ಪ್ರಧಾನ ಸುದ್ದಿ

ಬೆದರಿಕೆಯೊಡ್ಡಿದವರ ಹೆಸರು ಬಹಿರಂಗಪಡಿಸಲು ಮಾಂಝಿ ನಕಾರ

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ಹೊರನಡೆಯುತ್ತಿರುವ ಜಿತನ್ ರಾಮ್ ಮಾಂಝಿ ತನಗೆ ಬೆದರಿಕೆಯೊಡ್ಡಿರುವವರ...

ಬೆದರಿಕೆಯೊಡ್ಡಿದವರ ಹೆಸರು ಬಹಿರಂಗಪಡಿಸಲು ಮಾಂಝಿ ನಕಾರ
ಜಿತನ್ ರಾಮ್ ಮಾಂಝಿ
Published On :

ನವದೆಹಲಿ: ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ಹೊರನಡೆಯುತ್ತಿರುವ ಜಿತನ್ ರಾಮ್ ಮಾಂಝಿ ತನಗೆ ಬೆದರಿಕೆಯೊಡ್ಡಿರುವವರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಬೆದರಿಕೆಯೊಡ್ಡಿದವರು ಯಾರು ಎಂದು ಮಾಂಝಿ ಅವರಲ್ಲಿ ಕೇಳಿದಾಗ ಈ ಬಗ್ಗೆ ತನಿಖೆ ನಡೆಸಿ ಯಾರು ಎಂದು ಪತ್ತೆ ಹಚ್ಚಬೇಕಾದು ಪೊಲೀಸರ ಕೆಲಸ ಎಂದು ಉತ್ತರಿಸಿದ್ದಾರೆ.

ನನಗೆ ಬೆದರಿಕೆಯೊಡ್ಡಿದ ಕಾರಣ ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯುತ್ತಿದ್ದೇನೆ. ನನಗೆ ಹಾಗು ನನ್ನ ಬೆಂಬಲಿಗರಿಗೆ ಜೀವ ಬೆದರಿಕೆ ನೀಡಲಾಗಿದೆ. ನನಗೆ ಮತ ನೀಡಿದರೆ ಹಲ್ಲೆ ಮಾಡಲಾಗುವುದು ಎಂದು ನನ್ನ ಶಾಸಕರಿಗೆ ಬೆದರಿಕೆಯೊಡ್ಡಲಾಗಿತ್ತು ಎಂದು ಮಾಂಝಿ  ಹೇಳಿದ್ದಾರೆ.

ನಾಳೆ ನಿತೀಶ್ ಕುಮಾರ್ ಪ್ರತಿಜ್ಞಾ ಸ್ವೀಕಾರ
ಜನತಾದಳದ ಹಿರಿಯ ನಾಯಕ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಅಧಿಕಾರಕ್ಕೇರಿದ್ದಾರೆ. ನಾಳೆ (ಭಾನುವಾರ) ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.