"ಪಟೇಲ್" ಗಿರಿ: ಗುಜರಾತ್‍ನ ವಿವಿಧೆಡೆ ಗಲಭೆ, ಹಿಂಸಾಕೃತ್ಯ: 9ಕ್ಕೇರಿದ ಸಾವಿನ ಸಂಖ್ಯೆ
ಪಟೇಲ್ ಸಮುದಾಯದ ಮೀಸಲು ಗದ್ದಲದಿಂದಾಗಿ ಗುಜರಾತ್ ಹೊತ್ತಿಉರಿಯತೊಡಗಿದೆ. ಒಬಿಸಿ ಕೋಟಾಗೆ ಆಗ್ರಹಿಸಿ...

ಅಹಮದಾಬಾದ್: ಪಟೇಲ್ ಸಮುದಾಯದ ಮೀಸಲು ಗದ್ದಲದಿಂದಾಗಿ ಗುಜರಾತ್ ಹೊತ್ತಿಉರಿಯತೊಡಗಿದೆ. ಒಬಿಸಿ ಕೋಟಾಗೆ ಆಗ್ರಹಿಸಿ ಮಂಗಳವಾರ ಬೃಹತ್ ರ್ಯಾಲಿ ನಡೆಸಿದ ಬೆನ್ನಲ್ಲೇ ಪಟೇಲ್ ಸಮುದಾಯದ ಪ್ರತಿಭಟನೆಯು ಹಿಂಸಾರೂಪ ತಾಳಿದೆ.
ರ್ಯಾಲಿಯ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್(21)ನನ್ನು ಪೊಲೀಸರು ವಶಕ್ಕೆ ಪಡೆದಿದ್ದೇ ತಡ, ಇಡೀ ಸಮುದಾಯ ರೊಚ್ಚಿಗೆದ್ದು ಗುಜರಾತ್‍ನಲ್ಲಿ ಹಿಂಸೆಯ ಕಿಡಿ ಹೊತ್ತಿಸಿದೆ. ಬುಧವಾರ ನಡೆದ ವ್ಯಾಪಕ ಹಿಂಸಾಚಾರದ ವೇಳೆ 9 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುಜರಾತ್‍ಗೆ ಸುಮಾರು 5 ಸಾವಿರ ಅರೆಸೇನಾ ಪಡೆ ಸಿಬ್ಬಂದಿಯನ್ನು ರವಾನಿಸಿದೆ. ಇದೇ ವೇಳೆ, ಹಿಂಸೆ ಬಿಟ್ಟು ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಪ್ರತಿಭಟನಾಕಾರರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಬೆಳಗ್ಗೆ ಗುಜರಾತ್ ಸಿಎಂ ಆನಂದಿಬೆನ್ ಪಟೇಲ್‍ರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯನ್ನು ತಹಬಂದಿಗೆ
ತರಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದಿದ್ದಾರೆ. ಬಂದ್ ವೇಳೆ ಹಿಂಸೆ: ಮಂಗಳವಾರ ಪಟೇಲ್ ಸಮುದಾಯದ ಬೃಹತ್ ರ್ಯಾಲಿ ಬಳಿಕ ಪೊಲೀಸರು ಹಾರ್ದಿಕ್ ಪಟೇಲ್‍ರನ್ನು ಬಂಧಿಸಿದ್ದರು. ಅವಧಿಗಿಂತ ಹೆಚ್ಚು ಸಮಯ ಪ್ರತಿಭಟನಾ ಸ್ಥಳದಲ್ಲಿದ್ದ ಕಾರಣ ಅವರನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದರು.
ಜತೆಗೆ, ಲಾಠಿಚಾರ್ಜ್ ಕೂಡ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಹಾರ್ದಿಕ್, ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ
ಕೈಗೊಳ್ಳಲು ಸರ್ಕಾರಕ್ಕೆ 36 ಗಂಟೆಗಳ ಗಡುವು ನೀಡಿದ್ದರು. ಜತೆಗೆ, ಬುಧವಾರ ಬಂದ್‍ಗೂ ಕರೆ ನೀಡಿದ್ದರು. ಅದರಂತೆ, ಬೀದಿಗಿಳಿದ ಪಟೇಲ್ ಸಮುದಾಯವು ಗುಜರಾತ್
ನಾದ್ಯಂತ ಅನೇಕ ಕಡೆ 100ಕ್ಕೂ ಹೆಚ್ಚು ಬಸ್ ಗಳು, ಬೈಕ್‍ಗಳು, ಇನ್ನಿತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಸರ್ಕಾರ, ರಾಜ್ಯದ ಹಲವೆಡೆ ಕರ್ಫ್ಯೂ
ಜಾರಿ ಮಾಡಿದೆ.
ಅಹಮದಾಬಾದ್, ಸೂರತ್ ಮತ್ತು ಮೆಹಸಾನಾದಲ್ಲಿ ಸೇನೆಯ ತಲಾ ಎರಡು ಕಂಪನಿಗಳನ್ನು ನಿಯೋಜನೆ ಮಾಡಲಾಗಿದೆ. ಇದಕ್ಕೂ ಮೊದಲು ಮಾತನಾಡಿದ್ದ ಹಾರ್ದಿಕ್ ಪೊಲೀಸರು ಭಯೋತ್ಪಾಕರಂತೆ ನಡೆಸಿಕೊಂಡರು. ಸ್ವಲ್ಪವೂ ಕರುಣೆ ತೋರದೆ ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದರು.
ಗಾಂಧಿ ಮತ್ತು ಸರ್ದಾರ್ ಪಟೇಲ್‍ರಂತಹ ಮಹಾತ್ಮರ ನಾಡಲ್ಲಿ ಹಿಂಸೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ನನ್ನ ಎಲ್ಲ ಗುಜರಾತಿ ಸೋದರರು ಮತ್ತು ಸೋದರಿಯರೇ, ದಯವಿಟ್ಟು ಹಿಂಸೆಯನ್ನು ನಿಲ್ಲಿಸಿ. `ಶಾಂತಿ'ಯೇ ನಮ್ಮೆಲ್ಲರ ಏಕೈಕ ಮಂತ್ರವಾಗಿರಲಿ.
-ನರೇಂದ್ರ ಮೋದಿ ಪ್ರಧಾನಿ
ಹಿಂಸೆಗೆ ಪೊಲೀಸರೇ ಕಾರಣ. ನಮ್ಮದು ಅಹಿಂಸಾತ್ಮಕ ಪ್ರತಿಭಟನೆಯಾಗಿತ್ತು.ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ನಮ್ಮ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ.
-ಹಾರ್ದಿಕ್ ಪಟೇಲ್, ಪ್ರತಿಭಟನೆಯ ನೇತೃತ್ವ ವಹಿಸಿದ ಯುವಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


