ನಿರ್ಮಾಪಕರ ಧರಣಿ: ಭಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ, ಅಂಬರೀಶ್ ವ್ಯಂಗ್ಯ
ಸ್ಯಾಂಡಲ್‌ವುಡ್ ಚಿತ್ರರಂಗದ ನಿರ್ಮಾಪಕರು ಧರಣಿ ನಡೆಸುತ್ತಿದ್ದು, ಈ ಸಂಬಂಧ ಮಾತನಾಡಿದ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅವರು ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್...

ಬೆಂಗಳೂರು: ಸ್ಯಾಂಡಲ್‌ವುಡ್ ಚಿತ್ರರಂಗದ ನಿರ್ಮಾಪಕರು ಧರಣಿ ನಡೆಸುತ್ತಿದ್ದು, ಈ ಸಂಬಂಧ ಮಾತನಾಡಿದ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅವರು ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್(ಬಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ) ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲಾವಿದರ ಸಂಘದಿಂದ ನಮ್ಮ ಸಮಸ್ಯೆಗಳಿಗೆ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಆರೋಪಿಸಿ ಸ್ಯಾಂಡಲ್‌ವುಡ್ ಚಿತ್ರರಂಗದ ನಿರ್ಮಾಪಕರು ಕಳೆದ ಹದಿನೇಳು ದಿನಗಳಿಂದ ಧರಣಿ ಕುಳಿತಿದ್ದು, ಅಂಬರೀಶ್ ಅವರ ಈ ಹೇಳಿಕೆ ನಿರ್ಮಾಪಕರು ಸಹನೆ ಕೆಡುವಂತೆ ಮಾಡಿದೆ.
ತಮ್ಮ ಬಳಿಗೆ ಚರ್ಚಿಸಲು ಬಂದಿದ್ದ ನಿರ್ಮಾಪಕರಾದ ಮುನಿರತ್ನ ಹಾಗೂ ಕೆ.ಮಂಜು ಚರ್ಚಿಸಿದ ಬಳಿಕ ಮಾತನಾಡಿದ ಅಂಬರೀಶ್, ನನ್ನ ಕೆಲಸಕ್ಕಾಗಿ ಬಂದಿದ್ದಲ್ಲ. ಈಗ ನನ್ನ ವೃತ್ತಿಯೂ ಅದಲ್ಲ, ನಾನು ಬಂದಿದ್ದು ಚಿತ್ರರಂಗಕ್ಕೋಸ್ಕರ, ಈಗ ಸಮಸ್ಯೆ ಇರುವರು ಯಾರು? ಸಮಸ್ಯೆ ಇರುವರು ಅಲ್ಲಿ ಕೂಡಾಗುತ್ತಿದ್ದಾರೆ. ಹಿಂದೆ ಬಿಕ್ಷುಕರಿಗೆ 1 ರುಪಾಯಿ ಕೊಟ್ರೆ ಸುಮ್ಮನೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆಗಿಲ್ಲ, 10 ರುಪಾಯಿ ಕೊಡಬೇಕು. ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್, ಬೆಗ್ಗರ್ಸ್ ಆರ್ ನಾಟ್ ಚೂಚರ್ಸ್ ಎಂದು ವ್ಯಂಗ್ಯವಾಡಿದ್ದಾರೆ.
ಕಲಾವಿದರ್ಯಾರು ನಿರ್ಮಾಪಕರ ಬಳಿಗೆ ಹೋಗುವುದಿಲ್ಲ ನಿರ್ಮಾಪಕರೇ ಕಲಾವಿದರ ಬಳಿ ಬರುತ್ತಾರೆ. ಸಮಸ್ಯೆಗಳಿರುವ ಜನ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ ಅವರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವತ್ತ ಯೋಚಿಸಬೇಕು ಎಂದು ನಿರ್ಮಾಪಕರ ವಿರುದ್ಧ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


