ಪ್ರಧಾನ ಸುದ್ದಿ

ಬೆಂಗಳೂರು ಬಾಹರ್; ವರ್ಷಾಚರಣೆ ಖದರ್

ನೂತನ ವರ್ಷಾಚರಣೆಯನ್ನು ಕೇವಲ ನಗರದಲ್ಲಿ ಮಾತ್ರವಲ್ಲ, ಬೆಂಗಳೂರಿನ ಹೊರವಲಯದಲ್ಲೂ ಆಚರಣೆ ಮಾಡಲು ನಗರದ ಜನ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ರಾಜಧಾನಿಯಿಂದಲೂ ಜನ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ನಗರ ಹೊರಭಾಗದ ರೆಸಾರ್ಟ್...

ಬೆಂಗಳೂರು ಬಾಹರ್; ವರ್ಷಾಚರಣೆ ಖದರ್
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ನೂತನ ವರ್ಷಾಚರಣೆಯನ್ನು ಕೇವಲ ನಗರದಲ್ಲಿ ಮಾತ್ರವಲ್ಲ, ಬೆಂಗಳೂರಿನ ಹೊರವಲಯದಲ್ಲೂ ಆಚರಣೆ ಮಾಡಲು ನಗರದ ಜನ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ರಾಜಧಾನಿಯಿಂದಲೂ ಜನ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ನಗರ ಹೊರಭಾಗದ ರೆಸಾರ್ಟ್, ಹೋಟೆಲ್‍ಗಳು, ಹೋಂ ಸ್ಟೇಗಳ ಮಾಲೀಕರು ರೂಮ್ ಗಳ ಬುಕ್ಕಿಂಗ್ ಪ್ರಕ್ರಿಯೆನ್ನು ತಿಂಗಳು ಮೊದಲೇ ಆರಂಭಿಸಿದ್ದರು. ಅದರಂತೆ ಈಗ ರೂಮïಗಳು ಸಂಪೂರ್ಣ ಬುಕ್ ಆಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ, ಕನಕಪುರ ತಾಲೂಕಿನ ಮೇಕೆದಾಟು, ಚುಂಚಿ ಫಾಲ್ಸ್, ಮುತ್ತತ್ತಿ, ಚಾಮನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದತ್ತಲೂ ನಗರದ ಜನತೆ ಹೊಸ ವರ್ಷಾಚರಣೆಗೆ ದಾಪುಗಾಲು ಹಾಕುತ್ತಿದ್ದಾರೆ. ಆದರೆ, ಇಲ್ಲಿ ಕೇವಲ ವರ್ಷಾಚರಣೆ ಸಂಭ್ರಮ ಮಾತ್ರ ಇರುತ್ತದೆ.

ಇನ್ನುಳಿದಂತೆ ಮದ್ಯ ಸೇವನೆಗೆ ಪೊಲೀಸರು ಅವಕಾಶ ನೀಡಿಲ್ಲ. ಒಂದು ವೇಳೆ ಖಾಕಿ ಕಣ್ ತಪ್ಪಿಸಿ ಕುಡಿದರೆ ಕಠಿಣ ಕ್ರಮಕ್ಕೂ ಒಳಗಾಗುತ್ತೀರಿ ಎಚ್ಚರ ಇದೇ ವೇಳೆ ಮಂಡ್ಯದ ಪ್ರವಾಸಿ ತಾಣಗಳಾದ ಕೆಆರ್‍ಎಸ್, ಬಲಮುರಿ, ಎಡಮುರಿಗಳಲ್ಲಿ ಡಿ.31 ಹಾಗೂ ಜ.1ರಂದು ಸಾರ್ವಜನಿಕ ಪ್ರವೇಶ ನಿಷೇಧಿಸಿ ಮಂಡ್ಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಈ ತಾಣಗಳಿಗೆ ಹೋಗಿ  ನೂತನ ವರ್ಷಾಚರಣೆ ಬರಮಾಡಿಕೊಳ್ಳುವ ರಾಜಧಾನಿ ಜನತೆಗೆ ನಿರಾಸೆ ಮೂಡಿದೆ.

ನಂದಿಬೆಟ್ಟದ ಗಿರಿಧಾಮದಲ್ಲಿ ನೂತನ ವರ್ಷಾಚರಣೆಗೆ ಅಣಿಯಾಗಿದೆ. ಹೀಗಾಗಿ ಅಲ್ಲಿನ ಹೋಟೆಲ್‍ಗಳು, ರೆಸಾರ್ಟ್ ಗಳು, ಹೋಂ, ಸ್ಟೇಗಳು, ಗೆಸ್ಟ್ ಹೌಸ್ ಗಳು ಎಲ್ಲವೂ ಬುಕ್   ಆಗಿವೆ. ಬೆಂಗಳೂರಿನಿಂದ ಮಾತ್ರವಲ್ಲ, ಹೊರ ರಾಜ್ಯ, ವಿದೇಶಗಳಿಂದಲೂ ಇಲ್ಲಿಗೆ ವರ್ಷಾಚರಣೆಗೆ ಜನ ಬರುತ್ತಾರೆ. ಹೀಗಾಗಿ ಇಲ್ಲಿ ಹೋಟೆಲ್ ಗಳನ್ನು ಬುಕ್ ಮಾಡಲು ಆನ್ ಲೈನ್ ವ್ಯವಸ್ಥೆ ಇರುವುದರಿಂದ ಒಂದು ತಿಂಗಳು ಮೊದಲೇ ರೂಮ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ.
ಗೆಸ್ಟ್‍ಹೌಸ್‍ಗಳು ಫುಲ್: ನಂದಿ ಗಿರಿಧಾಮದಲ್ಲಿರುವ ತೋಟಗಾರಿಕಾ ಇಲಾಖೆ ನಡೆಸುತ್ತಿರುವ ಹಲವು ಕೊಠಡಿಗಳಿವೆ. ಇವುಗಳನ್ನು ಕೂಡ ಆನ್‍ಲೈನ್ ಬುಕ್ಕಿಂಗ್ ಮಾಡಿರುವ ಕಾರಣ ಮೂರು ತಿಂಗಳಿಗೂ ಮೊದಲೇ ಬುಕ್ ಮಾಡಲಾಗಿದೆ. ಹೀಗಾಗಿ ಈಗ ಬುಕ್ ಮಾಡಲು ಹೋದವರಿಗೆ ನಿರಾಸೆ ಮೂಡಿದೆ.

ಇದೇ ವೇಳೆ ಯಳಂದೂರು ತಾಲೂಕಿನ ಕಾವೇರಿ ತಟದಲ್ಲಿಯೂ ಹೊಸ ವರ್ಷಾಚರಣೆಗೆ ತೆರಳಲು ಬೆಂಗಳೂರಿನ ಜನತೆ ಸಿದ್ಧತೆಯಲ್ಲಿದ್ದಾರೆ. ಆದರೆ, ಅಲ್ಲಿಯೂ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಮಧ್ಯಪಾನ, ಈಜಾಡುವುದನ್ನು ನಿಷೇಧಿಸಲಾಗಿದೆ. ಇದಕ್ಕಾಗಿ ಚೆಕ್ ಪೋಸ್ಟ್ ಗಳಲ್ಲಿಯೇ ತೀವ್ರತರವಾದ ತಪಾಸಣೆ ನಡೆಸಲು ಇಲಾಖೆಗಳು ಸಜ್ಜಾಗಿವೆ.

ಕುರಿ, ಕೋಳಿ ಒಯ್ಯಂಗಿಲ್ಲ!: ಬಿಳಿಗಿರಿರಂಗನಬೆಟ್ಟಕ್ಕೂ ಪ್ರವಾಸ ಬೆಳೆಸಲು ಬೆಂಗಳೂರಿಗರು ಸಜ್ಜಾಗಿದ್ದಾರೆ. ಆದರೆ, ಅಲ್ಲಿ  ವನ್ಯಧಾಮ ಇರುವುದರಿಂದ ವರ್ಷಾಚರಣೆ ತೀವ್ರವಾದ ತಪಾಸಣೆ ನಡೆಸಲಾಗುತ್ತಿದೆ. ಜತೆಗೆ ಕುರಿ, ಕೋಳಿ, ಮದ್ಯಯಾವುದನ್ನು ಒಯ್ಯುವಂತಿಲ್ಲ. ಹೀಗಾಗಿ ಬೆಟ್ಟದಲ್ಲಿ ವರ್ಷಾಚರಣೆಯೊಂದೇ ಸಾಧ್ಯವಾಗುವಂತಿದೆ. ಇಲ್ಲಿಗೆ ತೆರಸಳಲು ನಗರದ ಜನತೆ ಸಿದ್ಧತೆಯಲ್ಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.