ಪ್ರಧಾನ ಸುದ್ದಿ

ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಇರುವ ನೋಟು ಮುದ್ರಿಸಿ

ಮಕ್ಕಳ ನೆಚ್ಚಿನ ತಾತ, ಪೀಪಲ್ಸ್ ಪ್ರೆಸಿಡೆಂಟ್ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಸಕಲ ಸರ್ಕಾರಿ ಗೌರವಗಳೊಂದಿಗೆ ಭೂ ತಾಯಿ ಒಡಲು ಸೇರಿದ

ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಇರುವ ನೋಟು ಮುದ್ರಿಸಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮಕ್ಕಳ ನೆಚ್ಚಿನ ತಾತ, ಪೀಪಲ್ಸ್ ಪ್ರೆಸಿಡೆಂಟ್ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಸಕಲ ಸರ್ಕಾರಿ ಗೌರವಗಳೊಂದಿಗೆ ಭೂ ತಾಯಿ ಒಡಲ ಸೇರಿದ ಬೆನ್ನಲ್ಲೇ, ಮಿಸೈಲ್ ಮ್ಯಾನ್ ಕಲಾಂರ ಚಿತ್ರವನ್ನು ನೋಟಿನಲ್ಲಿ ಮುದ್ರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಆಗ್ರಹಿಸುತ್ತಿದ್ದಾರೆ.

ದೇಶಕ್ಕೆ ಹಲವು ಮಹತ್ವದ ಸಾಧನೆಗಳನ್ನು ನೀಡಿದ ಡಾ.ಕಲಾಂ ಅವರ ಚಿತ್ರ ಸಾವಿರ ರೂಪಾಯಿ ನೋಟಿನಲ್ಲಿ ಮುದ್ರಿಸಿರುವ ಚಿತ್ರಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಪ್ರಸ್ತುತ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಚಿತ್ರ ಕರೆನ್ಸಿ ನೋಟಿನಲ್ಲಿ ಆರ್ ಬಿಐ ಮುದ್ರಿಸುತ್ತಿದೆ.ಈಗ ಹಿರಿಯ ವಿಜ್ಞಾನಿ, ಮಿಸೈಲ್ ಮ್ಯಾನ್ ಡಾ.ಎಪಿಜೆ ಕಲಾಂ ಅವರ ಚಿತ್ರವನ್ನು ನೋಟಿನಲ್ಲಿ ಮುದ್ರಿಸಿ ಎಂಬುದು ಭಾರತೀಯರ ಆಗ್ರಹ ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ.

ಸೋಮವಾರ ಮೇಘಾಲಯದ ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಮಾಡುತ್ತಲೇ ಹೃದಯಾಘಾತದಿಂದ ಡಾ.ಕಲಾಂ ನಿಧನ ಹೊಂದಿದ್ದರು. ಗುರುವಾರ ತಮಿಳುನಾಡಿನ ರಾಮೇಶ್ವರಂನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಾಂ ಅವರ ಅಂತ್ಯಸಂಸ್ಕಾರ ನಡೆಸಲಾಯ್ತು. .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.