'ಅಮ್ಮ'ನ ಹುಟ್ಟುಹಬ್ಬದ ದಿನ ಹುಟ್ಟಿದ ಮಕ್ಕಳಿಗೆ ತ್ವರಿತ ಉಡುಗೊರೆ
ಫೆಬ್ರವರಿ ೨೪ ರಂದು ಹುಟ್ಟುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಒಂದು ಸಿಹಿ ಸುದ್ದಿ. ಈ ದಿನ ಎಐಡಿಎಂಕೆ ಸುಪ್ರಿಮೋ ಜೆ ಜಯಲಲಿತಾ

ಮಧುರೈ: ಫೆಬ್ರವರಿ ೨೪ ರಂದು ಹುಟ್ಟುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಒಂದು ಸಿಹಿ ಸುದ್ದಿ. ಈ ದಿನ ಎಐಡಿಎಂಕೆ ಸುಪ್ರಿಮೋ ಜೆ ಜಯಲಲಿತಾ ಅವರ ಜನ್ಮ ದಿನವಾಗಿರುವುದರಿಂದ ಆ ದಿನ ಹುಟ್ಟಿದ ಮಕ್ಕಳಿಗೆ ತ್ವರಿತವಾಗಿ ಜನನ ಪ್ರಮಾಣಪತ್ರವನ್ನು ನೀಡಲು ನಗರ ಪಾಲಿಕೆ ನಿರ್ಧರಿಸಿದೆ. ಅದೂ ಉಚಿತವಾಗಿ! ಸೋಮವಾರ ಈ ಘೋಷಣೆಯನ್ನು ಮಾಡಿದ ಮೇಯರ್ ವಿ ವಿ ರಾಜನ್, ಈ ನಿಟ್ಟಿನಲ್ಲಿ ನಿರ್ಣಯವನ್ನು ಮಂಡಿಸಲು ಮಂಗಳವಾರ ನಗರಪಾಲಿಕೆಯ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದಿದ್ದಾರೆ.
ಇದಕ್ಕೂ ಮೊದಲು ವಿದ್ಯುಚ್ಚಕ್ತಿ ಸಚಿವ ನಾಥಂ ಆರ್ ವಿಶ್ವನಾತ್ ಅವರು ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಮಂಗಳವಾರ ಹುಟ್ಟುವ ಎಲ್ಲ ಮಕ್ಕಳಿಗೂ ಚಿನ್ನದ ಉಂಗುರು ಕೊಡುವುದಾಗಿ ಹೇಳಿದ್ದರು. ಗುರುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಉಂಗುರುಗಳನ್ನು ವಿತರಿಸಲಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಜನನ ಪ್ರಮಾಣಪತ್ರ ಪಡೆಯಲು ವಾರಾನುಗಟ್ಟಲೆ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ತಿಂಗಳುಗಳು ಕಳೆಯುವುದುಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


