ಮಾರ್ಚ್ ಕೊನೆಯವರೆಗೂ ರಾಜಕೀಯ ವಿರಾಮ ವಿಸ್ತರಿಸಿಕೊಂಡ ರಾಹುಲ್
ಕಾಂಗ್ರೆಸ್ ಉಪಾಧ್ಯಕ್ಷ ರಾಜಕೀಯದಿಂದ ತೆಗೆದುಕೊಂಡಿದ್ದ ತಮ್ಮ ತಾತ್ಕಾಲಿಕ ರಜೆಯನ್ನು ವಿಸ್ತರಿಸಿಕೊಂಡಿದ್ದು ಮಾರ್ಚ್ ಕೊನೆಗೆ ಹಿಂದಿರುಗಲಿದ್ದಾರೆ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಜಕೀಯದಿಂದ ತೆಗೆದುಕೊಂಡಿದ್ದ ತಮ್ಮ ತಾತ್ಕಾಲಿಕ ರಜೆಯನ್ನು ವಿಸ್ತರಿಸಿಕೊಂಡಿದ್ದು ಮಾರ್ಚ್ ಕೊನೆಗೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ನಿಗದಿಯಾದಂತೆ ರಾಹುಲ್ ಗಾಂಧಿ ಮಾರ್ಚ್ ೧೦ಕ್ಕೆ ಹಿಂದಿರುಗಬೇಕಿತ್ತು ಆದರೆ ಅವರು ರಜೆಯನ್ನು ಮಾರ್ಚ್ ಕೊನೆಯವರೆಗೆ ವಿಸ್ತರಿಸ್ಕೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ ವಿರೋಧಿಸಿ ರಾಷ್ಟ್ರಪತಿ ಭವನದ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿರುವ ಕಾಂಗ್ರೆಸ್ ಪಕ್ಷದ ಯೋಜನೆಗೆ ರಾಹುಲ್ ಗಾಂಧಿ ಭಾಗಿಯಾಗುವುದಿಲ್ಲ ಎಂದು ಇದರಿಂದ ತಿಳಿದುಬರುತ್ತದೆ. .
ಕಾಂಗ್ರೆಸ್ ಮೂಲಗಳು ಅವರ ಇರುವಿಕೆಯ ಜಾಗವನ್ನು ತಿಳಿಸಲು ನಿರಾಕರಿಸಿವೆ. ಆದರೆ ಈ ತಿಂಗಳ ಕೊನೆಯವರೆಗೂ ನಡೆಯುವ ಅಧಿವೇಶನಕ್ಕೆ ಇನ್ನೇನು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುವ ರಾಹುಲ್ ಗಾಂಧಿ ಬರುವುದಿಲ್ಲ ಎಂಬುದು ನಿಶ್ಚಯವಾಗಿದೆ.
ಬಜೆಟ್ ಅಧಿವೇಶನದ ಪ್ರಾರಂಭದಲ್ಲಿ ರಜೆಗೆ ಹೋದ ರಾಹುಲ್ ಗಾಂಧಿ ಅವರ ಈ ಯೋಜನೆಯನ್ನು "ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ತಯ್ಯಾರಿ ನಡೆಸಲು ಆತ್ಮವಿಮರ್ಶೆ ಮಾಡಿಕೊಳ್ಳಲು ವಿದೇಶಕ್ಕೆ ತೆರಳಿದ್ದಾರೆ" ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದವು.
೪೪ ವರ್ಷದ ರಾಹುಲ್ ಉತ್ತರಾಖಂಡದಲ್ಲಿ ಕಂಡುಬಂದರು ಎಂಬ ಫೋಟೊ ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಓಡಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

