ರೈಲ್ವೇ ಸೇವೆ ಖಾಸಗಿ ವಲಯಕ್ಕೆ ಸೇರಿಸುವಂತೆ ಶಿಫಾರಸು?
ಸರಕು ಸಾಗಾಣಿಕೆ ರೈಲಿನ ನಂತರ ಪ್ಯಾಸೆಂಜರ್ (ಪ್ರಯಾಣಿಕ) ರೈಲು ಸೇವೆಗಳನ್ನು ಖಾಸಗಿ ವಲಯಕ್ಕೆ ಸೇರಿಸಬೇಕೆಂದು ಬಿಬೇಕ್ ...

ನವದೆಹಲಿ: ಸರಕು ಸಾಗಾಣಿಕೆ ರೈಲಿನ ನಂತರ ಪ್ಯಾಸೆಂಜರ್ (ಪ್ರಯಾಣಿಕ) ರೈಲು ಸೇವೆಗಳನ್ನು ಖಾಸಗಿ ವಲಯಕ್ಕೆ ಸೇರಿಸಬೇಕೆಂದು ಬಿಬೇಕ್ ದೆಬ್ರೋಯ್ ನೇತೃತ್ವದ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿದೆ. ಭಾರತೀಯ ರೇಲ್ವೆಯಲ್ಲಿ ಸಮಯಾನುಸಾರವಾಗಿ ಬದಲಾವಣೆಗಳನ್ನು ತರುವ ಬಗ್ಗೆ ನಿರ್ದೇಶನ ನೀಡುವ ಸಮಿತಿಯೇ ಖಾಸಗಿ ವಲಯಕ್ಕೆ ಸೇರಿಸುವ ಬಗ್ಗೆ ಶಿಫಾರಸು ಮಾಡಿದೆ.
ಪ್ರಯಾಣಿಕ ರೈಲು ಸಂಚಾರವನ್ನು ಖಾಸಗಿ ಕಂಪನಿಗಳು ನಡೆಸುವುದಾದರೆ ಅದಕ್ಕೆ ಒಪ್ಪಿಗೆ ನೀಡಬೇಕು ಎಂಬುದಾಗಿದೆ ದೆಬ್ರೋಯ್ ಸಮಿತಿಯ ಶಿಫಾರಸು. ಈ ಶಿಫಾರಸು ಒಪ್ಪಿಕೊಂಡರೆ ಟಾಟಾ ಅಥವಾ ಬಿರ್ಲಾ ಸೇರಿದಂತೆ ಪ್ರಧಾನ ಖಾಸಗಿ ಕಂಪನಿಗಳು ರೈಲು ಸಂಚಾರ ಆರಂಭಿಸಬಹುದಾಗಿದೆ. ಆದರೆ ರೈಲ್ವೆಯನ್ನೇ ಖಾಸಗೀಕರಣಗೊಳಿಸಬೇಕೆಂದು ಸಮಿತಿ ಹೇಳಲಿಲ್ಲ.
ಒಂದು ವೇಳೆ ಈ ಶಿಫಾರಸನ್ನು ಸರ್ಕಾರ ಒಪ್ಪಕೊಂಡರೆ ರೈಲ್ವೇ ವಲಯದಲ್ಲಿ ಭಾರೀ ಬದಲಾವಣೆಗಳು ಉಂಟಾಗಲಿವೆ.
ಅದೇ ವೇಳೆ ರೇಲ್ವೇ ಸೇವೆಗಳ ಜತೆ ರೈಲ್ವೇಗಾಗಿ ಕಾರ್ಯವೆಸಗುವ ಶಾಲೆ, ಆಸ್ಪತ್ರೆ, ಕೆಟರಿಂಗ್ ಸೇವೆಗಳಲ್ಲಿ ಬದಲಾವಣೆ ಇಲ್ಲವೇ ಅವುಗಳು ನಿರ್ಬಂಧಕ್ಕೊಳಗಾಗುವ ಸಾಧ್ಯತೆಗಳೂ ಇರುತ್ತವೆ. ಮಾತ್ರವಲ್ಲದೆ ರೈಲ್ವೇಯನ್ನು ವಿವಿಧ ಬ್ಯುಸಿನೆಸ್ ಯುನಿಟ್‌ಗಳಾಗಿ ವಿಭಜಿಸುವ ಬಗ್ಗೆಯೂ ಶಿಫಾರಸು ಇದೆ.
ಪ್ರಸ್ತುತ ಸಮಿತಿ, ಈ ಎಲ್ಲ ಶಿಫಾರಸುಗಳನ್ನು ಇಂದು ಸರ್ಕಾರದ ಮುಂದಿಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


