ಪ್ರಧಾನ ಸುದ್ದಿ

ಅಮರನಾಥ ಯಾತ್ರೆ: ಮೂರನೇ ತಂಡದ ಪ್ರಯಾಣ ಆರಂಭ

ಸುಮಾರು ೨೦೦೦ ಯಾತ್ರಿಕರ ಮತ್ತೊಂದು ತಂಡ ಹಿಮಾಲಯ ಶಿವ ಗುಹಾ ದೇವಾಲಯಕ್ಕೆ ಶನಿವಾರ ಜಮ್ಮುವಿನಿಂದ ಹೊರಟಿದೆ.

ಅಮರನಾಥ ಯಾತ್ರೆ: ಮೂರನೇ ತಂಡದ ಪ್ರಯಾಣ ಆರಂಭ
ಅಮರನಾಥ ಗುಹಾ ದೇವಾಲಯದ ಹಿಮಲಿಂಗ
Published On :

ಜಮ್ಮು: ಸುಮಾರು ೨೦೦೦ ಯಾತ್ರಿಕರ ಮತ್ತೊಂದು ತಂಡ ಹಿಮಾಲಯ ಶಿವ ಗುಹಾ ದೇವಾಲಯಕ್ಕೆ ಶನಿವಾರ ಜಮ್ಮುವಿನಿಂದ ಹೊರಟಿದೆ.

"೪೦೬ ಮಹಿಳೆಯರು, ೨೫ ಮಕ್ಕಳನ್ನು ಒಳಗೊಂಡ ೧೮೪೯ ಭಕ್ತಾದಿಗಳ ಮೂರನೆ ತಂಡ ಅಮರನಾಥ ಯಾತ್ರೆಗೆ ವಾಹನಗಳ ಮೂಲಕ ಜಮ್ಮುವಿನಿಂದ ಹೊರಟಿತು" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಲ್ಲಿಯವರೆಗೂ ೧೬೦೦೦ ಭಕ್ತಾದಿಗಳು ಅಮರನಾಥ ಗುಹಾ ದೇವಾಲಯದ ಹಿಮಲಿಂಗವನ್ನು  ದರ್ಶನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಮರನಾಥ ದೇವಾಲಯ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂದ ೧೪೫೦೦ ಅಡಿ ಮೇಲಿದೆ.

ಆಗಸ್ಟ್ ೨೯ ರಂದು ಶ್ರಾವಣ ಪೂರ್ಣಿಮ ದಿನ ಅಮರನಾಥ ಯಾತ್ರೆಗೆ ತೆರೆ ಬೀಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.