ಸಾಲದ ಹೊರೆ: ರಾಜ್ಯದಲ್ಲಿ ಇನ್ನೂ ಮೂವರು ರೈತರು ಆತ್ಮಹತ್ಯೆಗೆ ಶರಣು
ರಾಜ್ಯದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ಕೊನೆ ಇಲ್ಲದಂತಾಗಿದೆ. ಸಾಲದ ಹೊರೆಯಿಂದಾಗಿ ರಾಜ್ಯದಲ್ಲಿ...

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ಕೊನೆ ಇಲ್ಲದಂತಾಗಿದೆ. ಸಾಲದ ಹೊರೆಯಿಂದಾಗಿ ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ಹೆಚ್ಚಾಗುತ್ತಿದ್ದು, ಮಂಗಳವಾರ ಕೂಡ ಪ್ರತ್ಯೇಕ ಸ್ಥಳಗಳಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಮಕೂರು ಜಿಲ್ಲೆ ಸಿರಾ ತಾಲೂಕಿನ ಬಂದಕುಂಟೆ ಗ್ರಾಮದ ಜಿ. ರಾಮಕೃಷ್ಣಪ್ಪ ಅ.ಕೃಷ್ಣಪ್ಪ (40), ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೈದೂರು ಗ್ರಾಮದ ಅಶೋಕ ಮಡಿವಾಳರ (45) ಹಾಗೂ ರಾಮನಗರ ಜಿಲ್ಲೆ ಬನ್ನಿಕುಪ್ಪೆ ಗ್ರಾಮದ ರೈತ, ವಕೀಲ ಪದವಿ ಪಡೆದಿದ್ದ ಲೋಕೇಶ್ (35) ಆತ್ಮಹತ್ಯೆಗೆ ಶರಣಾದ ರೈತರು.
ಶಿರಾ ತಾಲೂಕಿನ ಬಂದಕುಂಟೆ ಗ್ರಾಮದ ಜಿ.ರಾಮಕೃಷ್ಣಪ್ಪ ಅ. ಕೃಷ್ಣಪ್ಪ (40) ಎಂಬುವರೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಬೆಳೆ ಸಾಲ, ಕುರಿ ಸಾಲ ಹಾಗೂ ಇನ್ನಿತರೆ ಸಾಲ ಸೇರಿ ಒಂದೂವರೆ ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ರಾಮಕೃಷ್ಣಪ್ಪ ಸೌತೆಕಾಯಿ ಬೆಳೆದಿದ್ದು, ದುರದೃಷ್ಣವಶಾತ್ ಸೌತೆಕಾಯಿ ಬೆಳೆಗೆ ವೈರಸ್ ಬಂದು ಬೆಳೆ ನಷ್ಟದಿಂದ ಕಂಗಾಲಾಗಿದ್ದರೆನ್ನಲಾಗಿದೆ. ಸಾಲ ತೀರಿಸಲಾಗದೆ ಮನನೊಂದು ತಮ್ಮ ಜಮೀನಿನಲ್ಲಿರುವ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಮತ್ತೋರ್ವ ರೈತನು ತನ್ನ ಮೇಲಿನ ಸಾಲದ ಹೊರೆಯಿಂದ ಮುಕ್ತನಾಗದ ಹಂತ ತಲುಪಿ ಆತ್ಮಹತ್ಯೆಗೆ ಶರಣಾದ ಘಟನೆ ರಾಣೆಬೆನ್ನೂರ ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಜರುಗಿದೆ. ಮೈದೂರು ಗ್ರಾಮದ ಅಶೋಕ ಮಡಿವಾಳರ (45) ಎಂಬ ರೈತನೇ ತನ್ನ ಜಮೀನು ಬಳಿಯ ಅಡವಿಯಲ್ಲಿ ನಿನ್ನೆ ರಾತ್ರಿ ವಿಷ ಸೇವಿಸಿ ಜೀವನ ಯಾತ್ರೆ ಮುಗಿಸಿದ ಅನ್ನದಾತ.
ಇನ್ನೂ ರಾಮನಗರ ಜಿಲ್ಲೆ ಬನ್ನಿಕುಪ್ಪೆ ಗ್ರಾಮದ ರೈತನೊಬ್ಬ ಸಾಲದ ಬಾಧೆ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾಲದ ಬಾಧೆಗೆ ಆತ್ಮಹತ್ಯೆಗೆ ಶರಣಾಗಿರುವ ರೈತ ಲೋಕೇಶ(35). ವಕೀಲ ಪದವಿ ಪಡೆದಿದ್ದರು ರೈತನಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದನೆಂದು, ಬ್ಯಾಂಕ್‍ಗಳ ಮತ್ತು ಕೈಸಾಲದ ಹಿಂಸೆ ತಾಳಲಾರದೆ ರಾತ್ರಿ ಅವನ ಮನೆಯ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಿಗ್ಗೆ ದನ ಕರುಗಳನ್ನು ಹೊರಗೆ ಕಟ್ಟಲು ಹೋದಾಗ ಕುಟುಂಬದವರು ನೋಡಿಕೊಂಡರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


