ಗುಜರಾತ್‌ನ ಪೋರಬಂದರ್ ನಲ್ಲಿ ಪಾಕ್ ಶಂಕಿತ ಉಗ್ರರ ಹಡಗು ಸ್ಫೋಟ
ಭಾರತ-ಪಾಕಿಸ್ತಾನ ಗಡಿಯಲ್ಲಿ ನಿರಂತದ ಗುಂಡಿನ ಕಾಳಗ ನಡೆಯುತ್ತಿರುವ ಬೆನ್ನಲ್ಲೇ ಗುಜರಾತ್‌ನ ಪೋರಬಂದರ್‌ನಲ್ಲಿ...

ನವದೆಹಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ನಿರಂತದ ಗುಂಡಿನ ದಾಳಿ ನಡೆಯುತ್ತಿರುವ ಬೆನ್ನಲ್ಲೇ ಗುಜರಾತ್‌ನ ಪೋರಬಂದರ್‌ನಲ್ಲಿ ಪಾಕಿಸ್ತಾನದ ಶಂಕಿತ ಉಗ್ರರ ಹಡಗೊಂದು ಪತ್ತೆಯಾಗಿದೆ.
ಮುಂಬೈ ದಾಳಿ ಮಾದರಿಯಲ್ಲೇ ಮತ್ತೊಂದು ದಾಳಿ ನಡೆಸಲು ಸಂಚು ರೂಪಿಸಿದ್ದ ಶಂಕಿತ ಉಗ್ರರು ಹೊಸ ವರ್ಷಚಾರಣೆ ವೇಳೆ ದೇಶದೊಳಗೆ ನುಗ್ಗಲು ಯತ್ನಿಸಿದ್ದರು. ಆದರೆ ಕರಾವಳಿ ಕಾವಲು ಪಡೆ ಪೊಲೀಸರು ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ.
ಕರಾವಳಿ ಕಾವಲು ಪಡೆ ಪೋಲಿಸರು ಡಿಸೆಂಬರ್ 31ರಂದು ತಡರಾತ್ರಿ ಕರಾಚಿಯ ಕೇತಿ ಪ್ರದೇಶದ ಬಳಿ ಬಂದಿದ್ದ ಪಾಕಿಸ್ತಾನದ ಮೀನುಗಾರಿಕಾ ಹಡಗನ್ನು ಪತ್ತೆ ಹಚ್ಚಿದ್ದು, ಸ್ಫೋಟಕ ವಸ್ತುಗಳೊಂದಿಗೆ ಹಡಗಿನಲ್ಲಿ ಆಗಮಿಸಿದ್ದ ನಾಲ್ವರು ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಪೋರಬಂದರ್‌ನಿಂದ ಸುಮಾರು 350 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಈ ಬೋಟ್ ಸ್ಫೋಟಗೊಂಡಿದ್ದು, ಸ್ಫೋಟಗೊಂಡ ನಂತರ ಬೋಟ್ ಸಮುದ್ರದ ಒಳಗೆ ಮುಳುಗಿದೆ. ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಶಂಕಿತ ಉಗ್ರರ ಹಡಗನ್ನು ಕರಾವಳಿ ಪಡೆ ಪೊಲೀಸರು ಹಿಂಬಾಲಿಸಿದ್ದಾರೆ. ಅಲ್ಲದೆ ಬೋಟ್ ನಿಲ್ಲಿಸುವಂತೆ ಸೂಚಿಸಿದ ನಂತರ ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ.
ಈ ಶಂಕಿತ ಬೋಟ್ ಪಾಕಿಸ್ತಾನ ಕರಾವಳಿಯನ್ನು ಬಿಡುತ್ತಿದ್ದಂತೆ National Technical Research Organisation (NTRO) ತಂಡ ಟ್ರ್ಯಾಕ್ ಮಾಡತೊಡಗಿತ್ತು. ಡೊರ್ನಿಯರ್ ಏರ್ ಕ್ರಾಫ್ಟ್ ಬಳಸಿ ಬೋಟ್ ನ ಚಲನವಲನದ ಬಗ್ಗೆ ನಿಗಾವಹಿಸುವಂತೆ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿತ್ತು. ಅದರಂತೆ ಭಾರತದ ಗಡಿ ಪ್ರವೇಶಿಸಿದ ಮೇಲೆ ಬೋಟ್ ವಶಕ್ಕೆ ಪಡೆಯಲು ಕಾವಲು ಪಡೆ ಯತ್ನಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


