ಮೀಸಲಾತಿ ರದ್ದತಿಗೆ ಆರ್ ಎಸ್ ಎಸ್ ಒಲವಿಲ್ಲ: ಭಾಗವತ್
ಮೀಸಲಾತಿಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು ಎಂದು ತಾವು ನೀಡಿದ್ದ ಹೇಳಿಕೆಗೆ ಯು-ಟರ್ನ್ ಹೊಡೆದಿರುವ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್, ಎಲ್ಲಿಯವರೆಗೂ

ನಾಗಪುರ್: ಮೀಸಲಾತಿಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು ಎಂದು ತಾವು ನೀಡಿದ್ದ ಹೇಳಿಕೆಗೆ ಯು-ಟರ್ನ್ ಹೊಡೆದಿರುವ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್, ಎಲ್ಲಿಯವರೆಗೂ ದೇಶದಲ್ಲಿ ಸಾಮಾಜಿಕ ಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಮುಂದುವರೆಯಲಿದೆ ಮತ್ತು ಮೀಸಲಾತಿ ರದ್ದತಿಗೆ ಸಂಘದ ಒಲವಿಲ್ಲ ಎಂದಿದ್ದಾರೆ.
"ಮೀಸಲಾತಿಯನ್ನು ರದ್ದು ಪಡಿಸುವ ಪ್ರಶ್ನೆ ಆರ್ ಎಸ್ ಎಸ್ ಗೆ ಬಂದಿಲ್ಲ ಎಂಬುದು ಧೃಢ ಅಭಿಪ್ರಾಯ. ಎಲ್ಲಿಯವರೆಗೂ ದೇಶದಲ್ಲಿ ಸಾಮಾಜಿಕ ಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಮುಂದುವರೆಯಬೇಕು" ಎಂದು ಕಳೆದ ಸಂಜೆ 'ಸಾಮಾಜಿಕ ಅಸಮಾನತೆ'ಯ ಮೇಲೆ ನೀಡುತ್ತಿದ್ದ ಉಪನ್ಯಾಸದ ವೇಳೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಬಿಹಾರ ವಿಧಾನಸಭಾ ಚುನಾವಣಾ ವೇಳೆಯಲ್ಲಿ ಮಿಸಲಾತಿ ವ್ಯವಸ್ಥೆ ಪರಿಷ್ಕರಣೆಗೆ ಒಳಪಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು ಹಾಗೂ ಬಿಹಾರದಲ್ಲಿ ಬಿಜೆಪಿ ಸೋಲಿಗೆ ಈ ಹೇಳಿಕೆ ಪ್ರಮುಖ ಕಾರಣ ಎಂದೆ ಬಣ್ಣಿಸಲಾಗಿತ್ತು.
'ಸಾಮಾಜಿಕ ಒಳಗೊಳ್ಳುವಿಕೆ'ಯ ಬಗ್ಗೆ ಮಾತನಾಡಿರುವ ಆರ್ ಎಸ್ ಎಸ್ ಅಧ್ಯಕ್ಷ ಇದು ಸ್ವಂತದಲ್ಲಿ ಪ್ರಾರಂಭವಾಗಿ ನಂತರ ಕುಟುಂಬ ಹಾಗೂ ಸಮಾಜಕ್ಕೆ ಮುಂದುವರೆಯಬೇಕು. "ಇದು ಸಮಾಜದಲ್ಲಿನ ವೈವಿಧ್ಯತೆಯನ್ನು ಗೌರವಿಸುವುದರ ಮೂಲಕ ನಡೆಯಬೇಕು ಆದರೆ ಹಿಂದೂ ಧರ್ಮದ ತಾತ್ವಿಕ ನೆಲೆಗಟ್ಟಿನಲ್ಲೇ ಸಾಗಬೇಕು" ಎಂದಿದ್ದಾರೆ.
'ಸಾಮಾಜಿಕ ಸೌಹಾರ್ದತೆ ಮತ್ತು ಸಮಗ್ರತೆ' ಬಗ್ಗೆ ಕೂಡ ಮಾತನಾಡಿರುವ ಭಾಗವತ್ "ಯಾವುದೇ ಮತಧರ್ಮ, ಸಮುದಾಯ, ಸಮಾಜ ಸುಧಾರಕ ಅಥವಾ ಸಂತನಾಗಲೀ ಮನುಷ್ಯರ ನಡುವೆ ಅಸಮಾನತೆಯನ್ನು ಬೋಧಿಸಿಲ್ಲ. ಯಾವುದೇ ಸಮುದಾಯದ ಮೂಲ ಉಗಮದಲ್ಲಿ ಸಮಾನತೆಯೇ ಧ್ಯೇಯವಾಗಿರುವುದು ಆದರೆ ನಂತರ ಜಾತಿಗಳಾಗಿ ಮತ್ತು ವರ್ಗಗಳಾಗಿ ಒಡೆಯಲಾಗಿದೆ. ಜನರ ವರ್ತನೆಯಿಂದ ಅಸಮಾನತೆ ಹುಟ್ಟಿದೆ" ಎಂದು ಕೂಡ ಅವರು ಹೇಳಿದ್ದಾರೆ.
ಸಾಮಾಜಿಕ ಅಸಮಾನತೆಯ ಬಗ್ಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಲು ಕೂಡ ಭಾಗವತ್ ಕರೆ ಕೊಟ್ಟಿದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


