ನಟ ಸಲ್ಮಾನ್ ವಿರುದ್ಧ ತಮಿಳು ಸಂಘಟನೆಗಳ ಪ್ರತಿಭಟನೆ
ಇತ್ತೀಚೆಗಷ್ಟೆ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಪರ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದ ಸಲ್ಮಾನ್ ಖಾನ್ ವಿರುದ್ದ ತಮಿಳು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮುಂಬೈ: ಇತ್ತೀಚೆಗಷ್ಟೆ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಪರ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದ ಸಲ್ಮಾನ್ ಖಾನ್ ವಿರುದ್ದ ತಮಿಳು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಎದುರು ತಮಿಳು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನಟ ಸಲ್ಮಾನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿವೆ. ಇನ್ನು ತಮಿಳು ನಾಡಿನಾದ್ಯಂತ ಸಲ್ಮಾನ್ ಖಾನ್ ಚಿತ್ರವನ್ನು ನಿಷೇಧಿಸುವಂತೆಯೂ ಕೂಡ ತಮಿಳು ಸಂಘಟನೆಗಳು ಆಗ್ರಹಿಸುತ್ತಿವೆ.
ಶ್ರೀಲಂಕಾದಲ್ಲಿದ್ದ ಎಲ್ ಟಿಟಿಇ ಸಂಘಟನೆಯ ವಿರುದ್ಧ ಯುದ್ಧ ಸಾರಿದ್ದ ರಾಜಪಕ್ಸೆ ಸರ್ಕಾರ ಅದರಲ್ಲಿ ಯಶಸ್ವಿ ಕೂಡ ಆಗಿತ್ತು. ಈ ಕಾರ್ಯಾಚರಣೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಭಾರತದ ತಮಿಳು ಸಂಘಟನೆಗಳು ಲಂಕಾ ತಮಿಳರಿಗೆ ರಾಜಪಕ್ಸೆ ಸರ್ಕಾರವು ಅನ್ಯಾಯವೆಸುಗುತ್ತಿದೆ ಎಂದು ಆರೋಪ ಮಾಡುತ್ತಾ ಬಂದಿವೆ.
ಇನ್ನು ತಮಿಳು ಚಿತ್ರರಂಗದ ಯಾವ ನಟರು ಕೂಡ ಶ್ರೀಲಂಕಾದಲ್ಲಿ ಚಿತ್ರೀಕರಣವನ್ನು ಮಾಡಬಾರದಂತೆಯೂ ಮತ್ತು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಾಕೀತು ಮಾಡಲಾಗಿತ್ತು. ಸ್ವತಃ ತಮಿಳು ಚಿತ್ರರಂಗವೇ ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಸುವ ಮತ್ತು ಲಂಕಾಗೆ ಹೋಗಿ ನಟಿಸುವ ನಟರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು.
ಸಲ್ಮಾನ್ ಖಾನ್ ಜೊತೆಯಲ್ಲಿ ರೆಡಿ ಚಿತ್ರದಲ್ಲಿ ಶ್ರೀಲಂಕಾಗೆ ಹೋಗಿ ನಟಿಸಿದ್ದ ನಟಿ ಆಸಿನ್ ರ ಮೇಲೆ ಕೂಡ ತಮಿಳು ಚಿತ್ರರಂಗ ನಿಷೇಧ ಹೇರಿತ್ತು. ಇದೀಗ ನಟ ಸಲ್ಮಾನ್ ಖಾನ್ ವಿರುದ್ಧ ತಮಿಳು ಸಂಘಟನೆಗಳು ಕೆಂಗಣ್ಣು ಬೀರಿದ್ದು, ತಮಿಳುನಾಡಿನಾಧ್ಯಂತ ಸಲ್ಮಾನ್ ಅವರ ಚಿತ್ರಗಳನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


