ಸಲಿಂಗ ವಿವಾಹ

ಸಲಿಂಗ ವಿವಾಹ: 'ಸುಪ್ರೀಂ' ಮುಂದೆ ಮಕ್ಕಳ ಭವಿಷ್ಯದ ಕಾನೂನು ತೊಡಕು, ವೈದ್ಯಕೀಯ ಸಮಸ್ಯೆ ವಿಚಾರ ಎತ್ತಿದ ಬೆಂಗಳೂರು ಮೂಲದ ಸೋಮ್ ಥಾಮಸ್
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಮೂಲದ ಸೋಮ್ ಥಾಮಸ್ ಎಂಬುವವರು ತಾವು ಸಲ್ಲಿಸಿದ್ದ 40 ಪುಟಗಳ ಅರ್ಜಿಯಲ್ಲಿ ವಾದ ಮುಂದಿಟ್ಟಿದ್ದಾರೆ. ನ್ಯಾಯಪೀಠದ ಮುಂದೆ ಮೌಕಿಖವಾಗಿ ಕೂಡ ವಾದ ಮಾಡಿದ್ದಾರೆ.

ಸಲಿಂಗ ವಿವಾಹ ಮುಂದೊಂದು ದಿನ ವಾಸ್ತವವಾಗಲಿದೆ: ಕ್ರೀಡಾಪಟು ದ್ಯುತಿ ಚಂದ್
ಭಾರತದ ಅತ್ಯಂತ ವೇಗದ ಮಹಿಳೆ ಎಂದೇ ಖ್ಯಾತರಾಗಿರುವ ಕ್ರೀಡಾಪಟು ದ್ಯುತಿ ಚಂದ್ ಅವರು ಸಲಿಂಗ ವಿವಾಹದ ಬಗ್ಗೆ ಆಶಾಭಾವ ವ್ಯಕ್ತಪಡಿಸಿದ್ದು, ಇದು ಮುಂದೊಂದು ದಿನ ವಾಸ್ತವವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಮೂಲಭೂತ ಹಕ್ಕಲ್ಲ': ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸದ 'ಸುಪ್ರೀಂ' ನಿರ್ಧಾರಕ್ಕೆ ವಿಎಚ್‌ಪಿ ಸ್ವಾಗತ!
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ. ಇನ್ನು ಮಗುವನ್ನು ದತ್ತು ಪಡೆಯುವ ಹಕ್ಕನ್ನು 'ಸಲಿಂಗಿಗಳಿಗೆ' ನೀಡದಿರುವ ಕೋರ್ಟ್ ನಿರ್ಧಾರವು 'ಒಳ್ಳೆಯ ಹೆಜ್ಜೆ' ಎಂದು ಹೇಳಿದೆ.

ಸಲಿಂಗ ವಿವಾಹ ಮಾಡಿಸಿದ ಸಿಖ್ ಪುರೋಹಿತಗೆ ಅನರ್ಹತೆಯ ಶಿಕ್ಷೆ!
ಕಳೆದ ತಿಂಗಳು ಸಲಿಂಗ ವಿವಾಹ ಮಾಡಿಸಿದ್ದ ಸಿಖ್ ಪುರೋಹಿತರನ್ನು ಅಖಾಲ್ ತಖ್ತ್ ಅನರ್ಹಗೊಳಿಸಿದೆ.

ಸಲಿಂಗ ವಿವಾಹ ಕಾನೂನು ತರುವ ಜವಾಬ್ದಾರಿ ಸಂಸತ್ತಿನದ್ದು, ನ್ಯಾಯಾಲಯ ಕೇವಲ ವ್ಯಾಖ್ಯಾನಿಸಬಹುದು: ಸಿಜೆಐ ಚಂದ್ರಚೂಡ್
ವಿಶೇಷ ವಿವಾಹ ಕಾಯಿದೆ (Special Marriage Act)ಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಅದನ್ನು ನಾವು ವ್ಯಾಖ್ಯಾನಿಸಬಹುದು, ಆದರೆ ಅದನ್ನು ಬದಲಾಯಿಸುವುದು ಸಂಸತ್ತು ಅಂದರೆ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಸಲಿಂಗ ವಿವಾಹ ತೀರ್ಪು: ಜೀವನ ಸಂಗಾತಿ ಆಯ್ಕೆ ಮಾಡುವುದು ಬದುಕಿನ ಅವಿಭಾಜ್ಯ ಅಂಗ- ಸಿಜೆಐ
ಎಲ್ ಜಿಬಿಟಿ ಸಮುದಾಯದ ವ್ಯಕ್ತಿಗಳು (ಸಲಿಂಗಕಾಮಿಗಳು, ದ್ವಿಲಿಂಗಿ, ತೃತೀಯಲಿಂಗಿಗಳು) ಸೇರಿದಂತೆ ಎಲ್ಲಾ ವ್ಯಕ್ತಿಗಳು ತಮ್ಮ ಜೀವನದ ನೈತಿಕ ಗುಣಮಟ್ಟವನ್ನು ನಿರ್ಣಯಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಸಲಿಂಗ ವಿವಾಹ ನೋಂದಣಿ ಮಾಡುವಂತೆ ಸರ್ಕಾರಕ್ಕೆ ನೇಪಾಳದ ಸುಪ್ರೀಂ ಕೋರ್ಟ್ ಆದೇಶ
ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಣಿ ಮಾಡುವಂತೆ ನೇಪಾಳ ಸರ್ಕಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.

ಸಲಿಂಗ ವಿವಾಹ: ಸಮಸ್ಯೆ ಪರಿಹರಿಸಲು ಸಮಿತಿ ರಚನೆ; ಸುಪ್ರೀಂ ಕೋರ್ಟ್'ಗೆ ಕೇಂದ್ರ ಸರ್ಕಾರ
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಇರುವ ಸಮಸ್ಯೆಗಳ ಪರಿಹರಿಸಲು ಸಮಿತಿಯನ್ನು ರಚಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್'ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಮದುವೆ ಪ್ರೀತಿಯ ಬಂಧನ: ಸಲಿಂಗ ವಿವಾಹಕ್ಕೆ ಕಂಗನಾ ಬೆಂಬಲ!
ಸಲಿಂಗ ವಿವಾಹಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟಿ ನಟಿ ಕಂಗನಾ ರಣಾವತ್ "ಹೃದಯಗಳು ಒಂದಾಗಿರುವಾಗ" ಜನರ ಆದ್ಯತೆಗಳು ಮುಖ್ಯವಲ್ಲ ಎಂದು ಹೇಳಿದ್ದಾರೆ.

