ಪ್ರಧಾನ ಸುದ್ದಿ

ಆಕಳನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಿ: ಶಿವಸೇನಾ ಸಂಸದ

ಗೋವಿನಿಂದ ಒದಗುವ ಲಾಭಗಳಾದ ಹಾಲು, ಗಂಜಲ ಮತ್ತು ಸಗಣಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದಿರುವ ಶಿವಸೇನಾ ಸಂಸದ, 'ಗೋ'ವನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಬೇಕು

ಆಕಳನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಿ: ಶಿವಸೇನಾ ಸಂಸದ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಗೋವಿನಿಂದ ಒದಗುವ ಲಾಭಗಳಾದ ಹಾಲು, ಗಂಜಲ ಮತ್ತು ಸಗಣಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದಿರುವ ಶಿವಸೇನಾ ಸಂಸದ, 'ಗೋ'ವನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಬೇಕು ಎಂದು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ. ನೆನ್ನೆಯಷ್ಟೇ ಬಿಜೆಪಿ ಸದಸ್ಯರೊಬ್ಬರು ಭಗವದ್ಗೀತೆಯನ್ನು 'ರಾಷ್ಟ್ರೀಯ ಪುಸ್ತಕ' ಎಂದು ಘೋಷಿಸಲು ಆಗ್ರಹಿಸಿದ್ದರು.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದ ಚಂದ್ರಕಾಂತ್ ಖೈರೆ ಅವರು ಹೀಗೆ ಆಗ್ರಹಿಸಿದ್ದಾರೆ.

ನೆನ್ನೆಯಷ್ಟೇ ಬಿಜೆಪಿ ಸಂಸದ ಆದಿತ್ಯನಾಥ್ ಅವರು ವಿಶ್ವವೇ 'ಜಿಹಾದಿ' ಭಯೋತ್ಪಾದನೆಯಿಂದ ಬೆದರಿರುವಾಗ ಗೀತೆಯ ಸಂದೇಶ ಇಂದಿನ ದಿನಕ್ಕೆ ಬಹಳ ಉಚಿತವಾಗಿರುವುದರಿಂದ ಅದನ್ನು 'ರಾಷ್ಟ್ರೀಯ ಪುಸ್ತಕ' ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.