ತಾಂತ್ರಿಕತೆ ನಗರಗಳಲ್ಲಿ ಬೆಂಗಳೂರು ನಂ.12
ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಾಗತಿಕ ಮಟ್ಟದ ಮತ್ತೊಂದು ಹೆಗ್ಗಳಿಕೆ ಸಿಕ್ಕಿದೆ. ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನ ನಗರಗಳಲ್ಲಿ ಬೆಂಗಳೂರು 12ನೇ ಸ್ಥಾನದಲ್ಲಿದೆ...

ನವದೆಹಲಿ: ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಾಗತಿಕ ಮಟ್ಟದ ಮತ್ತೊಂದು ಹೆಗ್ಗಳಿಕೆ ಸಿಕ್ಕಿದೆ. ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನ ನಗರಗಳಲ್ಲಿ ಬೆಂಗಳೂರು 12ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಲಂಡನ್, ಸ್ಯಾನೋಸೆ ಮತ್ತು ಬೀಜಿಂಗ್ ಮೊದಲ ಮೂರು ಸ್ಥಾನಗಳಲ್ಲಿವೆ.
ಕನ್ಸಲ್ಟೆಂಟ್ ಕಂಪನಿ ಜೋನ್ಸ್ ಲ್ಯಾಂಗ್ ಲಾಸಲೆ (ಜೆಎಲ್ ಎಲ್) ನಡೆಸಿರುವ `ಸಿಟಿ ಮೊಮೆಂಟಮ್ ಇಂಡೆಕ್ಸ್' ಸಮೀಕ್ಷೆಯಲ್ಲಿ ಜಗತ್ತಿನ 20 ಅತ್ಯಾಧುನಿಕ ತಂತ್ರಜ್ಞಾನ ನಗರಗಳ ಪಟ್ಟಿ ಮಾಡಿದೆ. ಜೆಎಲ್‍ಎಲ್ ಪ್ರತಿ ವರ್ಷ ಈ ಸಮೀಕ್ಷೆ ನಡೆಸಲಿದೆ. ಜಗತ್ತಿನ 20 ತಂತ್ರಜ್ಞಾನ ನಗರಗಳಲ್ಲಿ ಬೆಂಗಳೂರು ಸೇರಿದೆ ಎಂದು ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥರಾದ ಅನೂಜ್ ಪುರಿ ಹೇಳಿದ್ದಾರೆ.
ಉತ್ತಮ ಆರ್ಥಿಕ ಬೆಳವಣಿಗೆ, ಹೂಡಿಕೆ ಮೂಲಸೌಕರ್ಯ, ಸ್ಟಾರ್ಟ್‍ಅಪ್‍ಗಳು ಇಲ್ಲಿ ನೆಲೆಸಿರುವುದು, ಕಚೇರಿ ಆರಂಭಿಸಲು ಸ್ಥಳಗಳ ಲಭ್ಯತೆ ಮತ್ತಿತರ ಅಂಶಗಳು ಬೆಂಗಳೂರಿಗೆ ಈ ಸ್ಥಾನಮಾನ ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿನ ಆರ್ಥಿಕ ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆ ದೊಡ್ಡ ದೊಡ್ಡ ಕಂಪನಿಗಳು ಇಲ್ಲಿ ಬಂದು ನೆಲೆಸಲು ಆಕರ್ಷಿಸುತ್ತಿದೆ. ಈ ವರ್ಷದ ಸಮೀಕ್ಷೆಗೆ ಹಲವು ಹೊಸ ಅಂಶಗಳನ್ನೂ ಸೇರಿಸಲಾಗಿತ್ತು. ಎಲ್ಲದರಲ್ಲೂ ಬೆಂಗಳೂರು ಮುಂದಿತ್ತು. ಕಳೆದೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಸ್ಟಾರ್ಟ್‍ಅಪ್‍ಗಳ ನೋಂದಣಿ ಹೆಚ್ಚಿದೆ. ಇದು ಈ ನಗರದ ಸಾಮಥ್ರ್ಯ, ತಂತ್ರಜ್ಞಾನದಲ್ಲಿನ ಅನ್ವೇಷಣೆ ಮತ್ತು ಆಳವನ್ನು ತೋರಿಸುತ್ತದೆ ಎಂದು ಪುರಿ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ತೊಡಗಿಸುತ್ತಿರುವುದು, ಮೆಟ್ರೊ, ಹೊರ ವರ್ತುಲ ರಸ್ತೆ ನಿರ್ಮಾಣ ಹಾಗೂ ವಿದೇಶಿ ನೇರ ಹೂಡಿಕೆ ಹೆಚ್ಚುತ್ತಿರುವುದು ಬೆಂಗಳೂರಿಗೆ ಈ ಮಾನ್ಯತೆಯನ್ನು ತಂದುಕೊಟ್ಟಿದೆ. ಮಾತ್ರವಲ್ಲದೆ ವಿದೇಶಿ ನೇರ ಹೂಡಿಕೆ ಪ್ರಮಾಣ ಶೇ.8ರಷ್ಟು ಏರಿಕೆ ಕಂಡಿದ್ದು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿಗೆ ಬೆಂಗಳೂರನ್ನು ತಂದು ನಿಲ್ಲಿಸಿದೆ ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ಕಚೇರಿಗೆ ಅತ್ಯುತ್ತಮವಾದ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಏಷ್ಯಾ ಪೆಸಿಫಿಕ್ ವಲಯದಲ್ಲಿ ಇತರ ನಗರಗಳನ್ನು ಹಿಂದಿಕ್ಕಿದೆ. ಐಟಿ ಕಂಪನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿ ಸ್ಥಳಗಳನ್ನು ಖರೀದಿಸುತ್ತಿವೆ. ಇದು ಕಚೇರಿ ಸ್ಥಳಗಳಿಗೆ ಹೆಚ್ಚಿನ ಬೇಡಿಕೆ ತಂದಿದೆ. ಇದರಿಂದ ಕಚೇರಿ ಸ್ಥಳಗಳ ಬಾಡಿಗೆ ಪ್ರಸಕ್ತ ವರ್ಷದಲ್ಲಿ ಶೇ.5 ರಿಂದ 10ರಷ್ಟು ಹೆಚ್ಚಲಿದೆ ಎಂದು. 2015-16ನೇ ಸಾಲಿನಲ್ಲಿ ನಗರದಲ್ಲಿ 12 ದಶಲಕ್ಷ ಚದರಡಿ ಕಚೇರಿ ಸ್ಥಳ ಲಭ್ಯವಾಗುವ ಅಂದಾಜಿದೆ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿನ 20 ನಗರಗಳನ್ನು ಹೊರತುಪಡಿಸಿದ ನಗರಗಳಲ್ಲಿ ದೆಹಲಿ ಮತ್ತು ಮುಂಬೈ ಸ್ವಲ್ಪ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಾ ಸಾಗಿವೆ ಎಂದು ವರದಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


