನ್ಸ್ ಎರಡು ಪುಟದ ದೋಷಾರೋಪಣೆಯಲ್ಲಿ ತಿಳಿಸಿದ್ದಾರೆ.
ಮೊಮ್ಮೊಗ ಹುಟ್ಟಿದ ಖುಷಿಯಲ್ಲಿ ತಮ್ಮ ಮಗ ಮತ್ತು ಸೊಸೆಗೆ ಸಹಾಯ ಮಾಡಲು ಅಮೆರಿಕಾಕ್ಕೆ ಬಂದಿದ್ದ ಸುರೇಶ್ ಭಾಯಿ ಪಟೇಲ್ ಅವರು ರಸ್ತೆಯಲ್ಲಿ ನಡೆದು ಹೋಗುವಾಗ ಪಾರ್ಕರ್ ಮತ್ತು ಇನ್ನಿಬ್ಬರು ಪೊಲೀಸರೊಂದಿಗೆ ಪಟೇಲ್ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಇದರಿಂದ ಪಟೇಲ್ ಅವರಿಗೆ ತೀವ್ರ ಗಾಯವಾಗಿತ್ತು.
ತನಿಖೆ ಕೈಗೆತ್ತುಕೊಂಡಿದ್ದ ಎಫ್ ಬಿ ಐ, ಪಾರ್ಕರ್ ಅವರನ್ನು ಮ್ಯಾಡಿಸನ್ ಪೋಲಿಸ್ ಪಡೆಯಿಂದ ವಜಾ ಮಾಡಿತ್ತು. ಅಲ್ಲದೆ ಅಲಬಾಮಾ ಗವರ್ನರ್ ರಾಬರ್ಟ್ ಬೆಂಟ್ಲಿ ಭಾರತ ಸರ್ಕಾರದ ಕ್ಷಮೆ ಕೋರಿದ್ದರು. ಪ್ರಾಮಾಣಿಕ ಮತ್ತು ಶೀಘ್ರ ತನಿಖೆಗೆ ಪಟೇಲ್ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪಟೇಲ್ ಅವರ ಅಟಾರ್ನಿ ಹ್ಯಾಂಕ್ ಶೆರ್ರಾಡ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


