ಆಪ್ ಪಕ್ಷ ಸೋಲಬೇಕೆಂದು ಭೂಶಣ್ ಬಯಸಿದ್ದರು: ಅಂಜಲಿ ದಮನಿಯಾ
ಎಎಪಿ ನಾಯಕ ಪ್ರಶಾಂತ್ ಭೂಷಣ್ ಅವರ ಮೇಲೆ ಏಕರೂಪದ ದಾಳಿ ಮಾಡಿರುವ ಅರವಿಂದ್ ಕೇಜ್ರಿವಾಲ್ ಬಣ, ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ

ನವದೆಹಲಿ: ಎಎಪಿ ನಾಯಕ ಪ್ರಶಾಂತ್ ಭೂಷಣ್ ಅವರ ಮೇಲೆ ಏಕರೂಪದ ದಾಳಿ ಮಾಡಿರುವ ಅರವಿಂದ್ ಕೇಜ್ರಿವಾಲ್ ಬಣ, ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಆಪ್ ಪಕ್ಷ ಸೋಲಬೇಕೆಂದು ಪ್ರಶಾಂತ್ ಭೂಷಣ್ ಬಯಸಿದ್ದರು ಎಂದು ಮಹಾರಾಷ್ಟ್ರದ ಆಮ್ ಆದ್ಮಿ ಪಕ್ಷದ ನಾಯಕಿ ಅಂಜಲಿ ದಮನಿಯಾ ಹೇಳಿದ್ದಾರೆ.
ಪ್ರಶಾಂ ಭೂಷಣ್ ಚುನಾವಣೆಗೂ ಮುಂಚೆ ದಾನಿಗಳನ್ನು ಆಪ್ ಪಕ್ಷಕ್ಕೆ ದೇಣಿಗೆ ಕೊಡುವುದನ್ನು ತಪ್ಪಿಸಲು ಪ್ರಯತ್ನಿಸಿದ್ದರು ಕೂಡ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತರಾದ ದಮನಿಯಾ ಹೇಳಿದ್ದಾರೆ.
"ಜನವರಿ ೨೭ರಂದು ನಾನು ಪ್ರಶಾಂತ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದೆ. ದೆಹಲಿ ಚುನಾವಣೆಗಳನ್ನು ಪಕ್ಷ ಸೋಲಬೇಕು ಎಂದು ಅವರು ಹೇಳಿದ್ದಾಗ ನಾನು ಕಂಪಿಸಿದ್ದೆ" ಎಂದಿದ್ದಾರೆ.
"ನನಗೆ ತೀವ್ರ ಬೇಸರವಾಯಿತು. ನನ್ನ ಚೀಲವನ್ನು ಎತ್ತಿಕೊಂಡು ಕಚೇರಿಯಿಂದ ಹೊರನಡೆದೆ" ಎಂದು ದಮನಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


