ಕರ್ನಾಟಕದಿಂದ ಪ್ರವಾಹ ಪರಿಹಾರ ಸ್ವೀಕರಿಸಿದ ಅಮ್ಮ
ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ತಮಿಳುನಾಡು ಸ್ವೀಕರಿಸುತ್ತಿದೆ....

Published On :
ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ತಮಿಳುನಾಡು ಸ್ವೀಕರಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ರು.5 ಕೋಟಿ ನೆರವು ಘೋಷಿಸಿದ್ದಾರೆ. ಜತೆಗೆ ಬೇಡಿಕೆಗೆ ತಕ್ಕಂತೆ ಹಾಲಿನ ಪುಡಿ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಲ್ಲದೆ 50,000 ರಗ್ಗುಗಳನ್ನೂ ಕೇಳಿದ್ದು, ಅದನ್ನೂ ಪೂರೈಸಲಾಗುತ್ತಿದೆ. ಆದರೆ, ಅಲ್ಲಿನ ಹೊಂದಾಣಿಕೆ ಸಮಸ್ಯೆಯಿಂದಲೋ ಏನೋ ಪರಿಹಾರ ಸಾಮಗ್ರಿಗಳನ್ನು ಎಲ್ಲಿ ಯಾವ ರೀತಿ ನೀಡಬೇಕೆನ್ನುವ ಬಗ್ಗೆ ಗೊಂದಲವಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಫೋಟೊ ರಾಜಕಾರಣದಲ್ಲಿ ಆಸಕ್ತಿಯಿಲ್ಲ: ರಾಜ್ಯದಿಂದ ಹೊಗುತ್ತಿರುವ ಸಾಮಗ್ರಿಗಳಿಗೆ ಜಯಲಲಿತಾ ಫೋಟೋ ಹಾಕುತ್ತಿರಬಹುದು. ಅದಕ್ಕೆ ಬಗ್ಗೆ ನಾವು ಆಸಕ್ತಿ ವಹಿಸುವುದಿಲ್ಲ. ಬದಲಾಗಿ ಅಲ್ಲಿನ ಸಂತ್ರಸ್ತರಿಗೆ ನೆರವಾಗುತ್ತಿದ್ದೇವೆ. ನೆರವು ನೀಡುವುದಕ್ಕಾಗಿಯೇ 1070 ಸಂಖ್ಯೆ ಸಹಾಯವಾಣಿ ತೆರೆಯಲಾಗಿದೆ. ಅದಕ್ಕೆ ಕರೆಗಳು ಬರುತ್ತಿದ್ದು, ಅದಕ್ಕೆ ಸ್ಪಂದಿಸಿ ನೆರವು ಒದಗಿಸಲಾಗುತ್ತಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JayalalithaaಜಯಲಲಿತಾತಮಿಳುನಾಡುಬೆಂಗಳೂರುBengaluruTamil NaduChennai Floodಚೆನ್ನೈ ಪ್ರವಾಹflood Relief Fundಪ್ರವಾಹ ಪರಿಹಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


