ಪ್ರಧಾನ ಸುದ್ದಿ

ದೇವನಹಳ್ಳಿ ಬಳಿ ಬಾಹ್ಯಾಕಾಶ ವಿವಿ ಸ್ಥಾಪನೆಗೆ ಚಿಂತನೆ

ವೈಮಾನಿಕ ಕ್ಷೇತ್ರದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಬೇಕಿದ್ದು ದೇವನಹಳ್ಳಿ ಸಮೀಪ ಬಾಹ್ಯಾಕಾಶ ವಿವಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮೂಲಸೌಕರ್ಯ ಸಚಿವ ಆರ್.ರೋಷನ್ ಬೇಗ್ ತಿಳಿಸಿದರು...

ದೇವನಹಳ್ಳಿ ಬಳಿ ಬಾಹ್ಯಾಕಾಶ ವಿವಿ ಸ್ಥಾಪನೆಗೆ ಚಿಂತನೆ
ಸಚಿವ ರೋಷನ್ ಬೇಗ್
Published On :

ಬೆಂಗಳೂರು: ವೈಮಾನಿಕ ಕ್ಷೇತ್ರದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿಗೊಳ್ಳಬೇಕಿದ್ದು ದೇವನಹಳ್ಳಿ ಸಮೀಪ ಬಾಹ್ಯಾಕಾಶ ವಿವಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮೂಲಸೌಕರ್ಯ  ಸಚಿವ ಆರ್.ರೋಷನ್ ಬೇಗ್ ತಿಳಿಸಿದರು.

ದೇಶದ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣಾ ಸಂಘಟನೆ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ  ವಸ್ತುಗಳ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಶೀಘ್ರ ಅನುಮತಿ ನಿರೀಕ್ಷೆ: ದೇವನಹಳ್ಳಿ ಬಳಿ ವಿವಿ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆಸಲಾಗುವುದು. ಭಾರತದಲ್ಲಿ ನಾನಾ ವಿಮಾನ ಮತ್ತು ಹೆಲಿಕಾಪ್ಟರ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.  ವೈಮಾನಿಕ ಕ್ಷೇತ್ರದಲ್ಲಿ ಮೂಲ ಸೌಕರ್ಯ ವೃದ್ಧಿಗೆ ಪೂರಕವಾಗುವಂತೆ ರಾಜ್ಯದಲ್ಲಿ ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಎಚ್ಎಎಲ್, ಬಿಇಎಲ್ ಹಾಗೂ ಇಸ್ರೊದಂತಹ ಸಂಸ್ಥೆಗಳು  ಗಣನೀಯವಾಗಿ ಕೊಡುಗೆ ನೀಡುತ್ತಿದ್ದು, ಉತ್ತಮ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಭಾರತದ ವೈಮಾನಿಕ ಕ್ಷೇತ್ರದ ರಾಜಧಾನಿ ಇದ್ದಂತೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ  ವೈಮಾನಿಕ ನೀತಿ ಜಾರಿಗೆ ತಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೈಗಾರಿಕೆ ಮತ್ತು ಉದ್ಯಮಗಳ ಸ್ಥಾಪನೆಗೆ ರು.50  ಕೋಟಿ ಬಿಡುಗಡೆಗೆ ಶೀಘ್ರದಲ್ಲಿ ಅನುಮತಿ  ದೊರೆಯಲಿದೆ ಎಂದರು.

ವೈಮಾನಿಕ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಇದರಿಂದ ದೇಶದ ಅರ್ಥಿಕತೆ ಅಭಿವೃದ್ಧಿಯಾಗುತ್ತಿದೆ. 65 ಮಿಲಿಯನ್ ವಿದೇಶಿ ಪ್ರಯಾಣಿಕರು ದೇಶಕ್ಕೆ ಬರುತ್ತಿದ್ದಾರೆ. ಸರಕು ಸಾಗಾಣಿಕೆಗೆ 1.80  ಮಿಲಿಯನ್ ಟನ್‍ಗೆ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಚ್ಎಎಲ್‍ನ ಆದಾಯ ಶೇ.20ರಷ್ಟು ಹೆಚ್ಚಿದೆ.
-ಕಾವೇರಿ ರಂಗನಾಥನ್ ಸಿಇಓ ಎಚ್‍ಎಎಲ್

1,000 ಎಕರೆ ಭೂಮಿ

ಮೂಲಭೂತ ಸೌಕರ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ ಮಾತನಾಡಿ, 2008ರಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ವಿಲ್ದಾಣ ಆರಂಭವಾಯಿತು. ಅಂದಿಗೂ ಇಂದಿಗೂ ಹೋಲಿಕೆ ಮಾಡಿದರೆ, ನಗರ ಮಿತಿಮೀರಿ ಬೆಳೆದಿದೆ. ಲಕ್ಷಗಟ್ಟಲೇ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ, ಹಾಗಾಗಿ ಮತ್ತಷ್ಟು ಸೌಲಭ್ಯ ಕಲ್ಪಿಸಲು ನಿಲ್ದಾಣದಲ್ಲಿ 2ನೇ ರನ್‍ವೇ  ಆರಂಭವಾಗಿದೆ. ಶೀಘ್ರದಲ್ಲಿ ಟರ್ಮಿನಲ್ ವೇ ಪ್ರಾರಂಭಿಸಲಾಗುವುದು ಎಂದರು. ಎಂಆರ್‍ಒ ಅಸೋಸಿಯೇಷನ್ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಪುಲಕ್ ಸೇನ್, ಎಐಇಎಸ್ಎಲ್‍ನ ಆಶಿಷ್ ದಾಸ್‍ಗುಪ್ತಾ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.