ಆನ್‌ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ ಮೂವರು Gayಳೆಯರ ಮದುವೆ!
ಸಲಿಂಗ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಥಾಯ್‌ಲ್ಯಾಂಡ್‌ನಲ್ಲಿ ಅಪೂರ್ವವಾದ ಒಂದು ಸಲಿಂಗ ವಿವಾಹ ಸುದ್ದಿಯಾಗಿದೆ. ಮದುವೆ ಎಂಬುದು ಇಬ್ಬರು...

ಬ್ಯಾಂಕಾಕ್: ಸಲಿಂಗ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಥಾಯ್‌ಲ್ಯಾಂಡ್‌ನಲ್ಲಿ ಅಪೂರ್ವವಾದ ಒಂದು ಸಲಿಂಗ ವಿವಾಹ ಸುದ್ದಿಯಾಗಿದೆ. ಮದುವೆ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಯಾಕೆ ಆಗಬೇಕು? ಅಲ್ಲಿ ಮೂರು ಜನ ಇದ್ದರೆ ಏನಾಗುತ್ತೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಮೂವರು ಸಲಿಂಗಕಾಮಿಗಳು ಒಟ್ಟಿಗೆ ಮದುವೆಯಾಗಿದ್ದಾರೆ. ಅಂದರೆ ಇವರದ್ದು ಮೂವರ ಸಂಸಾರ!
ಇಬ್ಬರು ಯುವಕರು ಪರಸ್ಪರ ಮದುವೆಯಾಗುವುದು ಇಲ್ಲಿ ಸಾಮಾನ್ಯ. ಆದರೆ ಇಬ್ಬರು ಯುವಕರು ಒಬ್ಬ ಯುವಕನ್ನು ಬಾಳ ಸಂಗಾತಿಯನ್ನಾಗಿಸುವುದಕ್ಕೆ ಇಲ್ಲಿ ಅನುಮತಿ ಇಲ್ಲದೇ ಇರುವ ಕಾರಣ ಇವರು ಗುಟ್ಟಾಗಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ಮದುವೆಯ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜೋಕ್, ಬೆಲ್ ಮತ್ತು ಆರ್ಟ್ ಎಂಬ ಹೆಸರಿನ ಈ ಮೂರು ಸಲಿಂಗಕಾಮಿಗಳು ಫೆಬ್ರವರಿ 15ರ ರಾತ್ರಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಿದ್ದಾರೆ.
ವಿವಾಹದ ಫೋಟೋವನ್ನು ಇವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು, ಆ ಪೋಸ್ಟಿಗೆ 5 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಮತ್ತು ಸಾವಿರಾರು ಕಾಮೆಂಟ್‌ಗಳು ಸಿಕ್ಕಿವೆ.
ಇವರು ಫೇಸ್‌ಬುಕ್‌ಗೆ ಹಾಕಿದ ಫೋಟೋವೊಂದಕ್ಕೆ ನಾವು ಮೂವರು ಹೀಗೆ ಜತೆಯಾಗಿ ಹೀಗೆ ಕೈಹಿಡಿದುಕೊಂಡು ಜತೆಯಾಗಿಯೇ ಬದುಕು ಸಾಗಿಸುತ್ತೇವೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


