ನಿಲ್ಲದ ರೈತರ ಸರಣಿ ಆತ್ಮಹತ್ಯೆ: ಮತ್ತೆ ಐದು ಸಾವು
ಸಾಲಬಾಧೆ ರೈತರ ಅಪೋಷನ ತೆಗೆದುಕೊಳ್ಳುವುದು ನಿಂತಿಲ್ಲ. ಆರ್ಥಿಕ ಸಂಕಷ್ಟದಿಂದ ಬೇಸತ್ತ ನಾಲ್ವರು ರೈತರು...

ಬೆಂಗಳೂರು: ಸಾಲಬಾಧೆ ರೈತರ ಅಪೋಷನ ತೆಗೆದುಕೊಳ್ಳುವುದು ನಿಂತಿಲ್ಲ. ಆರ್ಥಿಕ ಸಂಕಷ್ಟದಿಂದ ಬೇಸತ್ತ ನಾಲ್ವರು ರೈತರು ಸೋಮವಾರ ಆತ್ಮಹತ್ಯೆ ದಾರಿ ತುಳಿದಿದ್ದಾರೆ.
ಕೆ.ಆರ್. ಪೇಟೆ ತಾಲೂಕು ಬಿಲ್ಲೇನಹಳ್ಳಿಯ ರಂಗೇಗೌಡ (60), ಚನ್ನಪಟ್ಟಣ ತಾಲೂಕು ಕೃಷ್ಣಾಪುರದ ಚಂದ್ರು(32), ಅಥಣಿ ತಾಲೂಕು ಸವದಿಯ ಗುಂಡು ನಿಂಗಪ್ಪಾ ಕಡೋಲಿ (65), ಶನಿವಾರಸಂತೆ ಸಮಿಪದ ನಿಡ್ತ ಗ್ರಾಮದ ಎನ್.ಆರ್. ದೇವಾನಂದ್ (40) ಸಾವಿಗೀಡಾದವರು.
ರಂಗೇಗೌಡರು ಕೊಳವೆ ಬಾವಿ ಕೊರೆಸಲು ಬ್ಯಾಂಕ್‍ಗಳಿಂದ ಲಕ್ಷಾಂತರ ರುಪಾಯಿ ಸಾಲ ಮಾಡಿಕೊಂಡಿದ್ದರು. ಕೊನೆಗೆ ಕೊಳವೆಬಾವಿಯಲ್ಲೂ ನೀರು ನಿಂತಿದ್ದರಿಂದ ತೀವ್ರ ಹತಾಶರಾಗಿದ್ದರು. ಚನ್ನಪಟ್ಟಣದ ಚಂದ್ರು ರೇಷ್ಮೆ ಕೃಷಿಗೆ ರು.4.50 ಲಕ್ಷ ಸಾಲ ಮಾಡಿದ್ದರು, ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಸಿಗದೇ ನೊಂದಿದ್ದರು.
ಅಥಣಿ ತಾಲೂಕಿನ ಗುಂಡು ನಿಂಗಪ್ಪಾ ಕಡೋಲಿ ರು.5 ಲಕ್ಷಕ್ಕೂ ಮಿಗಿಲಾಗಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವ ಮಾರ್ಗ ಕಾಣದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಡ್ತ ಗ್ರಾಮದ ಬಾಳೆ ಕೃಷಿಕ ದೇವಾನಂದ್, ಲೇವಾದೇವಿದಾರನಿಂದ ರು.1 ಲಕ್ಷ ಸಾಲ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಖಾಲಿ ಚೆಕ್ ಬರೆದುಕೊಟ್ಟಿದ್ದರು.
ಬಡ್ಡಿ ಕೊಡದ ಹಿನ್ನೆಲೆಯಲ್ಲಿ ಲೇವಾದೇವಿದಾರ ಚೆಕ್‍ಅನ್ನು ಬ್ಯಾಂಕ್ ಹಾಕಿದ್ದರು. ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಲೇವಾದೇವಿದಾರ ತಾನು ದೇವಾನಂದ್ ಗೆ ರು.6ಲಕ್ಷ ಕೊಟ್ಟಿರುವುದಾಗಿ ಸೋಮವಾರ ಪೇಟೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರಿಂದ ಮನನೊಂದ ದೇವಾನಂದ್ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯಲ್ಲಿ ಸಾಲಬಾಧೆಯ ಜತೆಗೆ ರೇಷ್ಮೆ ಗೂಡಿನ ಧಾರಣೆ ಕುಸಿತದಿಂದ ಕಂಗೆಟ್ಟು ರೈತ ಶಶಿಕುಮಾರ್(35) ಸೋಮವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್‍ನಲ್ಲಿ ರು.3 ಲಕ್ಷ ಚಿನ್ನಾಭರಣ ಸಾಲ, ಖಾಸಗಿ ಲೇವಾದೇವಿಗಾರರಿಂದ ರು.3 ಲಕ್ಷ ಸೇರಿದಂತೆ ಒಟ್ಟಾರೆ ರು.6 ಲಕ್ಷ ಸಾಲ ಮಾಡಿದ್ದರು. ಮೂರು ದಿನ ಹಿಂದೆ ವಿಷ ಸೇವಿಸಿದ್ದ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ಮಾರುತಿ ರುದ್ರಪ್ಪಗುದಮೇಶಿ (45) ಸೋಮವಾರ ಎಸ್‍ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


