ಬಿಜೆಪಿ ನಾಯಕರ ನಿವಾಸಕ್ಕೆ ಮುತ್ತಿಗೆ
ಕಳಸಾಬಂಡೂರಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿಗೆ ರಾಜ್ಯದ ನಿಲುವನ್ನು ಸರಿಯಾಗಿ ಪ್ರತಿಪಾದಿಸಲಿಲ್ಲ ಎಂದು ಆರೋಪಿಸಿ ಹೋರಾಟಗಾರರು ಮತ್ತು ರೈತರು ಬುಧವಾರ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರಾದ..

ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿಗೆ ರಾಜ್ಯದ ನಿಲುವನ್ನು ಸರಿಯಾಗಿ ಪ್ರತಿಪಾದಿಸಲಿಲ್ಲ ಎಂದು ಆರೋಪಿಸಿ ಹೋರಾಟಗಾರರು
ಮತ್ತು ರೈತರು ಬುಧವಾರ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್, ಶಿವಕುಮಾರ ಉದಾಸಿ ನಿವಾಸ, ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು.
ಜತೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‍ಗಳಲ್ಲಿ ಬಂದಿದ್ದ ಧಾರವಾಡ ಜಿಲ್ಲೆಯ ಸಾವಿರಾರು ರೈತರು ಇಲ್ಲಿನ ಬಾದಾಮಿ ನಗರದ ಶೆಟ್ಟರ್ ಮನೆ, ಭವಾನಿನಗರದ ಜೋಶಿ ಮನೆಗೆಸುಮಾರು ಎರಡೂವರೆ ತಾಸು ಮುತ್ತಿಗೆ ಹಾಕಿದ್ದರು. ಪೊಲೀಸರ ಬಿಗಿ ಕಾವಲು ಭೇದಿಸಿ ಚಪ್ಪಲಿಗಳನ್ನು ತೂರಾಡಿದರು. `ಕಳಸಾಬಂಡೂರಿ ಯೋಜನೆ, ಮಹ
ದಾಯಿ ಹೆಸರು ಹೇಳಿ ನೀವು ಮುಖ್ಯ ಮಂತ್ರಿ, ಸಂಸದರಾಗಿದ್ದೀರಿ. ಯೋಜನೆಗೆ ನ್ಯಾಯ ಕೊಡಿಸಲು ನಿಮ್ಮಿಂದ ಆಗಿಲ್ಲ. ನಮ್ಮ ವಿಶ್ವಾಸಕ್ಕೆ ನೀವು ದ್ರೋಹ ಬಗೆದಿದ್ದೀರಿ. ತಕ್ಷಣ ರಾಜಿನಾಮೆ ನೀಡಿ.
ಇಲ್ಲದಿದ್ದರೆ ರಾಜಿನಾಮೆ ನೀಡುವವರೆಗೆ ನಿಮ್ಮ ಮನೆಗಳ ಎದುರು ಆಮರಣ ಉಪವಾಸ ಮಾಡುತ್ತೇವೆ' ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಗೋವಾ ಬಸ್ಸಿಗೆ ಬೆಂಕಿ: ಬೆಳಗ್ಗೆ ಗೋವಾ ದಿಂದ ನಗರಕ್ಕೆ ಆಗಮಿಸಿದ ಗೋವಾ ಸರ್ಕಾರದ ಬಸ್ಸಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಭೇಟಿ ಬಳಿಕದ ಬೆಳವಣಿಗೆಯಲ್ಲಿ
ರಾಜ್ಯ ಸರ್ಕಾರದ 4 ಬಸ್ಸುಗಳಿಗೆ ಬೆಂಕಿ, 15ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಸಿಟ್ಟು ಪ್ರದರ್ಶಿಸಿದ್ದ ರೈತರ ಕೆಂಗಣ್ಣು ಬುಧವಾರ ಗೋವಾ ಬಸ್ಸಿನ ಮೇಲೆ ಬಿದ್ದಿತ್ತು.
ಯೋಜನೆಗಾಗಿ ರಾಜ್ಯ ಸರ್ಕಾರ ಏನು ಮಾಡಬೇಕಾಗಿದೆಯೋ ಅದನ್ನು ಮಾಡಿದೆ. ಆದರೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅವರು ಕಣಿವೆ ರಾಜ್ಯದ ಸಿಎಂಗಳ ಸಭೆ ಕರೆದಿಲ್ಲ. ಹೀಗಾಗಿ, ಆಯಾ ರಾಜ್ಯಗಳ ಪ್ರತಿಪಕ್ಷಗಳ ನಾಯಕರ ಮನವೊಲಿಸುವ ಪ್ರಶ್ನೆ ಹೇಗೆ ಉದ್ಭವವಾಗುತ್ತದೆ? ಅಂತಾರಾಜ್ಯ ಜಲವಿವಾದಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


