ಯೋಗೇಂದ್ರ ಯಾದವ್ ಭೇಟಿ ಮಾಡಿದ ಕೇಜ್ರಿವಾಲ್ ಬಣದ ನಾಯಕರು
ಖ್ಯಾತೆಗೆ ಬಿದ್ದಿರುವ ಎಎಪಿ ಬಣಗಳ ನಡುವೆ ಶಾಂತಿ ಸ್ಥಾಪಿಸಲು ಅರವಿಂದ್ ಕೇಜ್ರಿವಾಲ್ ಬಣದ ಹಿರಿಯ ನಾಯಕರು ಸೋಮವಾರ ಸಂಜೆ ಯೋಗೇಂದ್ರ ಯಾದವ್

ನವದೆಹಲಿ: ಖ್ಯಾತೆಗೆ ಬಿದ್ದಿರುವ ಎಎಪಿ ಬಣಗಳ ನಡುವೆ ಶಾಂತಿ ಸ್ಥಾಪಿಸಲು ಅರವಿಂದ್ ಕೇಜ್ರಿವಾಲ್ ಬಣದ ಹಿರಿಯ ನಾಯಕರು ಸೋಮವಾರ ಸಂಜೆ ಯೋಗೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಇದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಗೆ ಹಿಂದಿರುಗಿದ ಕೆಲವೇ ಘಂಟೆಗಳಲ್ಲಿ ನಡೆದಿದೆ.
ಎರಡು ಬಣಗಳು ಚರ್ಚೆಯನ್ನು ಧನಾತ್ಮಕ ಎಂದು ಬಣ್ಣಿಸಿವೆ.
ಆಪ್ ಪಕ್ಷದ ಮುಖಂಡರಾದ ಸಂಜಯ್ ಸಿಂಗ್, ಕುಮಾರ್ ವಿಶ್ವಾಸ, ಅಶುತೋಶ್ ಮತ್ತು ಆಶಿಶ್ ಕೇತನ್ ಸೋಮವಾರ ಸಂಜೆ ಯೋಗೇಂದ್ರ ಅವರೊಂದಿಗೆ ನಡೆಸಿದ ಚರ್ಚೆ ಬೆಳಗ್ಗೆ ಮೂರು ಘಂತೆಯವರೆಗೂ ಮುಂದುವರೆಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ಯೋಗೇಂದ್ರ ಮತ್ತು ಪ್ರಶಾಂತ್ ಭೂಷಣ್ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಚರ್ಚೆ ನಡೆಸಿ ಭಿನಾಭಿಪ್ರಾಯಗಳಿಗೆ ಕೊನೆ ಹಾಡಬೇಕು ಎಂದಿದ್ದ ಹಿನ್ನಲೆಯಲ್ಲೇ ಈ ಚರ್ಚೆ ನಡೆದಿರುವುದು ಕುತೂಹಲ ಹುಟ್ಟಿಸಿದೆ.
ಈ ಇಬ್ಬರೂ ನಾಯಕರು ಕೇಜ್ರಿವಾಲ್ ಅವರಿಗೆ ಸೋಮವಾರ ಬೆಳಗ್ಗೆ ಎಸ್ ಎಂ ಎಸ್ ಕಳಿಸಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಕೇಜ್ರಿವಾಲ್ ಅವರಿಂದ ಯಾವುದೇ ಪ್ರತಿಕ್ರಿಯೆ ಬರದೆ ಹೋದರೂ ಕೇಜ್ರಿವಾಲ್ ಬಣದ ನಾಯಕರು ಯೋಗೇಂದ್ರ ಅವರನ್ನು ಭೇಟಿ ಮಾಡಿದ್ದು ಪಕ್ಷದ ಭಿನ್ನಾಭಿಪ್ರಾಯಗಳಿಗೆ ತಾತ್ಕಾಲಿಕ ಶಮನ ಸಿಕ್ಕಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


