ಬುಲೆಟ್ ರೈಲು ಮಾತ್ರ ಅಲ್ಲ, ಭಾರತ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿಯಾಗಬೇಕಿದೆ: ಮೋದಿ
ನವದೆಹಲಿಯ ಹೈದ್ರಾಬಾದ್ ಹೌಸ್‌ನಲ್ಲಿ ನಡೆದ ಭಾರತ ಮತ್ತು ಜಪಾನ್ ಉದ್ಯಮಿಗಳ ಚರ್ಚಾ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಅವಕಾಶಗಳ ಭೂಮಿ...

Published On :
ನವದೆಹಲಿ: ಜಪಾನ್ ಪ್ರಧಾನಿ ಶಿಂಜೋ ಅಬೆ ಮೂರು ದಿನಗಳ ಪ್ರವಾಸಕ್ಕಾಗಿ ಶುಕ್ರವಾರ ಭಾರತಕ್ಕೆ ಆಗಮಿಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತುಕತೆ ನಡೆಸಿದ್ದಾರೆ.
ಶನಿವಾರ ನವದೆಹಲಿಯ ಹೈದ್ರಾಬಾದ್ ಹೌಸ್‌ನಲ್ಲಿ ನಡೆದ ಭಾರತ ಮತ್ತು ಜಪಾನ್ ಉದ್ಯಮಿಗಳ ಚರ್ಚಾ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ಅವಕಾಶಗಳ ಭೂಮಿ ಎಂದು ಹೇಳಿದ್ದಾರೆ.
ಅಬೆ ಅವರ ಈ ಪ್ರವಾಸದಲ್ಲಿ ಮುಂಬೈ - ಅಹಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಸಹಿ ಹಾಕಲಾಗುತ್ತದೆ. ಅಂದ ಹಾಗೆ ಈ ಯೋಜನೆಯ ಒಟ್ಟು ಮೊತ್ತ ರು.98 ಸಾವಿರ ಕೋಚಿ. ಜತೆಗೆ ನಾಗರಿಕ ಅಣು ಒಪ್ಪಂದಕ್ಕೂ ಸಹಿ ಹಾಕಲಾಗುತ್ತದೆ.
ಚರ್ಚಾ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶಕ್ಕೆ ಬುಲೆಟ್ ಟ್ರೈನ್ ಮಾತ್ರವಲ್ಲ, ಕ್ಷಿಪ್ರ ಗತಿಯಲ್ಲಿ ದೇಶ ಅಭಿವೃದ್ಧಿ ಹೊಂದಬೇಕಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


