ಪ್ರಧಾನ ಸುದ್ದಿ

ಮೇಲ್ಮನೆ ಮತ ಎಣಿಕೆಗೆ ಸಿದ್ಧತೆ

ವಿಧಾನ ಪರಿಷತ್ತಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರದ ಸ್ಥಳೀಯ ಸಂಸ್ಥೆಗಳಿಂದ ನಡೆದಿರುವ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಗರ ಕ್ಷೇತ್ರದ ಎಣಿಕೆಯು ಪ್ಯಾಲೇಸ್ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಹಾಗೂ ಗ್ರಾಮಾಂತರ ಕ್ಷೇತ್ರದ...

ಮೇಲ್ಮನೆ ಮತ ಎಣಿಕೆಗೆ ಸಿದ್ಧತೆ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ವಿಧಾನ ಪರಿಷತ್ತಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರದ ಸ್ಥಳೀಯ ಸಂಸ್ಥೆಗಳಿಂದ ನಡೆದಿರುವ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ನಗರ ಕ್ಷೇತ್ರದ ಎಣಿಕೆಯು ಪ್ಯಾಲೇಸ್ ರಸ್ತೆಯಲ್ಲಿರುವ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಹಾಗೂ ಗ್ರಾಮಾಂತರ ಕ್ಷೇತ್ರದ ಎಣಿಕೆಯು ಬಸವೇಶ್ವರ ವೃತ್ತದ ಬಳಿ
ಇರುವ ಸರ್ಕಾರಿ ರಾಮನಾರಾಯಣ್ ಚೆಲ್ಲರಾಂ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಮತ ಎಣಿಕೆಯು ಸಂಜೆ ವೇಳೆ ಮುಗಿಯಲಿದೆ.

ಬೆಂಗಳೂರು ನಗರ ಜಿಲ್ಲಾದಿಂದ ಸ್ಪರ್ಧಿಸಿರುವ ಬಿಜೆಪಿಯ ದೊಡ್ಡ ಬಸವರಾಜು, ಕಾಂಗ್ರೆಸ್‍ನ ಎಂ. ನಾರಾಯಣಸ್ವಾಮಿ, ಪಕ್ಷೇತರರಾದ ಬಿ.ಟಿ.ದಯಾನಂದ ರೆಡ್ಡಿ, ದಯಾನಂದ ಎಚ್.ಎಸ್, ನಾರಾಯಣ ಸ್ವಾಮಿ ಎಂ., ಬಿ.ಎಸ್. ಪ್ರಸಾದ್ ಹಾಗೂ ಗ್ರಾಮಾಂತರದಲ್ಲಿ ಸ್ಪರ್ಧಿಸಿರುವ ಜೆಡಿಎಸ್ ನ ಇ. ಕೃಷ್ಣಪ್ಪ, ಕಾಂಗ್ರೆಸ್‍ನ ಎಸ್. ರವಿ, ಬಿಜೆಪಿ ಎನ್.ಹನುಮಂತೇಗೌಡ, ಪಕ್ಷೇತರ ಬಿ.ರವಿ ಅವರಲ್ಲಿ ಹೊಸ ವರ್ಷದಲ್ಲಿ ಹೊಸ ಶಾಸಕರಾಗುವ ಭಾಗ್ಯ ಯಾರಿಗೆ ಸಿಗಲಿದೆ ಎಂಬುದು ಸಂಜೆಯ ವೇಳೆಗೆ ತಿಳಿಯಲಿದೆ.

ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯವು ಸೌಹಾರ್ದಯುತ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶ ದಿಂದ ಪೊಲೀಸ್ ಇಲಾಖೆಯು ಅಗತ್ಯ ಕ್ರಮ ತೆಗೆದುಕೊಂಡಿದೆ. ಐಪಿಸಿ ಸೆಕ್ಷನ್ 144 ಉಪ ಕಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೇಂದ್ರಗಳ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

ಈ ವೇಳೆ ಕಾನೂನುಭಂಗ ಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ಹಾಗೂ ಮೆರವಣಿಗೆ ನಡೆಸುವುದು, ಶಸ್ತ್ರಗಳನ್ನು ಹೊಂದಿರುವುದು, ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವುದು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಕಣದಲ್ಲಿ ಯಾರ್ಯಾರು?

  • ಬೆಂಗಳೂರು ನಗರ
  • ಎಂ. ನಾರಾಯಣಸ್ವಾಮಿ - ಕಾಂಗ್ರೆಸ್
  • ದೊಡ್ಡ ಬಸವರಾಜು- ಬಿಜೆಪಿ
  • ಬಿ.ಟಿ. ದಯಾನಂದ- ಪಕ್ಷೇತರ
  • ಎಚ್.ಎಸ್. ದಯಾನಂದ- ಪಕ್ಷೇತರ
  • ನಾರಾಯಣಸ್ವಾಮಿ ಎಂ- ಪಕ್ಷೇತರ
  • ಎಚ್.ಎಸ್. ಪ್ರಸಾದ್- ಪಕ್ಷೇತರ ಬೆಂಗಳೂರು ಗ್ರಾಮಾಂತರ
  • ಇ. ಕೃಷ್ಣಪ್ಪ- ಜೆಡಿಎಸ್
  • ಎಸ್. ರವಿ- ಕಾಂಗ್ರೆಸ್
  • ಎನ್. ಹನುಮಂತೇಗೌಡ- ಬಿಜೆಪಿ
  • ಬಿ. ರವಿ- ಪಕ್ಷೇತರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.