ಪಾಸ್ ಪೋರ್ಟ್: ಆನ್‍ಲೈನ್‍ನಲ್ಲೇ ಪರಿಶೀಲನೆ
ಪಾಸ್‍ಪೋರ್ಟ್‍ಗಾಗಿ ಪೊಲೀಸ್ ಪರಿಶೀಲನೆ ಹಾಗೂ ನವೀಕರಣ ಪ್ರಕ್ರಿಂಯೆ ಇನ್ನು ಮುಂದೆ ಆನ್‍ಲೈನ್ ಸ್ವರೂಪ ಪಡೆಯಲಿದ್ದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗುತ್ತಿದೆ...

Published On :
ಬೆಂಗಳೂರು: ಪಾಸ್‍ಪೋರ್ಟ್‍ಗಾಗಿ ಪೊಲೀಸ್ ಪರಿಶೀಲನೆ ಹಾಗೂ ನವೀಕರಣ ಪ್ರಕ್ರಿಂಯೆ ಇನ್ನು ಮುಂದೆ ಆನ್‍ಲೈನ್ ಸ್ವರೂಪ ಪಡೆಯಲಿದ್ದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೊಳಿಸಲಾಗುತ್ತಿದೆ.
ಸದ್ಯ ಪಾಸ್‍ಪೋರ್ಟ್ ಪೊಲೀಸ್ ಪರಿಶೀಲನೆ ಪ್ರಕ್ರಿಂಯೆ 20 ದಿನಗಳ ತೆಗೆದುಕೊಳ್ಳುತ್ತಿದ್ದು ಆನ್‍ಲೈನ್ ಸ್ವರೂಪ ಪಡೆದ ನಂತರ 1 ವಾರ ಅಥವಾ ಅದಕ್ಕಿಂತ ಕಡಿಮೆ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಆನ್ ಲೈನ್ ಪರಿಶೀಲನೆ ನವೆಂಬರ್‍ನಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಪರಿಣಾಮಕಾರಿ ಪೊಲೀಸಿಂಗ್‍ಗಾಗಿ ಸಾಮಾಜಿಕ ಜಾಲ ತಾಣಗಳ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಬೆಂಗಳೂರು ಪೊಲೀಸ್ ಘಟಕವನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಬೆಂಗಳೂರು ಪೊಲೀಸ್ ಘಟಕವನ್ನು ಆಯ್ಕೆ ಮಾಡಿದ್ದರು. ಪೈಲಟ್ ಯೋಜನೆಯಾ ಗಿ ಬೆಂಗಳೂರಿನಲ್ಲಿ ಇದನ್ನು ಜಾರಿಗೊಳಿಸಿ ನಂತರ ದೇಶಾದ್ಯಂತ ವಿಸ್ತರಿಸುವ ಯೋಜನೆ ಹೊಂದಲಾಗಿದೆ.
ಈ ಉದ್ದೇಶಕ್ಕಾಗಿ ದೇಶದಲ್ಲಿರುವ ಎಲ್ಲಾ ಎಸ್ಪಿ ದರ್ಜೆಯ ಅಧಿಕಾರಿಗಳಿಗೆ ಅರ್ಜಿದಾರರ ರಾಷ್ಟ್ರೀಯ ಜನಸಂಖ್ಯೆ ದಾಖಲಾತಿ (ಎನ್‍ಪಿಆರ್), ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ ಮಾಹಿತಿ ಪಡೆದುಕೊಳ್ಳಲು ಗೃಹ ಇಲಾಖೆ ಅವಕಾಶ ಕಲ್ಪಿಸಲಿದೆ. ಇದೇ ವೇಳೆ `ಅಪರಾಧ ಮತ್ತು ಅಪರಾಧಿಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆ' (ಸಿಸಿಟಿಎನ್‍ಎಸ್) ಸಹಾಯದಿಂದ ಅರ್ಜಿದಾರನ ಗುರುತು, ವಿಳಾಸ, ಅಪರಾಧ ಹಿನ್ನೆಲೆ ಹಾಗೂ ಇತರ ಮಾಹಿತಿಯನ್ನು ಆನ್‍ಲೈನ್ ಮೂಲಕ ಪರಿಶೀಲನೆ ನಡೆಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruKarnataka High Courtಕರ್ನಾಟಕ ಹೈಕೋರ್ಟ್ಅಪರಾಧ ಪ್ರಕರಣcriminal caseಪಾಸ್ ಪೋರ್ಟ್passport department
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


