ಪರಿಹಾರ ಸಾಮಗ್ರಿಗಳ ಮೇಲೆ 'ಅಮ್ಮ' ಚೀಟಿ ಅಂಟಿಸಲು ಒತ್ತಾಯ
ತಮಿಳುನಾಡು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ, ಸಾರ್ವಜನಿಕರ ಸಹಕಾರದಿಂದ ದೇಶದ ವಿವಿದೆಡೆಗಳಿಂದ ಪರಿಹಾರ ಸಾಮಗ್ರಿಗಳು ಚೆನ್ನೈ ಮತ್ತು ಇತರ

ಬೆಂಗಳೂರು: ತಮಿಳುನಾಡು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ, ಸಾರ್ವಜನಿಕರ ಸಹಕಾರದಿಂದ ದೇಶದ ವಿವಿದೆಡೆಗಳಿಂದ ಪರಿಹಾರ ಸಾಮಗ್ರಿಗಳು ಚೆನ್ನೈ ಮತ್ತು ಇತರ ಪ್ರದೇಶಗಳಿಗೆ ಸರಬರಾಜಾಗುತ್ತಿರುವ ಸಮಯದಲ್ಲಿ ತುರ್ತು ಪರಿಸ್ಥಿಯನ್ನು ಲೆಕ್ಕಿಸದೆ ಕೆಲವರು ವಾಹನಗಳನ್ನು ತಡೆಗಟ್ಟಿ ಪರಿಹಾರ ಸಾಮಗ್ರಿಗಳ ಮೇಲೆ ಮುಖ್ಯಮಂತ್ರಿ ಜಯಲಲಿತಾ ಅವರ ಫೋಟೊ ಅಂಟಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹಲವರು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ದೂರಿದ್ದಾರೆ. ಈ ಕಾರ್ಯಕ್ಕೆ ನಿರಾಕರಿಸಿದರೆ ಪರಿಹಾರ ಸಾಮಗ್ರಿಗಳನ್ನು ಒಳಗೆ ಹೋಗಲು ಬಿಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಹೀಗೆ ದೂರಿರುವ ಹಲವಾರು ಜನರಲ್ಲಿ ವಿನೋದ್ ದ್ವಾರ್ಕಾನಿ ಎಂಬುವವರು ಫೇಸ್ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ.
"ಕೊಯಂಬತ್ತೂರಿನಿಂದ ಬರುತ್ತಿದ್ದ ೬ ಟ್ರಕ್ಕುಗಳನ್ನು ಶ್ರೀಪೆರಂಬುದೂರಿನಲ್ಲಿ ತಡೆದು ನಿಲ್ಲಿಸಲಾಯಿತು ಮತ್ತು ಎಲ್ಲ ಪರಿಹಾರ ಸಾಮಗ್ರಿಗಳ ಚೀಲದ ಮೇಲೆ ಅಮ್ಮ ಚೀಟಿಗಳನ್ನು ಅಂಟಿಸಲಾಯಿತು.
"ಇದು ನನಗೆ ಇನ್ನಿಲ್ಲದ ಕೋಪ ತರಿಸಿದೆ. ಕಡಲೂರಿಗೆ ತೆರಳಿನ್ನ ನನ್ನ ಗೆಳೆಯರನ್ನು ಹಲವಾರು ಗೂಂಡಾಗಳು ತಡೆದು ಪರಿಹಾರ ಸಾಮಗ್ರಿಗಳ ಮೇಲೆ ಅಮ್ಮ ಸ್ಟಿಕರ್ ಅಂಟಿಸಿದ್ದಾರೆ. ಇದು ನಾಚಿಕೆಗೇಡಿನ ರಾಜಕೀಯ. ಇದರ ಬಗ್ಗೆ ಮಾತನಾಡುವುದಕ್ಕೂ ನಾಚಿಕೆಯಾಗುತ್ತಿದೆ. ಆದರೆ ಒಳಗೆ ಸಿಕ್ಕಿಹಾಕಿಕೊಂಡಿರುವ ಜನ ಇದೆಲ್ಲಾ ಅಮ್ಮನ ಕೆಲಸ ಎಂದು ಕುರುಡಾಗಿ ನಂಬುತ್ತಾರೆ." ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


