ಪ್ರಧಾನ ಸುದ್ದಿ

ಮಕ್ಕಳಿಲ್ಲದ ಗೆಳೆಯನಿಗೆ ಉಡುಗೊರೆ ನೀಡಲು ಮಗುವೊಂದನ್ನು ಅಪಹರಿಸಿದ ಮಹಿಳೆ

ಮಕ್ಕಳಿಲ್ಲದ ತನ್ನ ಗೆಳೆಯನಿಗೆ ಉಡುಗೊರೆ ನಿಡಲು ನಾಲ್ಕು ತಿಂಗಳ ಗಂಡು ಮಗುವೊಂದನ್ನು ಅಪಹರಿಸಿದ್ದ ಮಹಿಳೆಯನ್ನು ದಬೀರಪುರದ ಪೋಲಿಸರು ಬುಧವಾರ

ಮಕ್ಕಳಿಲ್ಲದ ಗೆಳೆಯನಿಗೆ ಉಡುಗೊರೆ ನೀಡಲು ಮಗುವೊಂದನ್ನು ಅಪಹರಿಸಿದ ಮಹಿಳೆ
ಸಾಂದರ್ಭಿಕ ಚಿತ್ರ
Published On :

ಮಕ್ಕಳಿಲ್ಲದ ತನ್ನ ಗೆಳೆಯನಿಗೆ ಉಡುಗೊರೆ ನಿಡಲು ನಾಲ್ಕು ತಿಂಗಳ ಗಂಡು ಮಗುವೊಂದನ್ನು ಅಪಹರಿಸಿದ್ದ ಮಹಿಳೆಯನ್ನು ದಬೀರಪುರದ ಪೋಲಿಸರು ಬುಧವಾರ ಬಂಧಿಸಿದ್ದಾರೆ. ಮಗುವನ್ನು ಅವರ ಪೋಷಕರಿಗೆ ಹಿಂದಿರುಗಿಸಲಾಗಿದೆ.

ಪೊಲೀಸರ ಪ್ರಕಾರ ಆಪಾದಿತೆ ದೋಮಲಪಾಳ್ಯ ಭಾಗ್ಯ, ಗ್ರೇಟ್ ಹೈದರಾಬಾದ್ ಮಹಾನಗರ ಪಾಲಿಕೆಯ ಗುತ್ತಿಗೆ ನೌಕರಳು. ಸಿಸಿಟಿವಿಯ ಜಾಡು ಹಿಡಿದು ಪೊಲೀಸರು ಅವಳನ್ನು ಬಂಧಿಸಿದ್ದಾರೆ.

ಮಗುವಿನ ತಾಯಿ ಮಂಜುಲಥಾ, ಸಚಿನ್ ಅವರ ಪತ್ನಿ ಕರ್ನಾಟಕದ ಹುಬ್ಬಳ್ಳಿ ಮೂಲದವರು ಹಾಗೂ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಜುಲೈ ೫ ರಂದು ದಬೀಪುರ ಫೈ ಓವರ್ ಕಳಗಿನ ಆಟೋ ರಿಪೇರಿ ಅಂಗಡಿಯ ಹಿಂದೆ ಮಗುವಿನೊಂದಿಗೆ ಪೋಷಕರು ಮಲಗಿದ್ದಾಗ, ಮಗು ಮಹೇಶ್ ಕಾಣೆಯಾಗಿದೆ. ನಂತರ ಜುಲೈ ೧೦ ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಸಿಟಿವಿಯಲ್ಲಿ ಭಾಗ್ಯ ಸುಮಾರು ಬೆಳಗ್ಗೆ ೬ ಘಂಟೆಗೆ ಮಗುವನ್ನು ಅಪಹರಿಸುತ್ತಿದ್ದು ದಾಖಲೆಯಾಗಿದೆ. ತನ್ನ ಮಾಜಿ ಮೇಲ್ವಿಚಾರಣಾಧಿಕಾರಿ ನರಸಿಂಹ ಎಂಬುವವನ ಜೊತೆ ಗೆಳೆತನ ಸಾಧಿಸಿದ್ದ ಭಾಗ್ಯ, ನರಸಿಂಹನಿಗೆ ಮಕ್ಕಳಿಲ್ಲದ ಕೊರಗನ್ನು ನೀಗಿಸಲು ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾಳೆ. ಇದು ನರಸಿಂಹನೀಗೂ ತಿಳಿದಿತ್ತು ಹಾಗೂ ಅವನೂ ಇದರಲ್ಲಿ ಭಾಗಿಯಾಗಿದ್ದನು ಎಂದು ತಿಳಿದುಬಂದಿದೆ.

ಭಾಗ್ಯ, ನರಸಿಂಗ ಮತ್ತೊಬ್ಬ ಗೆಳೆಯ ರಾಮುಲು ಇವರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.